ನವರಾತ್ರಿಯಲ್ಲಿ ಒಂಬತ್ತು ಬಣ್ಣಗಳ ಪ್ರಾಮುಖ್ಯತೆ:  ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದಿನಿಂದ ಸೆಪ್ಟೆಂಬರ್ 26, ಸೋಮವಾರದಿಂದ ನವರಾತ್ರಿ ಆರಂಭವಾಗಿದೆ. ನವರಾತ್ರಿ ಹೆಸರೇ ಸೂಚಿಸುವಂತೆ ಒಂಬತ್ತು ದಿನಗಳ ಹಬ್ಬ. ನವರಾತ್ರಿಯ ಹಬ್ಬವು ತಾಯಿ ದುರ್ಗೆಯನ್ನು ಪೂಜಿಸುವ ಜೊತೆಗೆ ಆರಾಧನೆಯ ಹಬ್ಬವಾಗಿದೆ. ಈ 9 ದಿನಗಳಲ್ಲಿ ಜನರು ದುರ್ಗಾದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ. ನವರಾತ್ರಿಯಲ್ಲಿ ನವ ದಿನವೂ ಒಂದೊಂದು ಬಣ್ಣಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಬಣ್ಣವೂ ಸಹ ದುರ್ಗಾಮಾತೆಯ ಒಂದೊಂದು ರೂಪವನ್ನು ಬಣ್ಣಿಸುತ್ತದೆ. ನವರಾತ್ರಿಯ ಈ 9 ದಿನಗಳು ದುರ್ಗಾ, ಮಾತಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ದೇವಿಯ ಒಂಬತ್ತು ರೂಪಗಳ ಆರಾಧನೆ ನಡೆಯುತ್ತದೆ.


COMMERCIAL BREAK
SCROLL TO CONTINUE READING

ನವರಾತ್ರಿಯಲ್ಲಿ ತಾಯಿ ದುರ್ಗೆಯ ವಿವಿಧ ರೂಪಗಳನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಸಕಲ ದುಃಖಗಳು ಕೊನೆಗೊಂಡು ತಾಯಿಯ ವಿಶೇಷ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ನವರಾತ್ರಿಯ ಪ್ರತಿ ದಿನವೂ ದುರ್ಗಾ ಮಾತೆಯ ಒಂದೊಂದು ರೂಪಕ್ಕೆ ಮೀಸಲಾಗಿದೆ. ಇದರೊಂದಿಗೆ, ನವರಾತ್ರಿಯ 9 ದಿನಗಳು ಈ 9 ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ  ದುರ್ಗಾಮಾತೆಯ ವಿಶೇಷ ಕೃಪೆಗೆ ಪಾತ್ರರಾಗಬಹುದು ಎಂದು ಬಣ್ಣಿಸಲಾಗುತ್ತದೆ. ನವರಾತ್ರಿಯಲ್ಲಿ ಪ್ರತಿ ದಿನವೂ ದುರ್ಗಾಮಾತೆಯ ವಿಶೇಷ ರೂಪಕ್ಕೆ ಸಂಬಂಧಿಸಿದ ಬಣ್ಣದ ಉಡುಪು ಧರಿಸುವುದರಿಂದ ಜಾತಕದ ಗ್ರಹಗಳು ಬಲಗೊಳ್ಳುತ್ತವೆ ಮತ್ತು ದುರ್ಗಾ ಮಾತೆಯೂ ಸಂತೋಷಗೊಂಡು ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂದು ನಂಬಲಾಗಿದೆ. 


ನವರಾತ್ರಿಯ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು:-
ನವರಾತ್ರಿ ಮೊದಲ ದಿನ (ಶೈಲಪುತ್ರಿ) :
ನವರಾತ್ರಿಯ ಮೊದಲ ದಿನವನ್ನು ಮಾತಾ ಶೈಲಪುತ್ರಿಗೆ ಸಮರ್ಪಿಸಲಾಗಿದೆ. ಈ ದಿನ ಬಿಳಿ ಬಣ್ಣದ ಉಡುಪು ಧರಿಸುವುದರಿಂದಇದು ಸಂತೋಷ, ಶಾಂತಿ, ಏಕಾಗ್ರತೆ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.  


ಇದನ್ನೂ ಓದಿ- ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ಪ್ರಾಪ್ತಿಯ ರಹಸ್ಯ


ನವರಾತ್ರಿ ಎರಡನೇ ದಿನ (ಬ್ರಹ್ಮ ಚಾರಿಣಿ) : ನವರಾತ್ರಿಯ ಎರಡನೇ ದಿನವನ್ನು ತಾಯಿ ಬ್ರಹ್ಮಚಾರಿಣಿಗೆ ಸಮರ್ಪಿಸಲಾಗಿದೆ. ತಾಯಿ ಬ್ರಹ್ಮಚಾರಿಣಿಯನ್ನು ಮೆಚ್ಚಿಸಲು ಈ ದಿನ ಕೆಂಪು ಬಣ್ಣದ ವಸ್ತ್ರವನ್ನು ಧರಿಸಲು ಸೂಚಿಸಲಾಗುತ್ತದೆ. ಈ ದಿನದಂದು ಕೆಂಪು ವಸ್ತ್ರವನ್ನು ಧರಿಸುವುದರಿಂದ ನೀವು ಕೈ ಹಾಕಿದ ಕೆಲಸಗಳಲ್ಲಿ ವಿಜಯ ನಿಮ್ಮದಾಗಲಿದೆ ಎಂದು ಹೇಳಲಾಗುತ್ತದೆ.


ನವರಾತ್ರಿ ಮೂರನೇ ದಿನ (ಚಂದ್ರಘಂಟಾ) : ನವರಾತ್ರಿಯ ಮೂರನೇ ದಿನವನ್ನು ತಾಯಿ ಚಂದ್ರಘಂಟಾಗೆ ಸಮರ್ಪಿಸಲಾಗುತ್ತದೆ. ಆ ದಿನದಂದು ತಾಯಿಯನ್ನು ಮೆಚ್ಚಿಸಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ.  ಇಂದು ನೀಲಿ ವಸ್ತ್ರವನ್ನು ಧರಿಸುವುದರಿಂದ ಎಲ್ಲಾ ರೀತಿಯ ಭಯದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. 


ನವರಾತ್ರಿ ನಾಲ್ಕನೇ ದಿನ (ಕೂಷ್ಮಾಂಡ): ನವರಾತ್ರಿಯ ನಾಲ್ಕನೇ ದಿನದಂದು ಮಾತಾ ಕೂಷ್ಮಾಂಡವನ್ನು ಪೂಜಿಸಲಾಗುತ್ತದೆ. ಇಂದು ಹಳದಿ ಬಣ್ಣದ ವಸ್ತ್ರ ಧರಿಸುವುದು ತುಂಬಾ ಶುಭ. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. 


ನವರಾತ್ರಿ ಐದನೇ ದಿನ (ಸ್ಕಂದಮಾತೆ):  ನವರಾತ್ರಿಯ ಐದನೇ ದಿನವನ್ನು ತಾಯಿ ಸ್ಕಂದಮಾತೆಗೆ ಸಮರ್ಪಿಸಲಾಗಿದೆ. ಈ ದಿನ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿ. ಹಸಿರು ಜೀವನದಲ್ಲಿ ಪ್ರಗತಿಯ ಸಂಕೇತವಾಗಿದೆ.


ನವರಾತ್ರಿ ಆರನೇ ದಿನ (ಕಾತ್ಯಾಯನಿ): ನವರಾತ್ರಿಯ ಆರನೇ ದಿನವನ್ನು ಮಾತಾ ಕಾತ್ಯಾಯನಿಗೆ ಸಮರ್ಪಿಸಲಾಗಿದೆ. ಅವಳನ್ನು ಯುದ್ಧದ ದೇವತೆ ಎಂದು ಪರಿಗಣಿಸಲಾಗುತ್ತದೆ. ತಾಯಿಯ ಈ ರೂಪವು ರಾಕ್ಷಸ ಮಹಿಷಾಸುರನನ್ನು ಕೊಂದಿತು. ಕಂದು ಅಥವಾ ಬೂದು ಬಣ್ಣದ ಬಟ್ಟೆಗಳನ್ನು ಧರಿಸಿ. ಇದು ದುಶ್ಚಟಗಳು ಅಥವಾ ಕೆಟ್ಟ ಅಭ್ಯಾಸಗಳನ್ನು ತೊಡೆದುಹಾಕುತ್ತದೆ ಮತ್ತು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ- Dhanteras 2022: ಧಂತೇರಸ್‌ನಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿದರೆ ಎಂದಿಗೂ ಇರುವುದಿಲ್ಲ ಹಣದ ಕೊರತೆ


ನವರಾತ್ರಿ ಏಳನೇ ದಿನ (ಕಾಳರಾತ್ರಿ): ನವರಾತ್ರಿಯ ಏಳನೇ ದಿನದಂದು ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ತಾಯಿಯ ಈ ರೂಪವು ರಾಕ್ಷಸರ ನಾಶಕವಾಗಿದೆ. ಈ ದಿನ ಕಿತ್ತಳೆ ಬಣ್ಣದ ಉಡುಪು ಧರಿಸುವುದು ಮಂಗಳಕರ.  ಇದರಿಂದ ಜೀವನದಲ್ಲಿ ಸಂತೋಷ, ಸಂತೋಷ ಮತ್ತು ಸಕಾರಾತ್ಮಕತೆ ಹೆಚ್ಚಾಗುತ್ತದೆ. 
 
ನವರಾತ್ರಿ ಎಂಟನೇ ದಿನ (ಮಹಾಗೌರಿ): ನವರಾತ್ರಿಯ ಎಂಟನೇ ದಿನ ಮಾತಾ ಮಹಾಗೌರಿಗೆ ಮೀಸಲಾಗಿದೆ. ಈ ದಿನ ನೇರಳೆ ಬಣ್ಣದ ವಸ್ತ್ರ ಧಾರಣೆ ತುಂಬಾ ಮಂಗಳಕರ. ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿ ತಾಯಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ಧಿ ಆಗುವುದು ಎಂಬ ನಂಬಿಕೆ ಇದೆ. 


ನವರಾತ್ರಿ ಒಂಬತ್ತನೇ ದಿನ (ಸಿದ್ಧಿದಾತ್ರಿ):  ನವರಾತ್ರಿಯ ಕೊನೆಯ ಒಂಬತ್ತನೇ ದಿನವನ್ನು ಮಾತಾ ಸಿದ್ಧಿದಾತ್ರಿಗೆ ಸಮರ್ಪಿಸಲಾಗಿದೆ. ಈ ದಿನ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ತಾಯಿಯನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗಿ, ಸುಖ-ಶಾಂತಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ.


[[{"fid":"259059","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.