ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ಪ್ರಾಪ್ತಿಯ ರಹಸ್ಯ

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಥವಾ ಆಚರಣೆ ಪೂರ್ಣಗೊಳ್ಳುವುದಿಲ್ಲ. ಸಾಮಾನ್ಯವಾಗಿ ಹುಡುಗಿಯರು ಅಥವಾ ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ, ಮಹಿಳೆಯರು ತೆಂಗಿನಕಾಯಿಯನ್ನು ಏಕೆ ಒಡೆಯಬಾರದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Sep 23, 2022, 03:08 PM IST
  • ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ರಹಸ್ಯ
  • ಹುಡುಗಿಯರು ಅಥವಾ ಮಹಿಳೆಯರು ತೆಂಗಿನಕಾಯಿಯನ್ನು ಏಕೆ ಒಡೆಯಬಾರದು ಎಂದು ಹೇಳಲಾಗುತ್ತದೆ
  • ಆದರೆ, ಮಹಿಳೆಯರು ತೆಂಗಿನಕಾಯಿಯನ್ನು ಏಕೆ ಒಡೆಯಬಾರದು ಎಂದು ನಿಮಗೆ ತಿಳಿದಿದೆಯೇ?
ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ಪ್ರಾಪ್ತಿಯ ರಹಸ್ಯ
Coconut Upay

ತೆಂಗಿನಕಾಯಿ ಉಪಾಯ: ತೆಂಗಿನಕಾಯಿಯನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲದೆ ಪೂಜೆಗೂ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಥವಾ ಆಚರಣೆ ಪೂರ್ಣಗೊಳ್ಳುವುದಿಲ್ಲ. ಜಟಾ ಮತ್ತು ನೀರಿನೊಂದಿಗೆ ತೆಂಗಿನಕಾಯಿಯನ್ನು ಯಾವಾಗಲೂ ಪೂಜೆಗೆ ಇಡಲಾಗುತ್ತದೆ. ಪೂಜೆ ಮುಗಿದ ನಂತರ ಆ ತೆಂಗಿನಕಾಯಿಯನ್ನು ಒಡೆದು ಪ್ರಸಾದವಾಗಿ ಹಂಚಲಾಗುತ್ತದೆ. ಇಲ್ಲವೇ, ಸಿಹಿ ಮಾಡಿ ನೀಡಲಾಗುತ್ತದೆ. ಸಾಮಾನ್ಯವಾಗಿ ಹುಡುಗಿಯರು ಅಥವಾ ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು.  ಆದರೆ, ಮಹಿಳೆಯರು ತೆಂಗಿನಕಾಯಿಯನ್ನು ಏಕೆ ಒಡೆಯಬಾರದು ಎಂದು ನಿಮಗೆ ತಿಳಿದಿದೆಯೇ? ಇದರ ಹಿಂದೆ ಒಂದು ಕುತೂಹಲಕಾರಿ ಅಂಶವಿದೆ, ಹಾಗೆಯೇ ತೆಂಗಿನಕಾಯಿಯಲ್ಲಿ ಸಂತಾನ ಪ್ರಾಪ್ತಿಯ ರಹಸ್ಯವೂ ಅಡಗಿದೆ ಎಂದು ಹೇಳಲಾಗುತ್ತದೆ. ಏನೀ ರಹಸ್ಯ ತಿಳಿಯೋಣ...

ಹೆಂಗಸರು ತೆಂಗಿನಕಾಯಿ ಏಕೆ ಒಡೆಯಬಾರದು?
ಹಿಂದೂ ಧರ್ಮಗ್ರಂಥಗಳಲ್ಲಿ ತೆಂಗಿನಕಾಯಿಯನ್ನು ಪುರುಷನ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎಂದು ಹೇಳಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ತೆಂಗಿನಕಾಯಿ ಒಂದು ಬೀಜವಾಗಿದೆ ಮತ್ತು ಮಹಿಳೆಯು ಬೀಜದ ರೂಪದಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಅದಕ್ಕಾಗಿಯೇ ಮಹಿಳೆಯರು ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ತೆಂಗಿನಕಾಯಿ ಒಡೆಯುವ ಮಹಿಳೆಯರು ಸಂತಾನ ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ-  ಕೇವಲ 2 ರೂಪಾಯಿ ಕರ್ಪೂರ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು

ತೆಂಗಿನಕಾಯಿಯಲ್ಲಿ ಸಂತಾನದ ಗುಟ್ಟು :
ತೆಂಗಿನಕಾಯಿ ಒಡೆಯುವಾಗ ಅದರಲ್ಲಿ ನೀರು ಬರುತ್ತದೆ ಮತ್ತು ಹಲವು ಬಾರಿ ಅದರೊಂದಿಗೆ ಬಿಳಿ ಬಣ್ಣದ ಬೀಜವೂ ಕಂಡು ಬರುತ್ತದೆ. ಇದನ್ನು ಸಂತಾನೋತ್ಪತ್ತಿಯ ಬೀಜ ಎಂದು ಕರೆಯಲಾಗುತ್ತದೆ. ಮಗುವನ್ನು ಹೊಂದಲು ಬಯಸುವ ಮಹಿಳೆ ಈ ಬೀಜವನ್ನು ತಿನ್ನಬೇಕು. ಇದರಿಂದ ಆಕೆಗೆ ಶೀಘ್ರದಲ್ಲೇ ಸಂತಾನ ಯೋಗ ಪ್ರಾಪ್ತಿಯಾಗಿ ಅವರ ಆಸೆ ಶೀಘ್ರದಲ್ಲೇ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. 

ಇದನ್ನೂ ಓದಿ-  Surya Grahan 2022: ದೀಪಾವಳಿಯ ಮರುದಿನವೇ ವರ್ಷದ ಕೊನೆಯ ಸೂರ್ಯಗ್ರಹಣ, ಈ ರಾಶಿಯವರು ಜಾಗರೂಕರಾಗಿರಿ

ಆದರೆ ಈ ತೆಂಗಿನ ಬೀಜವನ್ನು ತೆಗೆದುಕೊಳ್ಳುವಾಗ, ಈ ಬೀಜವನ್ನು ಅಗಿಯಬಾರದು ಎಂಬುದನ್ನು ನೆನಪಿನಲ್ಲಿಡಿ. ಬದಲಿಗೆ ನೇರವಾಗಿ ನೀರಿನೊಂದಿಗೆ ನುಂಗಬೇಕು. ಅಲ್ಲದೆ, ಅದನ್ನು ಸೇವಿಸುವಾಗ ಯಾರೂ ನೋದಬಾರದು ಎಂಬುದನ್ನು  ನೆನಪಿನಲ್ಲಿಡಿ. ಆದ್ದರಿಂದ, ನೀವು ತೆಂಗಿನಕಾಯಿಯನ್ನು ಒಡೆಯುವಾಗ, ನೀವು ಅದರ ಬೀಜವನ್ನು ತೆಗೆದು ಮಗುವನ್ನು ಹೊಂದಲು ಬಯಸುವ ಮಹಿಳೆಗೆ ನೀಡಬೇಕು. ಇದರಿಂದ ಸಂತಾನಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಶೀಘ್ರದಲ್ಲೇ ಅವರ ಆಸೆ ಈಡೇರಲಿದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News