ಬೆಂಗಳೂರು : 2023 ವರ್ಷ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ.  2022ರಲ್ಲಿ ಪ್ರೀತಿ ಪ್ರೇಮವನ್ನು ಜೀವನದಲ್ಲಿ ಎದುರು ನೋಡುತ್ತಿದ್ದವರು, ಸಂಗಾತಿಯನ್ನು ಅರಸುತ್ತಿದ್ದವರ ನಿರೀಕ್ಷೆ ಹೊಸ ವರ್ಷದಲ್ಲಿಯಾದರೂ ಈಡೇರಲಿ ಎಂದು ಬಯಸುವುದು ಸಹಜ.   ವಾರ್ಷಿಕ ಪ್ರೇಮ ಜಾತಕದ ಪ್ರಕಾರ, 2023 ರ ವರ್ಷವು 5 ರಾಶಿಯವರಿಗೆ ಅದೃಷ್ಟ ತರುತ್ತದೆ ಎನ್ನಲಾಗಿದೆ. ಈ ರಾಶಿಯವರು ತಾವು ಬಯಸುವ ಸಂಗಾತಿಯನ್ನು ಪಡೆಯುತ್ತಾರೆ. ಇವರಿಗೆ ವಿವಾಹ ಯೋಗ ಕೂಡಿ ಬರಲಿದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾರ್ಷಿಕ ಪ್ರೇಮ ಜಾತಕ 2023 :
ಮೇಷ ರಾಶಿ : 2023 ರಲ್ಲಿ ಮೇಷ ರಾಶಿಯ ಜನರ ಪ್ರೇಮ ಜೀವನ, ವೈವಾಹಿಕ ಜೀವನ ಅದ್ಬುತವಾಗಿರಲಿದೆ. ತಮ್ಮ ಸಂಗಾತಿಯೊಂದಿಗಿನ ಸಂಬಂಧ  ಗಟ್ಟಿಯಾಗುತ್ತದೆ. ಅವಿವಾಹಿತ ಯುವಕರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಏಪ್ರಿಲ್ ಮತ್ತು ಆಗಸ್ಟ್ ನಡುವಿನ ಸಮಯವು ವಿಶೇಷವಾಗಿ ಮಂಗಳಕರವಾಗಿರಲಿದೆ. 


ಇದನ್ನೂ ಓದಿ : Brahma Muhurtham: ಇಷ್ಟಾರ್ಥಗಳನ್ನು ನಿಮಿಷಗಳಲ್ಲಿ ಸಿದ್ಧಿಸುವಂತೆ ಮಾಡುತ್ತೆ ಈ ಸಮಯದಲ್ಲಿ ಮಾಡುವ ಪೂಜೆಗಳು


ವೃಷಭ ರಾಶಿ : ಪ್ರೇಮ ಜೀವನ ಉತ್ತಮವಾಗಿರುತ್ತದೆ. ದಂಪತಿಗಳ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಅವಿವಾಹಿತರಿಗೆ, ಜುಲೈ ತಿಂಗಳ ಒಳಗೆ ವಿವಾಹ ಯೋಗ ಕೂಡಿ ಬರುವುದು. 


ಸಿಂಹ ರಾಶಿ : ಪ್ರೇಮ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ.  ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮದುವೆಗೆ ಹಿರಿಯರ ಒಪ್ಪಿಗೆ ಸಿಗುತ್ತದೆ. ಸಂಬಂಧದ ನಡುವಿನ ಕಹಿ ದೂರವಾಗಿ ಸಂಬಂಧ ಗಟ್ಟಿಯಾಗುತ್ತದೆ. ಒಂಟಿಯಾಗಿರುವವರ ಬಾಳಲ್ಲಿ 2023 ರ ಅಂತ್ಯದ ವೇಳೆಗೆ ಸಂಗಾತಿಯ ಪ್ರವೇಶವಾಗುವ ಸಾಧ್ಯತೆ ಇರುತ್ತದೆ. 


ವೃಶ್ಚಿಕ ರಾಶಿ : 2023 ರ ಆರಂಭದಿಂದ ಪ್ರೇಮ ಜೀವನ ಅದ್ಭುತವಾಗಿರುತ್ತದೆ. ಅವಿವಾಹಿತರಿಗೆ ಮದುವೆಯಾಗುವುದು. ವಧು ಅಥವಾ ವರನ ಹುಡುಕಾಟದಲ್ಲಿರುವವರ ಹುಡುಕಾಟ ಕೊನೆಯಾಗುವುದು. ವೈವಾಹಿಕ ಜೀವನಕ್ಕೂ ವರ್ಷವು ಮಂಗಳಕರವಾಗಿದೆ. 


ಇದನ್ನೂ ಓದಿ : Vastu Tips : ಮನೆಯ ಈ ಸ್ಥಳಗಳಲ್ಲಿ ಚಪ್ಪಲಿ - ಶೋ ಹಾಕೊಂಡು ಹೋಗಬೇಡಿ, ಹಣ ಮತ್ತು ಧಾನ್ಯ ಸಮಸ್ಯೆ ಎದುರಾಗುತ್ತೆ


ಕುಂಭ ರಾಶಿ : ಪ್ರೇಮ ಸಂಬಂಧ ಗಟ್ಟಿಯಾಗಲಿದೆ. ಸಂಗಾತಿಯೊಂದಿಗೆ ಪ್ರೀತಿಯಿಂದ ಸಮಯ ಕಳೆಯುವಿರಿ.  ಮೇ ನಂತರದ ಸಮಯವು ವಿವಾಹಿತರಿಗೆ ಉತ್ತಮವಾಗಿರಲಿದೆ. ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಾಗುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.