Vastu Tips in Kannada : ಸಾಮಾನ್ಯವಾಗಿ ಕೆಲವರು ಚಪ್ಪಲಿ ಧರಿಸಿ ಕೆಲವು ಸ್ಥಳಗಳಿಗೆ ಹೋಗಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಮ್ಮ ಮನೆಯಲ್ಲೂ ಅಂತಹ ಕೆಲವು ಸ್ಥಳಗಳಿವೆ, ಅಲ್ಲಿ ಶೋ ಮತ್ತು ಚಪ್ಪಲಿಗಳನ್ನು ಹಾಕಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಜನ ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಈ ವಿಷಯದ ಬಗ್ಗೆ ಮಾಹಿತಿ ತಂದಿದ್ದೀವೆ. ನಿಮ್ಮ ಮನೆಯಲ್ಲಿ ಯಾವ ಯಾವ ಜಾಗಗಳಲ್ಲಿ ಚಪ್ಪಲಿ ಧರಿಸಿ ಹೋಗಬಾರದು ಎಂಬುದನ್ನು ಈ ಕೆಳಗೆ ಓದಿ..
ದೇವಾಲಯಗಳು ಅಥವಾ ಪೂಜಾ ಸ್ಥಳಗಳಲ್ಲಿ ದೇವತೆಗಳ ಮುಂದೆ ಯಾವತ್ತೂ ಶೋ ಮತ್ತು ಚಪ್ಪಲಿಗಳನ್ನು ಧರಿಸಿ ಹೋಗಬಾರದು. ಯಾಕೆಂದರೆ ಹಿಂದೂ ಧರ್ಮದ ಪ್ರಕಾರ ದೇವಸ್ಥಾನದಲ್ಲಿ ದೇವತೆಗಳು ನೆಲೆಸಿದ್ದಾರೆ, ಹೀಗಾಗಿ, ನಾವು ಪಾದರಕ್ಷೆ, ಚಪ್ಪಲಿ ಹಾಕಿಕೊಂಡು ಹೋದರೆ ಅವಮಾನಿಸಿದಂತೆ.
ಇದನ್ನೂ ಓದಿ : Chanakya Niti : ಸಂತೋಷದ ಕುಟುಂಬಕ್ಕಾಗಿ ಚಾಣಕ್ಯನ ಈ 4 ನೀತಿಗಳನ್ನು ಅನುಸರಿಸಿ!
ಜನ ಅಡುಗೆಮನೆಯಲ್ಲಿ ಶೋ ಮತ್ತು ಚಪ್ಪಲಿಗಳನ್ನು ಧರಿಸಿ ಹೋಗಬಾರದು. ಅಡುಗೆ ಮನೆಯನ್ನು ಪೂಜಾ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನೀವು ಮನೆಯಲ್ಲಿ ಶೋ ಮತ್ತು ಚಪ್ಪಲಿಗಳನ್ನು ಧರಿಸಿದರೆ, ಅನ್ನಪೂರ್ಣೆ ನೆಲೆಸುತ್ತಾಳೆ. ಇದಲ್ಲದೇ ಅಡುಗೆ ಮನೆಯಲ್ಲಿ ಅಗ್ನಿದೇವನೂ ನೆಲೆಸಿದ್ದಾನೆ, ಇಂತಹ ಸಂದರ್ಭದಲ್ಲಿ ಚಪ್ಪಲಿ ಧರಿಸಿ ಅಡುಗೆ ಮಾಡುವುದರಿಂದ ಲಕ್ಷ್ಮಿದೇವಿ ಕೋಪಗೊಳ್ಳಲಿದ್ದಾಳೆ.
ಅಂಗಡಿಯ ಮನೆಯಲ್ಲಿ ವ್ಯಕ್ತಿ ಎಂದಿಗೂ ಶೋ ಮತ್ತು ಚಪ್ಪಲಿಗಳನ್ನು ಧರಿಸಬಾರದು. ಇದರಿಂದಾಗಿ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಉಂಟಾಗಬಹುದು.
ಒಬ್ಬ ವ್ಯಕ್ತಿಯು ಮನೆಯಲ್ಲಿ ಇಟ್ಟಿರುವ ತಿಜೋರಿಯನ್ನು ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಚಪ್ಪಲಿಯನ್ನು ಎಂದಿಗೂ ಧರಿಸಬಾರದು. ಹಣವನ್ನು ಇಡುವ ಸ್ಥಳದಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆ, ಆದ್ದರಿಂದ ನೀವು ಅಲ್ಲಿ ಚಪ್ಪಲಿಯನ್ನು ತೆಗೆದುಕೊಂಡರೆ, ಅದು ಲಕ್ಷ್ಮಿದೇವಿ ತುಂಬಾ ಕೋಪಗೊಳ್ಳುತ್ತಾಳೆ.
ಇದನ್ನೂ ಓದಿ : Job Tips : ನಿಮ್ಮ ನಿರುದ್ಯೋಗ ಸಮಸ್ಯೆಗೆ ಈ 4 ಉಪಾಯಗಳು : ಇದರಿಂದ ಬದಲಾಗಲಿದೆ ನಿಮ್ಮ ಅದೃಷ್ಟ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.