ಬೆಂಗಳೂರು : ಸಾಮುದ್ರಿಕ ಶಾಸ್ತ್ರದ ಪ್ರಕಾರ ದೇಹದ ಪ್ರತಿಯೊಂದು ಅಂಗಗಳ ವಿನ್ಯಾಸದ ಪ್ರಕಾರ,  ವ್ಯಕ್ತಿಯ ಸ್ವಭಾವ, ನಡವಳಿಕೆ ಮತ್ತು ಭವಿಷ್ಯವನ್ನು ತಿಳಿಯಬಹುದಾಗಿದೆ. ಇದರೊಂದಿಗೆ, ಯಾವುದೇ ವ್ಯಕ್ತಿಯ ಬಗೆಗಿನ ಅನೇಕ ರಹಸ್ಯಗಳನ್ನು ಕೂಡಾ ತಿಳಿದುಕೊಳ್ಳಬಹುದು ಎನ್ನಲಾಗುತ್ತದೆ. ಇಂದು ನಾವು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಿಧಾನಗಳಿಂದ ಮೂಗಿನ ವಿವಿಧ ವಿನ್ಯಾಸಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ತಿಳಿದು ಕೊಳ್ಳುವುದು ಹೇಗೆ ಎಂದು ಹೇಳಲಿದ್ದೇವೆ. 


COMMERCIAL BREAK
SCROLL TO CONTINUE READING

ಮೂಗಿನ ಆಕಾರದಿಂದ ಭವಿಷ್ಯವನ್ನು ತಿಳಿಯಿರಿ :
ಸಣ್ಣ ಮೂಗು ಹೊಂದಿರುವವರು :  
ಸಾಮುದ್ರಿಕ ಶಾಸ್ತ್ರದ ಪ್ರಕಾರ ಮೂಗು ತುಂಬಾ ಚಿಕ್ಕದಾಗಿದ್ದರೆ, ಅವರು ಚೇಷ್ಟೆಯ ಸ್ವಭಾವವನ್ನು ಹೊಂದಿರುತ್ತಾರೆ.ಎಂಥಾ ಪರಿಸ್ಥಿತಿಯಲ್ಲಿಯೂ  ನಿರಾತಂಕವಾಗಿರುತ್ತಾರೆ. ಸ್ನೇಹಪರ ಜೀವನವನ್ನು ನಡೆಸುತ್ತಾರೆ. ಆದರೆ ಅವರ ದೂರದೃಷ್ಟಿ ಸಮಾಜದಲ್ಲಿ ಅವರಿಗೆ ವಿಭಿನ್ನದ ಗುರುತನ್ನು ನೀಡುತ್ತದೆ. 


ಇದನ್ನೂ ಓದಿ : Ravi Pushya Yoga: ಮೂರು ದಿನಗಳಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ಬಂಪರ್ ಧನ ಯೋಗ


ಉದ್ದನೆಯ ಮೂಗು ಹೊಂದಿರುವವರು: 
ಉದ್ದನೆಯ ಮೂಗು ಹೊಂದಿರುವವರು ಯಾವುದೇ ವಿಷಯದಲ್ಲಿ ದೃಢ ನಿರ್ಧಾರ ಹೊಂದಿರುತ್ತಾರೆ . ಅವರು  ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ.  ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ದುಬಾರಿ ವಸ್ತುಗಳನ್ನು ಬಳಸಲು ಇಷ್ಟಪಡುತ್ತಾರೆ. 


ತೆಳ್ಳಗಿನ ಮೂಗು ಇರುವವರು: 
ತುಂಬಾ ತೆಳ್ಳಗಿನ ಮೂಗು ಹೊಂದಿರುವವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಅಲ್ಲದೆ, ಈ ಜನರು ಸ್ವಲ್ಪ ಯಶಸ್ಸು ಪಡೆದ ತಕ್ಷಣ ಹಳೆಯ ಜನರನ್ನು ಮರೆತುಬಿಡುತ್ತಾರೆ. ಫ್ಯಾಶನ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ.  


ದಪ್ಪ ಮೂಗು ಹೊಂದಿರುವ ಜನರು: 
ದಪ್ಪ ಮೂಗು ಹೊಂದಿರುವ ಜನರು ಯಾವಾಗಲೂ ಸಂತೋಷವಾಗಿರುತ್ತಾರೆ. ಮಾತ್ರವಲ್ಲ, ಇತರರನ್ನು ಕೂಡಾ ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ.  ಇತರರು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ಅವರು ಯೋಚಿಸುವುದಿಲ್ಲ. 


ಇದನ್ನೂ ಓದಿ : 12 ವರ್ಷಗಳ ನಂತರ ಈ ರಾಶಿಯವರ ಜೀವನದಲ್ಲಿ ಪವಾಡ ! ಅನುಭವಿಸುವರು ರಾಜವೈಭೋಗ


ಚಪ್ಪಟೆ  ಮೂಗು ಹೊಂದಿರುವ ಜನರು: 
ಯಾರ ಮುಗು ಚಪ್ಪಟೆಯಾಗಿರುತ್ತದೆಯೋ, ಅವರು ತುಂಬಾ ಭಾವನಾತ್ಮಕವಾಗಿರುತ್ತಾರೆ.  ಬೇರೆಯವರು ನೋವಿನಲ್ಲಿದ್ದರೆ ಇವರು ಸಹಿಸುವುದಿಲ್ಲ. ಸಾಮಾನ್ಯವಾಗಿ ಈ ಜನರ ಬಳಿ ಹೆಚ್ಚು ಹಣ ಇರುವುದಿಲ್ಲ. ಈ ಜನರು ಪೂಜೆ, ಪುನಸ್ಕಾರಗಳಲ್ಲಿ ಅಪಾರ ನಂಬಿಕೆಯನ್ನು ಹೊಂದಿರುತ್ತಾರೆ.  


ಮೂಗು ಮೇಲಕ್ಕೆ ಎತ್ತಿದ್ದಂತಿದ್ದರೆ : 
ಇವರು ತುಂಬಾ ಚುರುಕಾಗಿರುತ್ತಾರೆ. ಎಲ್ಲಾ ವಿಷಯಗಳಲ್ಲೂ ಇತರರಿಗಿಂತ ಮುಂದಿರುತ್ತಾರೆ. ಈ ಜನರು ಬೇಗನೆ ಇತರರನ್ನು ನಂಬುವುದಿಲ್ಲ. ಇವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.  


ಇದನ್ನೂ ಓದಿ : ಈ ರಾಶಿಯವರಿಗೆ ಇಟ್ಟ ಹೆಜ್ಜೆಯಲಿ ಸೋಲಿಲ್ಲ ! ಐಶಾರಾಮಿ ಜೀವನಕ್ಕೆ ಕೊನೆಯೂ ಇಲ್ಲ


ಗಿಣಿ ಮೂಗು ಹೊಂದಿರುವವರು : 
ಗಿಣಿಯಂತೆ ಚೂಪಾದ ಮೂಗು ಹೊಂದಿರುವವರ ಮನಸ್ಸು ಶುದ್ಧವಾಗಿರುತ್ತದೆ. ಅವರು ಬಹಳ ಶ್ರಮಪಟ್ಟು ಯಶಸ್ಸು ಪಡೆಯುವುದರಲ್ಲಿ ನಂಬಿಕೆ ಇಟ್ಟಿರುತ್ತಾರೆ. ತಾವು ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿದ ನಂತರವೇ ಇವರು ನಿಟ್ಟಿಸಿರು ಬಿಡುತ್ತಾರೆ. ಯಾರು ಏನು ಯೋಚಿಸುತ್ತಾರೆ ಎನ್ನುವುದರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ. ತಾವು ಏನು ಮಾಡಬೇಕು ಅಂದುಕೊಂಡಿರುತ್ತಾರೆಯೋ ಅದನ್ನು ಮಾಡಿಯೇ ಮುಗಿಸುತ್ತಾರೆ. 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.