Shani Effect On Zodiac Sign: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳ ಪೈಕಿ ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಶನಿಯು ವರ್ಷದ ಆರಂಭದಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಪ್ರಸ್ತುತ ಕುಂಭ ರಾಶಿಯಲ್ಲಿಯೇ ಹಿಮ್ಮುಖ ಚಲನೆಯಲ್ಲಿ ಇದ್ದಾರೆ. ನವೆಂಬರ್ 4 ರವರೆಗೆ ಶನಿ ಮಹಾತ್ಮನ ಈ ನಡೆ ಮುಂದುವರೆಯಲಿದೆ.
ನವೆಂಬರ್ 4 ರಂದು ಶನಿದೇವ ಕಂಭ ರಾಶಿಯಲ್ಲಿ ನೇರ ನಡೆಗೆ ಮರಳಲಿದ್ದಾರೆ. ಶನಿಯ ನೇರ ಚಲನೆಯ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡು ಬರುತ್ತದೆ. ಯಾರ ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿರುತ್ತಾರೆಯೋ, ಅವರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ. ಐಶಾರಾಮಿ ಜೀವನದ ಸುಖವನ್ನು ಅನುಭವಿಸುತ್ತಾರೆ. ಮತ್ತೊಂದೆಡೆ, ಶನಿಯು ಜಾತಕದಲ್ಲಿ ಅಶುಭವಾಗಿದ್ದರೆ, ವ್ಯಕ್ತಿಯ ಜೀವನವು ತೊಂದರೆಗಳಿಂದ ಆವೃತವಾಗಿರುತ್ತದೆ. ಇದೀಗ ನವೆಂಬರ್ ನಲ್ಲಿ ನೇರ ನಡೆಗೆ ಮರಳಲಿರುವ ಶನಿಯ ನಡೆಯಿಂದ ಮೂರು ರಾಶಿಯವರ ಅದೃಷ್ಟ ಕೂಡಾ ತೆರೆದುಕೊಳ್ಳಲಿದೆ.
ಇದನ್ನೂ ಓದಿ : ಶ್ರೀಕೃಷ್ಣನ ಹೃದಯದಲ್ಲಿದೆ ಈ 4 ರಾಶಿಗಳಿಗೆ ತೀರಾ ವಿಶೇಷ ಸ್ಥಾನ: ಬೇಡಿದನ್ನೆಲ್ಲಾ ಮನಸಾರೆ ನೀಡುವ ದೇವಕಿಸುತ
ವೃಷಭ ರಾಶಿ : ನೇರವಾಗಿ ಕುಂಭ ರಾಶಿಯಲ್ಲಿ ನೇರ ನಡೆ ಆರಂಭಿಸುವುದರಿಂದ ಈ ರಾಶಿಯವರಿಗೆ ಶುಭವಾಗಲಿದೆ. ನಿಮ್ಮ ರಾಶಿಯ ಕರ್ಮದ ಮನೆಯಲ್ಲಿ ಶನಿಯ ನೇರ ನಡೆ ಆರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವೃಷಭ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಪಡೆಯಬಹುದು. ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಯಾವುದೇ ಹೊಸ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ. ಹೊಸ ವ್ಯವಹಾರ ಮತ್ತು ಹೊಸ ಉದ್ಯೋಗದ ನೀರಿಕ್ಷೆಯಲ್ಲಿರುವವರಿಗೆ ಯಶಸ್ಸು ಸಿಗುವುದು.
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಇದು ಅದ್ಭುತ ಮತ್ತು ಅದೃಷ್ಟದ ಸಮಯ. ನವೆಂಬರ್ 4 ರ ನಂತರ ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುತ್ತೀರಿ. ಸ್ವಲ್ಪ ಕಠಿಣ ಪರಿಶ್ರಮವು ಖಂಡಿತವಾಗಿಯೂ ಶುಭ ಫಲಿತಾಂಶವನ್ನು ನೀಡುತ್ತದೆ. ಹಠಾತ್ ಆರ್ಥಿಕ ಲಾಭವಾಗುವುದು. ಈ ಮೂಲಕ ಹಣಕಾಸಿನ ಸ್ಥಿತಿ ಸುಧಾರಿಸುವುದು. ಯಾವುದೇ ರೀತಿಯ ಕಾನೂನು ವಿವಾದಗಳು ನಡೆಯುತ್ತಿದ್ದರೆ ನಿರ್ಧಾರವು ನಿಮ್ಮ ಪರವಾಗಿ ಇರುತ್ತದೆ. ಉದ್ಯೋಗಸ್ಥರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಇದನ್ನೂ ಓದಿ : Janmashtami 2023 Rashifal: ಇಂದು ಈ 4 ರಾಶಿಯವರಿಗೆ ಕೃಷ್ಣ ಕೃಪೆ, ಸಿರಿವಂತರಾಗುವ ಯೋಗ
ತುಲಾ ರಾಶಿ : ತುಲಾ ರಾಶಿಯವರಿಗೆ ಈ ಸಮಯವು ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಅವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಪಡೆಯುವಿರಿ. ಇದ್ದಕ್ಕಿದ್ದಂತೆ ಬಹಳಷ್ಟು ಹಣ ಹರಿದು ಬರುವುದು. ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಬಡ್ತಿ ಈಗ ಸಿಗುವುದು. ಈ ಅವಧಿಯಲ್ಲಿ, ಉದ್ಯಮಿಗಳು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವುದು ಸಾಧ್ಯವಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ