Numerology: ಈ ದಿನಾಂಕಗಳಲ್ಲಿ ಜನಿಸಿದವರನ್ನು ಕಣ್ಮುಚ್ಚಿ ನಂಬಬಹುದು
ಸಂಖ್ಯಾಶಾಸ್ತ್ರ: ಗ್ರಹಗಳು ಮತ್ತು ನಕ್ಷತ್ರಪುಂಜಗಳ ಆಧಾರದ ಮೇಲೆ ಜ್ಯೋತಿಷ್ಯಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ತಿಳಿಯಲಾಗುತ್ತದೆ. ಹಾಗೆಯೇ, ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಅವರ ಗುಣ-ಸ್ವಭಾವವನ್ನು ತಿಳಿಯಬಹುದು. ಸಂಖ್ಯಾಶಾಸ್ತ್ರವು 1 ರಿಂದ 9 ರವರೆಗಿನ ರಾಡಿಕ್ಸ್ ಆಧಾರದ ಮೇಲೆ ಜನರ ಭವಿಷ್ಯವನ್ನು ಲೆಕ್ಕಾಚಾರ ಮಾಡುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ತಿಂಗಳ ಕೆಲವು ದಿನಾಂಕಗಳಲ್ಲಿ ಜನಿಸಿದ ಜನರನ್ನು ಕಣ್ಣು ಮುಚ್ಚಿ ನಂಬಬಹುದು ಎಂದು ಹೇಳಲಾಗುತ್ತದೆ.
ಸಂಖ್ಯಾಶಾಸ್ತ್ರ: ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿ ಜನ್ಮ ದಿನ, ಸಮಯವನ್ನು ಪರಿಗಣಿಸಿ ಗ್ರಹಗಳು, ನಕ್ಷತ್ರಪುಂಜಗಳ ಆಧಾರದ ಮೇಲೆ ಭವಿಷ್ಯವನ್ನು ತಿಳಿಸುತ್ತದೆ. ಅದೇ ರೀತಿಯಲ್ಲಿ, ಸಂಖ್ಯಾಶಾಸ್ತ್ರದಲ್ಲಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಆಗುವ ಏರಿಳಿತಗಳನ್ನು ಅವನ ಜನ್ಮ ದಿನಾಂಕದಿಂದಲೂ ತಿಳಿಯಬಹುದು. ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಅವನ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಉಲ್ಲೇಖಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜನ್ಮದಿನಾಂಕದ ಮೊತ್ತವು ಅವನ ರಾಡಿಕ್ಸ್ ಆಗಿರುತ್ತದೆ. ಸಂಖ್ಯಾಶಾಸ್ತ್ರವು ರಾಡಿಕ್ಸ್ 1 ರಿಂದ 9 ರವರೆಗಿನ ಜನರ ಭವಿಷ್ಯವನ್ನು ಲೆಕ್ಕಾಚಾರ ಮಾಡುತ್ತದೆ. ಈ ಲೇಖನದಲ್ಲಿ ಯಾವುದೇ ತಿಂಗಳ 4, 13 ಮತ್ತು 22 ರಂದು ಜನಿಸಿದ ಜನರ ಸ್ವಭಾವದ ಬಗ್ಗೆ ತಿಳಿಯೋಣ...
ಯಾವುದೇ ತಿಂಗಳ 4, 13 ಮತ್ತು 22 ರಂದು ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 4 ಆಗಿರುತ್ತದೆ. ರಾಡಿಕ್ಸ್ ಸಂಖ್ಯೆ 4 ರ ಜನರ ಆಡಳಿತ ಗ್ರಹ ರಾಹು. ಇದರ ವಿಶೇಷತೆ ಏನೆಂದರೆ ಈ ಜನರು ಎಂದಿಗೂ ಇತರರನ್ನು ಅತೃಪ್ತಿಯಿಂದ ನೋಡಲಾರರು. ಈ ಜನರು ಹುಟ್ಟಿನಿಂದಲೇ ಪ್ರಾಮಾಣಿಕರು ಮತ್ತು ಶ್ರಮಜೀವಿಗಳು. ಈ ಜನರು ಇತರರೊಂದಿಗೆ ಬೆರೆಯಲು ಮತ್ತು ಸ್ನೇಹ ಬೆಳೆಸಲು ಇಷ್ಟಪಡುತ್ತಾರೆ. ಬಹುತೇಕ ಸಮಯ ಇವರು ಒಂಟಿಯಾಗಿ ಕಾಲ ಕಳೆಯಲು ಇಷ್ಟಪಡುತ್ತಾರೆ. ಅದೇ ವೇಳೆ ಇವರು ಯಾರನ್ನೇ ಆದರೂ ಒಮ್ಮೆ ನಂಬಿದರೆ ಅವರೊಂದಿಗೆ ಪ್ರಾಮಾಣಿಕವಾಗಿ ಇರುತ್ತಾರೆ. ಯಾವುದೇ ಸಂದರ್ಭದಲ್ಲಿ ಅವರ ಜೊತೆ ನಿಲ್ಲುತ್ತಾರೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಇನ್ನು 5 ದಿನಗಳ ನಂತರ ಮಕರ ರಾಶಿಗೆ ಶನಿ ಪ್ರವೇಶ- ಯಾರಿಗೆ ಶುಭ? ಯಾರಿಗೆ ಅಶುಭ?
ಸಂಖ್ಯಾಶಾಸ್ತ್ರದ ಪ್ರಕಾರ, ಈ ಜನರು ಪ್ರಾಯೋಗಿಕ ಮತ್ತು ವಿಶ್ವಾಸಾರ್ಹರು. ಜೀವನದಲ್ಲಿ ಏರಿಳಿತಗಳ ಹೊರತಾಗಿಯೂ, ಈ ಜನರು ತಮ್ಮ ಗುರಿಗಳನ್ನು ಸಂಕಲ್ಪದಿಂದ ಸಾಧಿಸುತ್ತಾರೆ. ಅವರ ಕೌಶಲ್ಯ ಮತ್ತು ಪ್ರಾಮಾಣಿಕತೆಯಿಂದಲೇ ಜನರು ಅವರತ್ತ ಆಕರ್ಷಿತರಾಗುತ್ತಾರೆ. ಈ ಜನರು ಬೇರೆಯವರಿಗಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಇಚ್ಚಿಸುವುದಿಲ್ಲ.
ಇದನ್ನೂ ಓದಿ- Shukra Gochar 2022: ಜುಲೈ ತಿಂಗಳಲ್ಲಿ ಈ 3 ರಾಶಿಯವರಿಗೆ ವಿಶೇಷ ಲಾಭ ನೀಡಲಿದ್ದಾನೆ ಶುಕ್ರ
ರಾಡಿಕ್ಸ್ 4 ರ ಜನರು ತುಂಬಾ ಸರಳ ಸ್ವಭಾವದವರು ಮತ್ತು ಅವರ ನಡವಳಿಕೆಯಿಂದಾಗಿ, ಜನರು ಬಹಳ ಬೇಗ ಅವರತ್ತ ಆಕರ್ಷಿತರಾಗುತ್ತಾರೆ. ಅವರ ನಡವಳಿಕೆಯಿಂದಾಗಿ ಜನರು ಅವನನ್ನು ತುಂಬಾ ಪ್ರೀತಿಸುತ್ತಾರೆ. ಇವರ ಬಹಳ ಮುಖ್ಯವಾದ ಸ್ವಭಾವ ಎಂದರೆ ಯಾವುದೇ ವಿಷಯದಲ್ಲಿ ಇವರನ್ನು ಕಣ್ಣು ಮುಚ್ಚಿ ನಂಬಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.