Janmashtami Bhog: ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನನ್ನು ಬಾಲಕನ ರೂಪದಲ್ಲಿ ಪೂಜಿಸಲಾಗುತ್ತದೆ. ಅಲ್ಲದೇ ಕೃಷ್ಣನ ಇಷ್ಟವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು 26 ಆಗಸ್ಟ್ 2024 ರಂದು ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ಶ್ರೀಕೃಷ್ಣನ ದೇವಾಲಯಗಳಲ್ಲಿ 56 ವಿಧದ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಆದರೆ ಮನೆಯಲ್ಲಿ 56 ನೈವೇದ್ಯಗಳನ್ನು ಅರ್ಪಿಸಿದರೆ ಸಾಕು. ಕೃಷ್ಣನಿಗೆ ಇಷ್ಟವಾದ ಐದು ಭಕ್ಷ್ಯಗಳನ್ನು ಅರ್ಪಿಸುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಮನೆಯಲ್ಲಿ ಪೂಜೆ ಮಾಡುವಾಗ ಯಾವ ಐದು ವಸ್ತುಗಳನ್ನು ಅರ್ಪಿಸಬೇಕು ಇಲ್ಲಿದೆ ನೋಡಿ...


ಬೆಣ್ಣೆ ನೈವೇದ್ಯ: 


ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಬೆಣ್ಣೆಯನ್ನು ಅರ್ಪಿಸಬೇಕು. ಮನೆಯಲ್ಲಿ ಹಾಲಿನಿಂದ ಶುದ್ಧ ಬೆಣ್ಣೆಯನ್ನು ಹೊರತೆಗೆದು ಅದನ್ನು ಶ್ರೀಕೃಷ್ಣನಿಗೆ ಅರ್ಪಿಸಬಹುದು ಅಥವಾ ಹೊರಗಿನಿಂದಲೂ ತಂದು ನೈವೇದ್ಯ ಮಾಡಬಹುದು. ಬೆಣ್ಣೆಯನ್ನು ಅರ್ಪಿಸುವುದರಿಂದ ಕೃಷ್ಣನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. .


ಇದನ್ನೂ ಓದಿ: Weekly Horoscope: ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದ ಆರಂಭವಾಗುತ್ತಿರುವ ಈ ವಾರ ದ್ವಾದಶ ರಾಶಿಗಳ ಫಲ


ಸಕ್ಕರೆ ಮಿಠಾಯಿ : 


ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಾಲ ಗೋಪಾಲನಿಗೆ ಸಕ್ಕರೆ ಮಿಠಾಯಿಯನ್ನು ಅರ್ಪಿಸಬೇಕು. ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾದ ನೈವೇದ್ಯವಿದು. ಬೆಣ್ಣೆ ಮತ್ತು ಸಕ್ಕರೆ ಮಿಠಾಯಿಯನ್ನು ಒಟ್ಟಿಗೆ ಅರ್ಪಿಸುವ ಮೂಲಕ ಶ್ರೀಕೃಷ್ಣನು ಪ್ರಸನ್ನನಾಗುತ್ತಾನೆ. ತನ್ನ ಭಕ್ತನ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.


ಸಿಹಿ ಅವಲಕ್ಕಿ:


ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಸಿಹಿ ಅವಲಕ್ಕಿಯನ್ನು ಅರ್ಪಿಸಬೇಕು. ಸುಧಾಮನಿಂದ ಅವಲಕ್ಕಿ ಪಡೆದು ತಿಂದ ಕೃಷ್ಣ ಆತನಿಗೆ ಸಕಲ ಐಶ್ವರ್ಯವನ್ನೂ ಕರುಣಿಸಿದ. ಸಿಹಿ ಅವಲಕ್ಕಿ ಅರ್ಪಿಸುವುದು ಮಂಗಳಕರ. ಸಿಹಿ ಅವಲಕ್ಕಿ ಅರ್ಪಿಸುವುದರಿಂದ ಎಲ್ಲಾ ಕಷ್ಟ ಕಳೆದು ಇಷ್ಟಾರ್ಥಗಳು ಈಡೇರುತ್ತವೆ. 


ಅಂಟಿನ ಉಂಡೆ : 


ಕೃಷ್ಣನ ಪ್ರಿಯ ಭಕ್ಷ್ಯಗಳಲ್ಲಿ ಒಂದು ಅಂಟಿನ ಉಂಡೆ. ಇದನ್ನು ಕೆಲವರು ಡ್ರೈ ಫ್ರೂಟ್ಸ್‌ ಲಡ್ಡು ಎಂದೂ ಕರೆಯುತ್ತಾರೆ. ಇದನ್ನು ನೈವೇದ್ಯ ಮಾಡುವುದರಿಂದ ಕೃಷ್ಣನು ಸಂತೃಪ್ತನಾಗುತ್ತಾನೆ.


ಇಡ್ಲಿ ಹೆಸರು ಬೇಳೆ ಪಾಯಸ:


ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಇಡ್ಲಿ ಹೆಸರು ಬೇಳೆ ಪಾಯಸ ನೈವೇದ್ಯ ಮಾಡುವುದು ಕೆಲವೆಡೆಯ ವಾಡಿಕೆ. ಇದು ಸಹ ಕೃಷ್ಣನ ಇಷ್ಟದ ಭಕ್ಷ್ಯ. ರಾತ್ರಿ ಅರ್ಘ್ಯ ಅರ್ಪಿಸಿದ ಬಳಿಕ ಇದನ್ನು ನೈವೇದ್ಯ ಮಾಡುತ್ತಾರೆ. 


ಇದನ್ನೂ ಓದಿ: ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ.. ಸರ್ವಾರ್ಥ ಸಿದ್ಧಿಯೋಗದಿಂದ ಅಷ್ಟೈಶ್ವರ್ಯ ಪ್ರಾಪ್ತಿ, ಸಿರಿ ಸಂಪತ್ತು ತುಂಬಿ ಹರಿಯುವುದು!


(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.