ತೆಂಗಿನಕಾಯಿ ಜ್ಯೋತಿಷ್ಯ ಪರಿಹಾರಗಳು: ಸನಾತನ ಧರ್ಮದಲ್ಲಿ ತೆಂಗಿನಕಾಯಿಯನ್ನು ಶ್ರೀಫಲ ಎಂದು ಕರೆಯಲಾಗುತ್ತದೆ, ಅಂದರೆ ಹಣ್ಣುಗಳಲ್ಲಿ ಅತ್ಯುತ್ತಮವಾದ ಹಣ್ಣು. ತೆಂಗಿನಕಾಯಿಯನ್ನು ಮುಖ್ಯವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆಯೂ ಪೂರ್ಣ ಎಂದೆನಿಸುವುದಿಲ್ಲ.  ಇದಲ್ಲದೇ ಹೊಸ ಕೆಲಸಗಳನ್ನು ಆರಂಭಿಸುವಾಗ ತೆಂಗಿನಕಾಯಿಯನ್ನು ನಿವಾಳಿಸಿ ಈಡಗಾಯಿ ಹೊಡೆಯುವುದನ್ನು ನೋಡಿರಬಹುದು. ಇದರಿಂದ ನಾವು ಮಾಡುವ ಕೆಲಸವು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ ಎಂದು ನಂಬಲಾಗಿದೆ. ಧರ್ಮದ ಹೊರತಾಗಿ, ಜ್ಯೋತಿಷ್ಯದಲ್ಲಿ ತೆಂಗಿನಕಾಯಿಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಜ್ಯೋತಿಷ್ಯದಲ್ಲಿ, ತೆಂಗಿನಕಾಯಿಯ ಇಂತಹ ಅನೇಕ ಪರಿಣಾಮಕಾರಿ ಕ್ರಮಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವುದರಿಂದ  ಜೀವನದಲ್ಲಿ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಮಾತ್ರವಲ್ಲ, ಇದರಿಂದ ಜೀವನದಲ್ಲಿ ಬಹಳಷ್ಟು ಸಂತೋಷ, ಸಂಪತ್ತು ಸಹ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಹಾರಗಳನ್ನು ತಿಳಿಯೋಣ...


COMMERCIAL BREAK
SCROLL TO CONTINUE READING

ತೆಂಗಿನಕಾಯಿಯ ಪರಿಣಾಮಕಾರಿ ಪರಿಹಾರಗಳು:-
ಶನಿ ದೋಷವನ್ನು ತೊಡೆದುಹಾಕಲು ತೆಂಗಿನಕಾಯಿ ಪರಿಹಾರ:

ಜಾತಕದಲ್ಲಿ ಶನಿ ದೋಷದ ಉಪಸ್ಥಿತಿಯು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಉಂಟುಮಾಡುತ್ತದೆ. ಶನಿ ದೋಷವು ಆರ್ಥಿಕ, ದೈಹಿಕ, ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತಹ ಸಮಸ್ಯೆಗಳಿಂದ ಹೊರಬರಲು ಶನಿವಾರ ನದಿಯಲ್ಲಿ ತೆಂಗಿನಕಾಯಿಯನ್ನು ತೇಲಿಸಿ ಬಿಡುವುದು ಉತ್ತಮ ಪರಿಹಾರ ಎನ್ನಲಾಗುತ್ತದೆ. ಈ  ಸಮಯದಲ್ಲಿ, ಹನುಮಂತನ 'ಓಂ ರಾಮದೂತಾಯ ನಮಃ' ಮಂತ್ರವನ್ನು ಪಠಿಸಬೇಕು. ಜೊತೆಗೆ ನಿಮ್ಮ ಕಷ್ಟಗಳನ್ನು ನಿವಾರಿಸುವಂತೆ ಪ್ರಾರ್ಥಿಸಬೇಕು.


ಇದನ್ನೂ ಓದಿ- Betel Leaves Remedies: ಹಣಕಾಸಿನ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ವೀಳ್ಯದೆಲೆಯ ಈ ಪರಿಹಾರಗಳನ್ನು ಮಾಡಿ


ಯಶಸ್ಸಿಗೆ ತೆಂಗಿನಕಾಯಿ ಪರಿಹಾರ:
ಕೆಲಸದಲ್ಲಿ ಆಗಾಗ್ಗೆ ಅಡಚಣೆಗಳು ಎದುರಾದರೆ, ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ಬಾಗಿಲಿನೊಳಗೆ ನೇತುಹಾಕಿ. ಇದು ಮನೆಯ ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ ಮತ್ತು ಕೆಲಸಗಳಲ್ಲಿ ಯಶಸ್ಸನ್ನು ಪಡೆಯಲು ನೆರವಾಗುತ್ತದೆ ಎಂದು ನಂಬಲಾಗಿದೆ.


ಹಣ ಮತ್ತು ವ್ಯವಹಾರದಲ್ಲಿ ಲಾಭ ಪಡೆಯಲು ತೆಂಗಿನಕಾಯಿ ಪರಿಹಾರ:
ವೃತ್ತಿ-ವ್ಯವಹಾರದಲ್ಲಿ ಯಾವುದೇ ಪ್ರಗತಿಯಿಲ್ಲದಿದ್ದರೆ, ಗುರುವಾರದಂದು ತೆಂಗಿನಕಾಯಿ, ಹಳದಿ ಹೂವುಗಳು, ಅರಿಶಿನದ ಕೊಂಬುಗಳು, ಹಳದಿ ಸಿಹಿತಿಂಡಿಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ವಿಷ್ಣುವಿಗೆ ಅರ್ಪಿಸಿ. 


ಇದನ್ನೂ ಓದಿ- Budh Gochar 2022: ಇನ್ನು 24 ಗಂಟೆಗಳಲ್ಲಿ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು


ಸುಖ ದಾಂಪತ್ಯಕ್ಕೆ ತೆಂಗಿನಕಾಯಿ ಪರಿಹಾರ:
ಪತಿ-ಪತ್ನಿಯರ ನಡುವೆ ಪದೇ ಪದೇ ಕಲಹ, ವಿರಹ ಉಂಟಾಗುತ್ತಿದ್ದರೆ ಮನೆಯಲ್ಲಿ ನಿತ್ಯ ತೆಂಗಿನಕಾಯಿ ಇಟ್ಟು ದೇವರನ್ನು ಪೂಜಿಸುವುದರಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.