Palmistry Tips: ಜೀವನದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಆಸೆ. ಭೌತಿಕ ಯುಗದಲ್ಲಿ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಿಲಿಯನೇರ್ ಮತ್ತು ಬಿಲಿಯನೇರ್ ಆಗಬೇಕೆಂದು ಕನಸು ಕಾಣುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಹಸ್ತದ ಕೆಲ ರೇಖೆಗಳ ಕುರಿತು ಉಲ್ಲೇಖಿಸಲಾಗಿದ್ದು, ಅವು ವ್ಯಕ್ತಿಯ ಸಿರಿವಂತಿಕೆಯ ಕುರಿತು ಸೂಚಿಸುತ್ತವೆ. ಹಸ್ತದಲ್ಲಿನ ಈ ರೇಖೆಗಳು ಯಾವುದು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

COMMERCIAL BREAK
SCROLL TO CONTINUE READING

ಈ ರೇಖೆಗಳು ಮತ್ತು ಚಿಹ್ನೆಗಳು ಶ್ರೀಮಂತಿಕೆಯ ಸಂಕೇತ ನೀಡುತ್ತವೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ಶನಿ ಪರ್ವತವು  ಜೀವನದಲ್ಲಿ ಸಂಪತ್ತಿನ ಸ್ಥಾನವನ್ನು ತೋರಿಸುತ್ತದೆ. ಶನಿಯು ಶುಭ ಸ್ಥಾನದಲ್ಲಿದ್ದು, ಯಾವುದೇ ಅಶುಭ ಚಿಹ್ನೆ ಇಲ್ಲದಿದ್ದರೆ ಅದು ಜೀವನದಲ್ಲಿ ಉತ್ತಮ ಸಂಪತ್ತನ್ನು ಸೂಚಿಸುತ್ತದೆ. ಇದಲ್ಲದೆ, ಶುಕ್ರ ಪರ್ವತವು ಮಂಗಳಕರ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಜೀವನದಲ್ಲಿ ಉತ್ತಮ ಹಣ ಗಳಿಕೆ ಮಾಡುತ್ತಾನೆ ಎಂಬುದನ್ನು ಸೂಚಿಸುತ್ತದೆ. ಮತ್ತೊಂದೆಡೆ, ಶನಿ ಪರ್ವತವು ಅಂಗೈಯಲ್ಲಿ ಸಂಪೂರ್ಣವಾಗಿ ಖಾಲಿಯಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಶನಿ ಪರ್ವತದ ಕಡೆಗೆ ಮೇಲಕ್ಕೆ ಎದ್ದಿರುವ ರೇಖೆಯು ಒಳ್ಳೆಯ ಸಂಕೇತವನ್ನು ನೀಡುತ್ತದೆ. ಜೀವನದಲ್ಲಿ ಅದೃಷ್ಟದ ಜೊತೆಗೆ ಹಣವೂ ಇರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿನ ಮಸ್ತಿಷ್ಕ ರೇಖೆ ಮತ್ತು ಬುದ್ಧಿ ರೇಖೆ ಇದ್ದರೆ ಅದು ಒಳ್ಳೆಯ ಸಂಕೇತ ನೀಡುತ್ತದೆ. ಒಂದು ವೇಳೆ ಜೀವನ ರೇಖೆಯಿಂದ ಹೊರಬರುವ ಯಾವುದೇ ರೇಖೆಯು ನೇರವಾಗಿ ಶನಿ ಪರ್ವತವನ್ನು ತಲುಪಿದರೆ, ಆ ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಇದಲ್ಲದೇ ಇಂತಹ ಜನರು ಕೋಟ್ಯಾಧಿಪತಿಗಳೂ ಆಗುತ್ತಾರೆ. ಆದಾಗ್ಯೂ, ಈ ರೇಖೆ ಉತ್ತಮ ಶನಿ ಪರ್ವತವನ್ನು ಹೊಂದಿರುವುದು ಅಗತ್ಯವಾಗಿದೆ.


ಇದನ್ನೂ ಓದಿ-Double Rajyog: ಬುದ್ಧಿದಾತ ಬುಧನಿಂದ 'ಡಬಲ್ ರಾಜಯೋಗ' ರಚನೆ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!

ಹಸ್ತದ ಯಾವುದೇ ಒಂದು ರೇಖೆಯು ಜೀವನ ರೇಖೆಯನ್ನು ದಾಟಿ ಶನಿ ಪರ್ವತವನ್ನು ತಲುಪಿದರೆ, ಅಂತಹ ಜನರು ಹುಟ್ಟು ಮಿಲಿಯನೇರ್ ಅಥವಾ ಕೋಟ್ಯಾಧಿಪತಿಗಳಾಗಿರುತ್ತಾರೆ, ಈ ರೇಖೆಗಳ ಯೋಗದ ಜೊತೆಗೆ ಯಾವುದೇ ರೇಖೆಯು ಜೀವನ ರೇಖೆಯಿಂದ ಹೊರಬಂದು ಸೂರ್ಯ ಪರ್ವತವನ್ನು ತಲುಪಿದರೆ, ವ್ಯಕ್ತಿಯು ಜೀವನದಲ್ಲಿ ಕೋಟ್ಯಾಧಿಪತಿಯಾಗುತ್ತಾನೆ. ಮತ್ತೊಂದೆಡೆ, ಈ ರೇಖೆಗಳ ನಡುವೆ ಗುರುವಿನ ಪರ್ವತದ ಮೇಲೆ ಮಚ್ಚೆ ಇದ್ದರೆ, ಅದು ಅಶುಭ ಸಂಕೇತವಾಗಿದೆ. ಅಂಥವರು ಕೆಲವೇ ಕ್ಷಣಗಳಲ್ಲಿ ಕೋಟ್ಯಂತರ ರೂ. ಕಳೆದುಕೊಳ್ಳುತ್ತಾರೆ.


ಇದನ್ನೂ ಓದಿ-Double Rajyog: ಬುದ್ಧಿದಾತ ಬುಧನಿಂದ 'ಡಬಲ್ ರಾಜಯೋಗ' ರಚನೆ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ರೇಖೆಗಳು ಮಂಗಳಕರ ಸ್ಥಾನದಲ್ಲಿದ್ದರೆ ಮತ್ತು ಉಗುರುಗಳ ಮೇಲೆ ಸಣ್ಣ ಚಂದ್ರನ ಗುರುತುಗಳಿದ್ದರೆ, ಅದು ಮಂಗಳಕರ ಸಂಕೇತವಾಗಿದೆ. ಈ ಚಿಹ್ನೆಗಳು ಜೀವನದಲ್ಲಿ ಪ್ರಗತಿಯನ್ನು ಸೂಚಿಸುತ್ತವೆ. ಮತ್ತೊಂದೆಡೆ, ಗುರುಗ್ರಹದ ಬೆರಳಿನಲ್ಲಿ ಈ ಗುರುತು ಇದ್ದರೆ, ನಂತರ ಸರ್ಕಾರಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳು ಬಲವಾಗಿರುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.