ಬೆಂಗಳೂರು : ರಾಶಿಚಕ್ರ ಚಿಹ್ನೆ ಮತ್ತು ಜಾತಕದ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ವ್ಯಕ್ತಿಯ ಬಗ್ಗೆ ಜ್ಯೋತಿಷ್ಯವನ್ನು ಹೇಳಲಾಗುತ್ತದೆ. ವ್ಯಕ್ತಿಯ ರಾಡಿಕ್ಸ್ ಆಧಾರದ ಮೇಲೆ ವ್ಯಕ್ತಿತ್ವ, ಭವಿಷ್ಯ, ವೃತ್ತಿ, ಆರ್ಥಿಕ ಸ್ಥಿತಿಯನ್ನು  ಹೇಳಲಾಗುತ್ತದೆ. ರಾಡಿಕ್ಸ್ ಎನ್ನುವುದು ವ್ಯಕ್ತಿಯ ಹುಟ್ಟಿದ ದಿನಾಂಕದ ಮೊತ್ತವಾಗಿದೆ. ಯಾವುದೇ ತಿಂಗಳ 5, 14 ಅಥವಾ 23 ರಂದು ಜನಿಸಿದ ವ್ಯಕ್ತಿಯ ಮೂಲಾಂಕ 5 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ ಐದರ ಗುಣ ಸ್ವಭಾವ ಭವಿಷ್ಯ ಹೇಗಿರುತ್ತದೆ ನೋಡೋಣ. 


COMMERCIAL BREAK
SCROLL TO CONTINUE READING

ಮೂಲಾಂಕ 5 ಹೊಂದಿರುವವರ ಗುಣ ಸ್ವಭಾವ : 
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 5 ಹೊಂದಿರುವ ಜನರು ಹುಟ್ಟಿನಿಂದಲೇ ಬುದ್ಧಿವಂತರಾಗಿರುತ್ತಾರೆ. ಅವರು ತಮ್ಮ ಬುದ್ಧಿವಂತಿಕೆಯಿಂದ ಉತ್ತಮ ವೃತ್ತಿಜೀವನವನ್ನು ನಡೆಸಿ, ಸಾಕಷ್ಟು ಹಣವನ್ನು ಗಳಿಸುತ್ತಾರೆ. ರಾಡಿಕ್ಸ್ 5ರ ಅಧಿಪತಿ ಬುಧ. ಬುಧ ಸಂಪತ್ತು, ಬುದ್ಧಿವಂತಿಕೆ, ಸಂವಹನ, ವ್ಯವಹಾರದ ಅಂಶವಾಗಿದೆ. ರಾಡಿಕ್ಸ್ 5ರ ಜನರು ವ್ಯಾಪಾರ ಮಾಡಿದರೆ ಅದರಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಕೆಲಸಕ್ಕೆ ಹೋದರೂ ಉನ್ನತ ಸ್ಥಾನಕ್ಕೆ ಏರುತ್ತಾರೆ.   


ಇದನ್ನೂ ಓದಿ : Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!


ಸವಾಲುಗಳಿಗೆ ಹೆದರುವುದಿಲ್ಲ  :
ಮೂಲಾಂಕ 5 ಹೊಂದಿರುವವರು ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಲು ಯಾವತ್ತೂ ಹಿಂದೆ ಮುಂದೆ ನೋಡುವುದಿಲ್ಲ. ಸವಾಲುಗಳನ್ನು ಸ್ವೀಕರಿಸುತ್ತಾರೆ ಮಾತ್ರವಲ್ಲ ಸವಾಲುಗಳಲ್ಲಿ ಜಯ ಕೂಡಾ ಗಳಿಸುತ್ತಾರೆ. ಸವಾಲುಗಳನ್ನು ಎದುರಿಸಿ ಮುನ್ನುಗ್ಗುವುದೆಂದರೆ ಇವರಿಗೆ ಇಷ್ಟ. ಈ ಕಾರಣದಿಂದ ಜೀವನದಲ್ಲಿ  ಸಾಕಷ್ಟು ಹಣವನ್ನು ಗಳಿಸುತ್ತಾರೆ. ಗೌರವವನ್ನು ಕೂಡಾ ಗಳಿಸುತ್ತಾರೆ. 


ಲವಲವಿಕೆಯಿಂದ ಎಲ್ಲರ ಮನ ಗೆಲ್ಲುತ್ತಾರೆ : 
ರಾಡಿಕ್ಸ್ 5 ರ ಜನರ ವ್ಯಕ್ತಿತ್ವವು ಸಾಮಾನ್ಯವಾಗಿದ್ದರೂ, ಅವರ ಹರ್ಷಚಿತ್ತದಿಂದ ಕೂಡಿದ ಸ್ವಭಾವವನ್ನು ಹೊಂದಿರುತ್ತಾರೆ. ಅವರ ಈ ಸ್ವಭಾವವೇ ಎಲ್ಲರನ್ನೂ ಇವರತ್ತ ಸೆಳೆಯುವಂತೆ ಮಾಡುತ್ತದೆ.  ತಮ್ಮ ತಮಾಷೆಯ ಮನೋಭಾವದಿಂದಾಗಿ ಎದುರಿಗಿರುವವರ ಜನರ ಹೃದಯವನ್ನು ಗೆಲ್ಲುತ್ತಾರೆ.  ಇವರು ಸದಾ ಲವಲವಿಕೆಯಿಂದ ಇರುತ್ತಾರೆ. ತಮ್ಮೊಂದಿಗೆ ಇರುವ ಜನರನ್ನು ಕೂಡಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ. 


ಇದನ್ನೂ ಓದಿ : Money Plant Vastu: ಮನಿಪ್ಲಾಂಟ್ ಗೆ ಈ ವಸ್ತುವನ್ನು ಕಟ್ಟಿದರೆ ಸಾಕು ಮನೆಯಲ್ಲಿ ಹಣದ ಮಳೆಯಾಗುತ್ತದೆ!



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.