ಮನೆಗೆ ಬಾರದ ಗಂಗೆ- ಹಳ್ಳದ ನೀರು ಕುಡಿಯುತ್ತಿರುವ ಗ್ರಾಮಸ್ಥರು!!
ಜಲಜೀವನ್ ಮಿಷನ್ ಕಾಮಗಾರಿ ನಡೆಸುವಾಗ ಪೈಪ್ ಲೈನ್ ಒಡೆದು ಕುಡಿಯುವ ನೀರು ಸರಬರಾಜು ಆಗದಿರುವುದರಿಂದ ಗ್ರಾಮದ ಸಮೀಪ ಇರುವ ಹಳ್ಳದ ಕಲುಷಿತ ನೀರನ್ನೇ ಬಸಿದು ಗ್ರಾಮಸ್ಥರು ಬಳಸುತ್ತಿದ್ದಾರೆ.
ಚಾಮರಾಜನಗರ: ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ ಲೈನ್ ವಿದ್ಯುತ್ ಕೇಬಲ್ ತುಂಡಾಗಿರುವುದರಿಂದ ಹಳ್ಳದ ನೀರನ್ನು ಕುಸಿಯುತ್ತಿರುವ ಕಳವಳಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದ ತಪ್ಪಲಿನ ಆನೆಹೊಲ ಗ್ರಾಮದಲ್ಲಿ ನಡೆಯುತ್ತಿದೆ.
ಜಲಜೀವನ್ ಮಿಷನ್ ಕಾಮಗಾರಿ ನಡೆಸುವಾಗ ಪೈಪ್ ಲೈನ್ ಒಡೆದು ಕುಡಿಯುವ ನೀರು ಸರಬರಾಜು ಆಗದಿರುವುದರಿಂದ ಗ್ರಾಮದ ಸಮೀಪ ಇರುವ ಹಳ್ಳದ ಕಲುಷಿತ ನೀರನ್ನೇ ಬಸಿದು ಗ್ರಾಮಸ್ಥರು ಬಳಸುತ್ತಿದ್ದಾರೆ.
ಇದನ್ನೂ ಓದಿ- 2 ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ 8 ವರ್ಷ ಸಿಎಂ ಆಗ್ತಾರೆ: ಹೀಗೆ ಹೇಳಿದ್ಯಾರು ಗೊತ್ತಾ?
ಆನೆಹೊಲ ಗ್ರಾಮದಲ್ಲಿ 200 ಮನೆಗಳಿದ್ದು 400 ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಕಳೆದ 8 ದಿನಗಳಿಂದಲೂ ಕುಡಿಯುವ ನೀರು ಸರಬರಾಜು ಆಗದ ಹಿನ್ನೆಲೆ ಹಳ್ಳದ ನೀರನ್ನು ಬಸಿದು ಮಹಿಳೆಯರು ಮನೆಗೆ ಹೊತ್ತು ತರುವ ಪರಿಸ್ಥಿತಿ ಉದ್ಭವಿಸಿದೆ.
ಇದನ್ನೂ ಓದಿ- "ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ"
ಗ್ರಾಮದ ಸಮೀಪ ಹರಿಯುತ್ತಿರುವ ಕರಡಿ ಶೀಳು ಹಳ್ಳ ಎಂಬಲ್ಲಿಂದ ಮಹಿಳೆಯರು ಬಟ್ಟೆ ಮೂಲಕ ನೀರನ್ನು ಬಸಿದು ತರುತ್ತಿದ್ದು ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.