ಸೈಟ್‍ನ ಹಣ ಹಿಂದಿರುಗಿಸಲು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಗೆ ಗ್ರಾಹಕರ ಆಯೋಗದ ಆದೇಶ

ಹುಬ್ಬಳ್ಳಿಯ ಸಗೈ ರಾಜದಾಸ್, ಶೈಲಜಾ ಹಣಗಿ, ಶಕುಂತಲಾ ರಾವಲ್ ಹಾಗೂ ನಿಂಗಪ್ಪ ಮುಳಗುಂದ ಮತ್ತು ಪರಪ್ಪ ದಂಡಿನ್ ಅನ್ನುವವರು ಹುಬ್ಬಳ್ಳಿಯ ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಜೊತೆ ಅವರು ಈಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಗಾಮನಗಟ್ಟಿ ಲೇಔಟನ್ ಪ್ಲಾಟ್ ನಂ.29,44,47 ಮತ್ತು 45ರ ಖರೀದಿಗೆ ದಿ:07/02/2014ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು.

Written by - Zee Kannada News Desk | Last Updated : May 23, 2023, 05:05 PM IST
  • ತಮಗೆ ಸರ್ಕಾರದ ಪರಿಹಾರವು ಬಂದಿಲ್ಲ ಅಂತಾ ಹೇಳಿ ಎಲ್ಲಾ ದೂರುದಾರರ ಹಣ ವಾಪಸ್ಸು ಕೊಡಲು ತಯಾರು ಇರುವುದಾಗಿ ಹೇಳಿ ಆಕ್ಷೇಪಣೆ ಹಾಕಿದ್ದರು
  • ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು
ಸೈಟ್‍ನ ಹಣ ಹಿಂದಿರುಗಿಸಲು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಗೆ ಗ್ರಾಹಕರ ಆಯೋಗದ ಆದೇಶ title=

ಧಾರವಾಡ: ಹುಬ್ಬಳ್ಳಿಯ ಸಗೈ ರಾಜದಾಸ್, ಶೈಲಜಾ ಹಣಗಿ, ಶಕುಂತಲಾ ರಾವಲ್ ಹಾಗೂ ನಿಂಗಪ್ಪ ಮುಳಗುಂದ ಮತ್ತು ಪರಪ್ಪ ದಂಡಿನ್ ಅನ್ನುವವರು ಹುಬ್ಬಳ್ಳಿಯ ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಜೊತೆ ಅವರು ಈಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಗಾಮನಗಟ್ಟಿ ಲೇಔಟನ್ ಪ್ಲಾಟ್ ನಂ.29,44,47 ಮತ್ತು 45ರ ಖರೀದಿಗೆ ದಿ:07/02/2014ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು.

ಈ ಬಗ್ಗೆ ಪ್ರತಿಯೊಬ್ಬರು ಕಂತುಗಳಲ್ಲಿ ತಲಾ ರೂ.5,24,000/-, ರೂ.3,15,500/- ಹಾಗೂ ರೂ.3,80,000/- ಅಡವಾನ್ಸ್ ಹಣ ಕಟ್ಟಿದ್ದರು. ಹಲವಾರು ವರ್ಷಗಳಾದರೂ ಎದುರುದಾರರು ಲೇಔಟ್ ಕೆಲಸ ಪೂರ್ತಿಗೊಳಿಸಿರಲಿಲ್ಲ. ಅಲ್ಲದೇ ಒಪ್ಪಂದದಂತೆ ದೂರುದಾರರಿಗೆ ಆ ಸೈಟುಗಳ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‍ನಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ದಾಖಲೆ ಇಲ್ಲದೇ ಕಾರಿನಲ್ಲಿ ಕೋಟಿ ಕೋಟಿ ಹಣ ಸಾಗಾಟ

ಎದುರುದಾರ ಹುಬ್ಬಳ್ಳಿಯ ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‍ರವರು ವಕೀಲರ ಮೂಲಕ ಹಾಜರಾಗಿ ಲೇಔಟ ಮಾಡಲು ಉದ್ದೇಶಿಸಿದ್ದ ಈಟಿಗಟ್ಟಿ ಗ್ರಾಮದ ಬ್ಲಾಕ್ ನಂ.22/1 ಜಮೀನನ್ನು ಎಮ್ಸ್ ಸ್ಥಾಪನೆಗಾಗಿ ಸರ್ಕಾರದವರು ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಕಾರಣ ಲೇಔಟ್ ಕೆಲಸ ಪೂರ್ಣಗೊಳಿಸಿಸಲಾಗಿಲ್ಲ. ಈ ಬಗ್ಗೆ ತಮಗೆ ಸರ್ಕಾರದ ಪರಿಹಾರವು ಬಂದಿಲ್ಲ ಅಂತಾ ಹೇಳಿ ಎಲ್ಲಾ ದೂರುದಾರರ ಹಣ ವಾಪಸ್ಸು ಕೊಡಲು ತಯಾರು ಇರುವುದಾಗಿ ಹೇಳಿ ಆಕ್ಷೇಪಣೆ ಹಾಕಿದ್ದರು.

ಇದನ್ನೂ ಓದಿ: ಮಳೆಗೆ ಕಬ್ಬನ್‌ ಪಾರ್ಕ್‌ನಲ್ಲಿ ಅವಾಂತರ ಬುಡ ಸಮೇತ ಕಿತ್ತು ಬಿದ್ದ ಅಪರೂಪದ ಮರಗಳು

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಅವರು 2014ರಲ್ಲಿ ಪ್ರತಿಯೊಬ್ಬ ದೂರುದಾರನಿಂದ ಲಕ್ಷಗಟ್ಟಲೇ ಹಣ ಪಡೆದುಕೊಂಡು ಅದನ್ನು ಲೇಔಟ ನಿರ್ಮಾಣದ ತಮ್ಮ ಕೆಲಸಕ್ಕೆ ಎದುರುದಾರರು ಉಪಯೋಗಿಸಿಕೊಂಡಿದ್ದಾರೆ. ಅವರು ದೂರು ದಾಖಲಿಸುವವರೆಗೆ ದೂರುದಾರರ ಹಣ ಹಿಂದಿರುಗಿಸದೇ ಇರುವುದು ತಪ್ಪು ಅಂತಾ ಮಾನ್ಯ ಆಯೋಗ ತೀರ್ಪು ನೀಡಿ ಪ್ರತಿಯೊಬ್ಬ ದೂರುದಾರರಿಗೆ ಅವರು ನೀಡಿದ ಹಣ ಮತ್ತು ಅದರ ಮೇಲೆ ದಿ:11/06/2017 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಮತ್ತು ಈ ಪ್ರಕರಣಗಳ ಖರ್ಚು ವೆಚ್ಚ ಅಂತಾ ತಲಾ ರೂ.10,000/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News