Ram Darbar Photo Direction:ವಾಸ್ತು ಶಾಸ್ತ್ರದಲ್ಲಿ, ದಿಕ್ಕು ಮತ್ತು ಸ್ಥಳಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪ್ರತಿಯೊಂದು ವಸ್ತುವನ್ನು ಯಾವ ದಿಕ್ಕಿನಲ್ಲಿ ಯಾವ ಸ್ಥಳದಲ್ಲಿ ಇಡಬೇಕು ಎನ್ನುವುದನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇದುವ ವಸ್ತುಗಳಿಂದ ಸಕಾರಾತ್ಮಕ ಫಲಿತಾಂಶ ಸಿಗಬೇಕಾದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕಾಗುತ್ತದೆ.ಇಷ್ಟೇ ಅಲ್ಲ, ವಾಸ್ತು ನಿಯಮಗಳನ್ನು ಪಾಲಿಸಿದರೆ ಮಾತ್ರ ವಾಸ್ತು  ದೋಷ ನಿವಾರಣೆಯಾಗುತ್ತದೆ. ವಾಸ್ತು ದೋಷ ನಿವಾರಣೆಯಾದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ.ಹೀಗಾದಾಗ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಹಿಂದೂ ಮನೆಗಳಲ್ಲಿ ತಮ್ಮ ನೆಚ್ಚಿನ ದೇವತೆಗಳ  ಫೋಟೋಗಳನ್ನು ಮನೆಯಲ್ಲಿ ಹಾಕುವ ವಾಡಿಕೆ ಇದೆ. ಆದರೆ ಈ ಸಮಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  


COMMERCIAL BREAK
SCROLL TO CONTINUE READING

ನೀವೂ ಕೂಡಾ ನಿಮ್ಮ ಮನೆಯಲ್ಲಿ ಶ್ರೀರಾಮ ದರ್ಬಾರ್ ಫೋಟೋವನ್ನು ಹಾಕಬೇಕೆಂದಿದ್ದರೆ ಅದನ್ನು ಹಾಕುವ ಮುನ್ನ ವಾಸ್ತುವಿನ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ. ಅಲ್ಲದೆ, ಅದನ್ನು ಯಾವ ದಿಕ್ಕಿಗೆ ಹಾಕಬೇಕು ಎನ್ನುವ ನಿಯಮವನ್ನು ಕೂಡಾ ನೆನಪಿನಲ್ಲಿ ಇಡಬೇಕು. ರಾಮ ದರ್ಬಾರ್ ಫೋಟೋವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಹಾಕುವುದರಿಂದ ಸಂತೋಷ ಮತ್ತು ಶಾಂತಿ ಸಿಗುತ್ತದೆ.   ಆದರೆ ಈ ಫೋಟೋವನ್ನು ತಪ್ಪು ದಿಕ್ಕಿನಲ್ಲಿ ಹಾಕಿದರೆ ವ್ಯಕ್ತಿಯು ಅನೇಕ ರೀತಿಯ ದುಃಖಗಳನ್ನು ಎದುರಿಸಬೇಕಾಗುತ್ತದೆ. 


ಇದನ್ನೂ ಓದಿ : 10 ವರ್ಷ ಬಳಿಕ 'ಚತುರ್ಥ ದಶಮ ಯೋಗ'.. ಈ 3 ರಾಶಿಗಳಿಗೆ ಹಠಾತ್ ಆರ್ಥಿಕ ಲಾಭ, ಉದ್ಯೋಗ ವೃತ್ತಿಯಲ್ಲಿ ಪ್ರಗತಿ!


ರಾಮ್ ದರ್ಬಾರ್  ಫೋಟೋವನ್ನು  ಈ ದಿಕ್ಕಿನಲ್ಲಿ ಇರಿಸಿ :
ಶ್ರೀರಾಮ ದರ್ಬಾರ್‌ನ ಫೋಟೋದಲ್ಲಿ ರಾಮ, ತಾಯಿ ಸೀತಾ, ಲಕ್ಷ್ಮಣ ಮತ್ತು ಆಂಜನೇಯ ಇರುತ್ತಾರೆ. ಮನೆಯ ಸರಿಯಾದ ದಿಕ್ಕಿನಲ್ಲಿ ರಾಮ್ ದರ್ಬಾರ್ ಫೋಟೋವನ್ನು ಇರಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ಮನೆಯಲ್ಲಿರುವ ರಾಮ್ ದರ್ಬಾರ್ ಫೋಟೋ ಭಗವಾನ್ ರಾಮನ ರಾಜ್ಯ ಮತ್ತು ಅವನ ನಿಯಮಗಳನ್ನು ಪ್ರತಿನಿಧಿಸುತ್ತದೆ.ರಾಮ್ ದರ್ಬಾರ್ ಅನ್ನು ನಿಯಮಿತವಾಗಿ ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.  


ಮನೆಯಲ್ಲಿ ಭಗವಾನ್ ಶ್ರೀರಾಮ ದರ್ಬಾರ್ ಫೋಟೋ ಇರಿಸುವುದರಿಂದ ಕುಟುಂಬ ಸದಸ್ಯರಲ್ಲಿ ಸಾಮರಸ್ಯತೆ ಹೆಚ್ಚುತ್ತದೆ. ಮನೆಯಲ್ಲಿನ ಜಗಳಗಳು ದೂರವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ದೇವರ ಕೋಣೆಯ ಪೂರ್ವ ಗೋಡೆಯ ಮೇಲೆ ಇಡುವುದು ಮಂಗಳಕರವೆಂದು ಹೇಳಲಾಗುತ್ತದೆ. ಇದರಿಂದ ವಾಸ್ತು ದೋಷ ಕೂಡಾ ನಿವಾರಣೆಯಾಗುತ್ತದೆ. 


ಇದನ್ನೂ ಓದಿ : Mangal Rise 2024: ಇನ್ನೂ ಕೆಲವೇ ಗಂಟೆಗಳಲ್ಲಿ ಮೇಷ ಸೇರಿದಂತೆ ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ, ಕುಬೇರ ನಿಧಿ ಪ್ರಾಪ್ತಿ ಯೋಗ!


ರಾಮ್ ದರ್ಬಾರ್ ಅನ್ನು ಹೀಗೆ ಆರಾಧಿಸಿ   :
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ನಂತರ ಸ್ನಾನವನ್ನು ಪೂರೈಸಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇದರ ನಂತರ, ರಾಮ್ ದರ್ಬಾರ್ ಫೋಟೋವನ್ನು ನೀರಿನಿಂದ ಸ್ವಚ್ಛಗೊಳಿಸಿ ಬಟ್ಟೆಗಳನ್ನು ಅರ್ಪಿಸಿ. ಇದರ ನಂತರ ಹೂವುಗಳನ್ನು ಅರ್ಪಿಸಿ. ಹೀಗೆ  ಪೂಜೆಯನ್ನು ವಿಧಿವತ್ತಾಗಿ ನೆರವೇರಿಸಿ ಅಂತಿಮವಾಗಿ ಆರತಿ ಬೆಳಗಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ