ಬೆಂಗಳೂರು : ಹಿಂದೂ ಧರ್ಮದ ಜೊತೆಗೆ, ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸ್ಯಗಳ ಬಗ್ಗೆ ಹೇಳಲಾಗಿದೆ. ಈ ಸಸ್ಯಗಳನ್ನು  ಮನೆಯಲ್ಲಿ ನೆಡುವ ಮೂಲಕ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯುವುದು ಸಾಧ್ಯವಾಗುತ್ತದೆ. ತುಳಸಿ, ಶಮಿ ಗಿಡ ಮತ್ತು ಮನಿ ಪ್ಲಾಂಟ್ ನೆಡುವುದನ್ನು ಮಂಗಳಕರವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.  ಈ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಈ ಗಿಡಗಳಂತೆಯೇ ಕ್ರಾಸ್ಸುಲಾ ಸಸ್ಯವನ್ನು ಕೂಡಾ ನೆಡುವುದರಿಂದ   ವ್ಯಕ್ತಿಯ ಜೀವನವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.  


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಕ್ರಾಸ್ಸುಲಾ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಅದು ಅದ್ಬುತ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.  ಬಹಳ ಸಮಯದಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ, ಮನೆಯಲ್ಲಿ ಈ ಸಸ್ಯವನ್ನು ನೆಡುವಂತೆ ವಾಸ್ತುವಿನಲ್ಲಿ ಸೂಚಿಸಲಾಗುತ್ತದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ  ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುವುದಲ್ಲದೆ, ಮನೆಯಲ್ಲಿ ಮುಂದೆ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Ashubh Yog : ಈ ಯೋಗದಲ್ಲಿ ಹುಟ್ಟಿದವರ ಕೈಯಲ್ಲಿ ನಿಲ್ಲುವುದಿಲ್ಲ ಹಣ : ಅದಕ್ಕೆ ಇಲ್ಲಿದೆ ಪರಿಹಾರ


ಅದೃಷ್ಟವನ್ನೇ ಬದಲಾಯಿಸುತ್ತದೆ ಈ ಸಸ್ಯ :
ಕ್ರಾಸ್ಸುಲಾ ಸಸ್ಯದ ಅನೇಕ ಅದ್ಭುತ ಗುಣಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ಮನೆಯಲ್ಲಿ ಈ ಗಿಡವನ್ನು ನೆಡಲಾಗುತ್ತದೆಯೋ ಆ ಮನೆಯಲ್ಲಿ ಧನ-ಧಾನ್ಯಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ. ಅಲ್ಲದೆ ಆ ಮನೆಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಾರೆ.  ಮನೆಯಲ್ಲಿ ಹಣ, ಸಂತೋಷ, ಶಾಂತಿ ಮತ್ತು ಧನಾತ್ಮಕ ಶಕ್ತಿ ನೆಲೆಯಾಗುತ್ತದೆ. ಕ್ರಾಸ್ಸುಲಾ ಸಸ್ಯವನ್ನು ಮನೆ, ಕಚೇರಿ ಅಥವಾ ಅಂಗಡಿಯಲ್ಲಿ ಎಲ್ಲಿ ಬೇಕಾದರೂ ನೆಡಬಹುದು. ಈ ಗಿಡ ನೆಟ್ಟ ಮನೆಗಳಲ್ಲಿ ಕುಟುಂಬದ ಸದಸ್ಯರು ಪ್ರಗತಿಯನ್ನು ಪಡೆಯುತ್ತಾರೆ. ಆದರೆ ಅದನ್ನು ನೆಡುವಾಗ ಕೆಲವು ನಿಯಮಗಳ ಬಗ್ಗೆ ಕಾಳಜಿ ವಹಿಸಬೇಕು. 


ಈ ದಿಕ್ಕಿನಲ್ಲಿ ಕ್ರಾಸ್ಸುಲಾ ಸಸ್ಯವನ್ನು ನೆಡಬೇಕು :
ಕ್ರಾಸ್ಸುಲಾ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ. ಈ ಸಸ್ಯವನ್ನು ಮನೆಯ ಒಳಗೆ ಅಥವಾ ಮನೆಯ ಹೊರಗೆ ಎಲ್ಲಿ ಬೇಕಾದರೂ ನೆಡಬಹುದು. ಈ ಸಸ್ಯವನ್ನು  ಮನೆಯ ಮುಖ್ಯ ದ್ವಾರದಲ್ಲಿ ನೆಡುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಮನೆಯ ಬಾಲ್ಕನಿಯಲ್ಲಿಯೂ ಇದನ್ನೂ ನೆಡಬಹುದು. ಆದರೆ ಈ ಸಸ್ಯವನ್ನು ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ದಕ್ಷಿಣ ದಿಕ್ಕಿನಲ್ಲಿ ಈ ಸಸ್ಯವನ್ನು ನೆಟ್ಟರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ  ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Swapna Shastra : ನಿಮ್ಮ ಕನಸಿನಲ್ಲಿ ಸಾವು ಅಥವಾ ಮೃತ ದೇಹ ಕಂಡರೆ ಏನು ಅರ್ಥ ಗೊತ್ತಾ? ಇಲ್ಲಿದೆ ನೋಡಿ


ಕ್ರಾಸ್ಸುಲಾವನ್ನು ಮನಿ ಟ್ರೀ ಮತ್ತು ಲಕ್ಕಿ ಟ್ರೀ ಎಂಡು ಕೂಡಾ ಕರೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ನೆಡುವುದರಿಂದ ವ್ಯಕ್ತಿಯ ಬಡತನ ನಿವಾರಣೆಯಾಗುತ್ತದೆ. ಮತ್ತು ಕುಟುಂಬದಲ್ಲಿ ಸಮೃದ್ಧಿ ನೆಲೆಯಾಗುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.