Personality Development: ನಿಮ್ಮೊಳಗೂ ಇದೆಯಾ ಹದ್ದಿನ ಈ ಗುಣ, ಹಾಗಾದರೆ ಯಶಸ್ಸು ಪಕ್ಕಾ ನಿಮ್ಮದು

Leadership Qualities: ಜೀವನದಲ್ಲಿ ನಮ್ಮನ್ನು ನಾವು ಪ್ರೇರೇಪಿಸಿಕೊಳ್ಳಲು, ನಾವು ಆಕಾಶದಲ್ಲಿ ಹಾರಾಡುವ ಹದ್ದುಗಳತ್ತ ನೋಡಿ ಕಲಿಯಬೇಕು. ನಾವು ನಮ್ಮ ಕೆಲಸದ ಬಗ್ಗೆ ಮತ್ತು ನಮ್ಮ ಗುರಿಯತ್ತ ಸಂಪೂರ್ಣ ಗಮನ ಹರಿಸಬೇಕು.  

Written by - Nitin Tabib | Last Updated : Dec 6, 2022, 08:22 PM IST
  • ಹದ್ದು ಬಾನೆತ್ತರದಲ್ಲಿ ಏಕಾಂಗಿಯಾಗಿ ಹಾರುವುದನ್ನು ನೀವು ಆಗಾಗ್ಗೆ ನೋಡಿರಬಹುದು.
  • ಅದು ಎಂದಿಗೂ ಕೂಡ ಇತರ ಪಕ್ಷಿಗಳಂತೆ ಗುಂಪಿನ ಭಾಗವಾಗುವುದಿಲ್ಲ.
  • ಹಾಗೆಯೇ, ನೀವು ಸಹ ಜೀವನದಲ್ಲಿ ಯಶಸ್ಸನ್ನು ಬಯಸಿದರೆ, ನಂತರ ಏಕಾಂಗಿಯಾಗಿ ಮುನ್ನಡೆಯಿರಿ
Personality Development: ನಿಮ್ಮೊಳಗೂ ಇದೆಯಾ ಹದ್ದಿನ ಈ ಗುಣ, ಹಾಗಾದರೆ ಯಶಸ್ಸು ಪಕ್ಕಾ ನಿಮ್ಮದು title=
Leadership Qualities

Personality Development Tips: ಪ್ರಸ್ತುತ ಯುಗದಲ್ಲಿ, ನೀವೂ ಕೂಡ ಯಶಸ್ಸನ್ನು ಪಡೆಯಲು ಬಯಸುತ್ತಿದ್ದರೆ, ನೀವು ನಿರಂತರವಾಗಿ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ತುಂಬಾ ಮುಖ್ಯವಾದ ಸಂಗತಿ, ಆದರೆ ಕೆಲವೊಮ್ಮೆ ಇತರರಿಂದ ಕಲಿಯುವುದು ಕೂಡ ನಿಮ್ಮ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ಫೂರ್ತಿಯ ವಿಷಯಕ್ಕೆ ಬಂದರೆ, ಜನರು ಒಮ್ಮೆ ಆಕಾಶದಲ್ಲಿ ಹಾರಾಟ ನಡೆಸುವುದನ್ನು ನೋಡಿ ಕಲಿಯಬೇಕು. ಏಕೆಂದರೆ ಹದ್ದುಗಳ ಕೆಲ ಗುಣಗಳು ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಬಹುದು. ಯಾವುದೇ ವ್ಯಕ್ತಿ ಜೀವನದಲ್ಲಿ ಮುಂದೆ ಸಾಗಲು ಪ್ರೇರಣೆ ಪಡೆಯುವುದು ತುಂಬಾ ಆವಶ್ಯಕವಾಗಿದೆ. ಇಲ್ಲಿ ನೀಡಲಾಗಿರುವ ಕೆಲ ಯಶಸ್ಸಿನ ಮಂತ್ರಗಳನ್ನು ನೀವೂ ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಇವುಗಳಲ್ಲಿ ನಾವು ಹದ್ದುಗಳಿಂದ ಕಲಿಯಬೇಕಾದ ಕೆಲ ವಿಷಯಗಳು ಕೂಡ ಶಾಮೀಲಾಗಿವೆ. ಅವು ಯಾವುವು ತಿಳಿದುಕೊಳ್ಳೋಣ ಬನ್ನಿ.

ಹದ್ದು ನಮಗೆ ಏನನ್ನು ಕಲಿಸುತ್ತದೆ?
1. ಹದ್ದು ಬಾನೆತ್ತರದಲ್ಲಿ ಏಕಾಂಗಿಯಾಗಿ ಹಾರುವುದನ್ನು ನೀವು ಆಗಾಗ್ಗೆ ನೋಡಿರಬಹುದು. ಅದು ಎಂದಿಗೂ ಕೂಡ ಇತರ ಪಕ್ಷಿಗಳಂತೆ ಗುಂಪಿನ ಭಾಗವಾಗುವುದಿಲ್ಲ. ಹಾಗೆಯೇ, ನೀವು ಸಹ ಜೀವನದಲ್ಲಿ ಯಶಸ್ಸನ್ನು ಬಯಸಿದರೆ, ನಂತರ ಏಕಾಂಗಿಯಾಗಿ ಮುನ್ನಡೆಯಿರಿ ಮತ್ತು ನಿಮ್ಮ ಮೇಲೆ ನಂಬಿಕೆ ಇಡಿ. ಅನಗತ್ಯವಾಗಿ ಯಾರ ಸಹಾಯವನ್ನೂ ತೆಗೆದುಕೊಳ್ಳದಿರಲು ಪ್ರಯತ್ನಿಸಿ.

2. ಎಲ್ಲರಿಗೂ ಹದ್ದಿನ ಕಣ್ಣು ಇರಬೇಕು ಎಂಬುದನ್ನು ನೀವು ಆಗಾಗ ಕೇಳಿರಬಹುದು. ಜನರು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೀವು ಯಾವುದೇ ಕೆಲಸವನ್ನು ಮಾಡುವಾಗ, ನಿಮ್ಮ ಕೆಲಸದ ಕಡೆಗೆ ಸಂಪೂರ್ಣ ಗಮನ ಹರಿಸಿ ಮತ್ತು ನಿಮ್ಮ ಗುರಿಯತ್ತ ಕೂಡ ಚಿತ್ತ ನೆಡಲು ಪ್ರಯತ್ನಿಸಿ.

ಇದನ್ನೂ ಓದಿ-Vastu Tips 2023: ಹೊಸ ವರ್ಷಕ್ಕಾಗಿ ಕ್ಯಾಲೆಂಡರ್ ಖರೀದಿಸಬೇಕೆ? ಈ ಸಲಹೆಗಳನ್ನು ಅನುಸರಿಸಿ

3. ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಎಂದಿಗೂ ಕೂಡ ತಿನ್ನುವುದಿಲ್ಲ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಅದು ಯಾವಾಗಲೂ ಹೊಸ ಬೇಟೆಯನ್ನು ಹುಡುಕುತ್ತಿರುತ್ತದೆ. ಹಾಗೆಯೇ ನಾವು ಕೂಡ ನಮ್ಮ ಜೀವನದ ಹಳೆಯ ವಿಷಯಗಳನ್ನು ಬಿಟ್ಟು ಹೊಸ ಗುರಿಯತ್ತ ಗಮನ ಹರಿಸಬೇಕು.

ಇದನ್ನೂ ಓದಿ-Guru Gochar 2023: 2023 ರಲ್ಲಿ ಈ ರಾಶಿಗಳ ಜನರಿಗೆ ಭಾರಿ ಲಾಭ ನೀಡಲಿದ್ದಾನೆ ಗುರು

4. ಚಂಡಮಾರುತ ಬಂದಾಗ ಹದ್ದು ಹೆದರುವುದಿಲ್ಲ, ಆದರೆ ಆ ಚಂಡಮಾರುತವನ್ನು ಸವಾಲಾಗಿ ಸ್ವಾಕರಿಸುತ್ತದೆ. ಅದೇ ರೀತಿ ನಾವು ಕೂಡ ಯಾವುದೇ ಸವಾಲನ್ನು ಭಯಪಡದೆ ಎದುರಿಸಬೇಕು ಮತ್ತು ಮುಂಬರುವ ಸವಾಲುಗಳಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News