ಬೆಂಗಳೂರು : ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು ವಾಸ್ತು ಮಹತ್ವದ ಸಲಹೆ  ನೀಡುತ್ತದೆ.  ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳು ಮತ್ತು ಮರಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿಯನ್ನು ಹರಿಸುತ್ತದೆ. ಮರಗಳು ಮತ್ತು ಸಸ್ಯಗಳು ಮಾತ್ರವಲ್ಲ, ಕೆಲವು ಅದೃಷ್ಟದ ಹೂವುಗಳ ಬಗ್ಗೆ ಕೂಡಾ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.  ಮನೆಯಲ್ಲಿ ಈ ಹೂವಿನ  ಗಿಡವನ್ನು ನೆಡುವುದರಿಂದ ಮನೆಯಲ್ಲಿ ಅದೃಷ್ಟದ  ಹೊನಲು ಹರಿಯುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಇಂದು ನಾವು ವಾಸ್ತುಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಹೂವಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಹೂವು ಜೀವನದಲ್ಲಿ ಬರುವ ದುಃಖಗಳನ್ನು ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಬಡತನ ಅಥವಾ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ಈ ಹೂವಿನ ಗಿಡವನ್ನು ಮನೆಯಲ್ಲಿ ನೆಡಬೇಕು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Guru Chandal Yoga: ಈ ಮೂರು ರಾಶಿಯವರಿಗೆ ಆರ್ಥಿಕ ನಷ್ಟ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ 


ಅದೃಷ್ಟ ಖುಲಾಯಿಸುತ್ತದೆ ಈ ಹೂವು :  
ದೀರ್ಘಕಾಲದವರೆಗೆ ಬಡತನ ಅಥವಾ ಯಾವುದೇ ರೀತಿಯ ಆರ್ಥಿಕ  ಸಮಸ್ಯೆಯಿಂದ ಬಳಲುತ್ತಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ದಾಸವಾಳದ ಹೂವುಗಳನ್ನು ನೆಡುವುದು ಸೂಕ್ತ ಎಂದು ಹೇಳಲಾಗಿದೆ.  ದಾಸವಾಳ ಹೂವು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಾಸವಾಳದ ಹೂವು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯ ಎಂದು ಹೇಳಲಾಗುತ್ತದೆ. ಸಂಪತ್ತಿನ ದೇವತೆಯನ್ನು ಪೂಜಿಸುವ ಸಮಯದಲ್ಲಿ,  ದಾಸವಾಳದ ಹೂವನ್ನು ಅರ್ಪಿಸಬೇಕು. ಇನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆ ಮಂದಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.  


ದಾಸವಾಳ ಹೂವಿನ ಪ್ರಯೋಜನಗಳು  : 
- ವಾಸ್ತು ತಜ್ಞರು ಹೇಳುವ ಪ್ರಕಾರ ನೀವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ಮನೆಯಲ್ಲಿ ದಾಸವಾಳ ಹೂವಿನ ಗಿಡವನ್ನು ನೆಡಬೇಕು. ಇದರಿಂದ  ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮೀ ಅನುಗ್ರಹದಿಂದ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ. 


ಇದನ್ನೂ ಓದಿ : ಮುಂದಿನ 55 ದಿನ ಈ ರಾಶಿಯ ಬಾಳಲ್ಲಿ ಧನಲಕ್ಷ್ಮೀ ವೈಭವ: ಸೋಲೆಂಬುದೇ ಇಲ್ಲ-ಬ್ರಹ್ಮಾಂಡದ ಸರ್ವ ಸಂಪತ್ತು ನಿಮ್ಮದೇ! 


- ಮನೆಯಲ್ಲಿ ದಾಸವಾಳ ಹೂವನ್ನು ನೆಡುತ್ತಿದ್ದರೆ, ದಾಸವಾಳದ ಹೂವು ಹಲವಾರು ಬಣ್ಣಗಳಲ್ಲಿ ಇರುತ್ತದೆ. ಈ ಪೈಕಿ ಕೆಂಪು ದಾಸವಾಳ ಹೂವು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. 


- ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು, ಶುಕ್ರವಾರದ ಪೂಜೆಯ ಸಮಯದಲ್ಲಿ ದಾಸವಾಳದ ಹೂವನ್ನು ಅರ್ಪಿಸಬೇಕು. 11 ಶುಕ್ರವಾರದವರೆಗೆ ನಿರಂತರವಾಗಿ ಈ ಪರಿಹಾರವನ್ನು ಮಾಡುವುದರಿಂದ, ವ್ಯಕ್ತಿಯ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.  


- ಮುಂಜಾನೆ ಸೂರ್ಯ ದೇವರಿಗೆ ನಿಯಮಿತವಾಗಿ ನೀರನ್ನು ಅರ್ಪಿಸುವಾಗ, ಅದಕ್ಕೆ ದಾಸವಾಳದ ಹೂವನ್ನು ಸೇರಿಸುವುದರಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಅಷ್ಟೇ ಅಲ್ಲ ವ್ಯಕ್ತಿಯ ಗೌರವವೂ ಹೆಚ್ಚುತ್ತದೆ. 
 
- ಒಬ್ಬ ವ್ಯಕ್ತಿಯ ಜಾತಕದಲ್ಲಿ ಸೂರ್ಯನ ದೋಷವಿದ್ದರೆ, ಅವನು ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ದಾಸವಾಳದ ಹೂವಿನ ಗಿಡವನ್ನು ವನ್ನು ನೆಡಬೇಕು. ಇದು ಶೀಘ್ರದಲ್ಲೇ ವ್ಯಕ್ತಿಗೆ ಪ್ರಯೋಜನವನ್ನು ನೀಡುತ್ತದೆ. 


ಇದನ್ನೂ ಓದಿ : ಈ ಗಿಡದ ಬೇರನ್ನು ತಿಜೋರಿಯಲ್ಲಿರಿಸಿ ಮ್ಯಾಜಿಕ್ ನೋಡಿ, ಹಣದ ಸುರಿಮಳೆಗೈಯುತ್ತಾಳೆ ತಾಯಿ ಲಕ್ಷ್ಮಿ!


ಅದೇ ಸಮಯದಲ್ಲಿ, ದಾಸವಾಳದ ಸಸ್ಯವು ಅಂಗರಾಕ ದೋಷವನ್ನು ತೊಡೆದುಹಾಕಲು ಕೂಡಾ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಂಗಳನು ಜಾತಕದಲ್ಲಿ ದುರ್ಬಲವಾಗಿದ್ದಾಗ, ವ್ಯಕ್ತಿಯು ಮದುವೆಯಲ್ಲಿ ವಿಳಂಬವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಾಸವಾಳದ ಗಿಡವನ್ನು ಮನೆಯಲ್ಲಿ ನೆಟ್ಟರೆ ಶೀಘ್ರವೇ ಶುಭ ಫಲ ಸಿಗುತ್ತದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ