ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಇರಲಿ ಎಂದು ಬಯಸುತ್ತಾನೆ. ತನ್ನ ಜೀವನದಲ್ಲಿ ಯಾವುದೇ ರೀತಿಯಲ್ಲಿಯೂ ಸಿರಿ ಸಂಪತ್ತಿಗೆ ಕೊರತೆಯಾಗಬಾರದು, ಬದುಕು ವೈಭವ ಮತ್ತು ಐಶ್ವರ್ಯದಿಂದ ತುಂಬಿರಬೇಕು ಎಂದು ಬಯಸುವವರೇ ಎಲ್ಲಾ. ಧಾರ್ಮಿಕ ಗ್ರಂಥಗಳ ಪ್ರಕಾರ, ತಾಯಿ ಲಕ್ಷ್ಮೀ ಯಾವಾಗಲೂ ಕೆಲವರ ಮೇಲೆ ದಯೆ ತೋರುತ್ತಾಳೆ. ಜ್ಯೋತಿಷ್ಯದಲ್ಲಿ, ಲಕ್ಷ್ಮೀ ದೇವಿಯ ಆಶೀರ್ವಾದ ಹೊತ್ತಿರುವ ಐದು ಅದೃಷ್ಟ ರಾಶಿಗಳ ಬಗ್ಗೆ ಹೇಳಲಾಗಿದೆ. ಈ ರಾಶಿಯವರು ತಮ್ಮ ಜೀವನದಲ್ಲಿ ಖಂಡಿತವಾಗಿಯೂ ಸಿರಿವಂತರಾಗುತ್ತಾರೆ ಎಂದು ಹೇಳಲಾಗುತ್ತದೆ.
ಲಕ್ಷ್ಮೀ ದೇವಿಯ ನೆಚ್ಚಿನ ರಾಶಿಗಳು :
ವೃಷಭ ರಾಶಿ : ವೃಷಭ ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ. ಶುಕ್ರನು ವೃಷಭ ರಾಶಿಯ ಅಧಿಪತಿ. ಶುಕ್ರನು ಸಂಪತ್ತು, ಸಮೃದ್ಧಿ ಮತ್ತು ಐಷಾರಾಮಿಗಳನ್ನು ಕೊಡುವಾತ. ಶುಕ್ರನ ಅನುಗ್ರಹದಿಂದ, ಈ ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಅವರು ತಮ್ಮ ಜೀವನದಲ್ಲಿ ಅಪಾರ ಸಂಪತ್ತನ್ನು ಗಳಿಸುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇದರೊಂದಿಗೆ, ಯಶಸ್ಸು ಮತ್ತು ಖ್ಯಾತಿಯನ್ನು ಸಹ ಪಡೆಯುತ್ತಾರೆ.
ಇದನ್ನೂ ಓದಿ : ವಕ್ರಾವಸ್ಥೆಯಲ್ಲಿ ಬುಧನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಝಣಝಣಿಸಲಿದೆ ಕಾಂಚಾಣದ ಸದ್ದು!
ಸಿಂಹ ರಾಶಿ : ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯವರಲ್ಲಿ ಸ್ವಾಭಾವಿಕವಾಗಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬಿರುತ್ತದೆ. ಈ ಜನರು ನಾಯಕತ್ವದ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಈ ರಾಶಿಯವರು ಲಕ್ಷ್ಮೀ ದೇವಿಯ ಅನುಗ್ರಹದಿಂದ ಸಮೃದ್ಧ ಮತ್ತು ಯಶಸ್ವಿ ಜೀವನವನ್ನು ನಡೆಸುತ್ತಾರೆ. ಈ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹವೂ ಆಗಿದ್ದು, ಈ ಜನರಿಗೆ ಸಂಪತ್ತು, ವೈಭವ, ಐಶ್ವರ್ಯ ಮತ್ತು ಆಕರ್ಷಣೆಯನ್ನು ನೀಡುತ್ತದೆ. ಶುಕ್ರದೇವ ಮತ್ತು ಲಕ್ಷ್ಮೀ ದೇವಿಯ ಅನುಗ್ರಹದಿಂದ ಈ ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದೇ ಇಲ್ಲ. ಅವರು ಅತ್ಯಂತ ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ.
ಇದನ್ನೂ ಓದಿ : ಮೂರು ರಾಶಿಯಲ್ಲಿ ಗಜ ಲಕ್ಷ್ಮೀ ರಾಜಯೋಗ ! ಇಂದಿನಿಂದಲೇ ಹೆಚ್ಚಾಗುವುದು ಸಂಪತ್ತು ಸಮೃದ್ದಿ
ವೃಶ್ಚಿಕ ರಾಶಿ : ಈ ರಾಶಿಯ ಅಧಿಪತಿ ಮಂಗಳ. ಈ ರಾಶಿಯವರು ಧೈರ್ಯಶಾಲಿಗಳು, ನಿರ್ಭೀತರು, ಹಾಗೆಯೇ ಶ್ರಮಜೀವಿಗಳು. ಅವರ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ಚಿಕ್ಕ ವಯಸ್ಸಿನಲ್ಲೇ ಯಶಸ್ಸನ್ನು ಸಾಧಿಸುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರು ಬಾಲ್ಯದಿಂದಲೂ ಉತ್ತಮ ಆರ್ಥಿಕ ಸಂತೋಷವನ್ನು ಪಡೆಯುತ್ತಾರೆ.
ಮೀನ ರಾಶಿ : ಲಕ್ಷ್ಮೀಯ ನೆಚ್ಚಿನ ರಾಶಿಗಳಲ್ಲಿ ಮೀನ ಕೂಡಾ ಒಂದು. ಮೀನ ರಾಶಿಯವರ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಈ ರಾಶಿಯವರು ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯುತ್ತಾರೆ. ಇವರು ಅದೃಷ್ಟವಂತರು ಮತ್ತು ಪ್ರತಿ ಕೆಲಸದಲ್ಲಿ ತ್ವರಿತ ಯಶಸ್ಸನ್ನು ಪಡೆಯುತ್ತಾರೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.