ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೂ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಮನೆಯ ಯಾವ ಭಾಗದಲ್ಲಿ ಯಾವ ಗಿಡಗಳನ್ನು ನೆಡಬೇಕು ಮತ್ತು ಅವುಗಳನ್ನು ನೆಡುವುದರಿಂದ ಏನು ಪ್ರಯೋಜನ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಈ ಮರಗಳು ಮತ್ತು ಗಿಡಗಳನ್ನು ನೆಡಲು ಶುಭ ಮುಹೂರ್ತವನ್ನೂ ಕೂಡಾ ವಿವರಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಶ್ರಾವಣಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಶ್ರಾವಣ ಮಾಸದಲ್ಲಿ ನೆಡಬಹುದಾದ ಕೆಲವು ಸಸ್ಯಗಳನ್ನು ವಾಸ್ತು ಶಾಸ್ತ್ರದಲ್ಲಿ  ಉಲ್ಲೇಖಿಸಲಾಗಿದೆ. ಈ ಗಿಡಗಳನ್ನು ನೆಡುವುದರಿಂದ ಅಪಾರ ಸಂತೋಷ ಸಮೃದ್ಧಿ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡಗಳನ್ನು  ಶ್ರಾವಣ ಮಾಸದಲ್ಲಿ ನೆಡುವ ಮೂಲಕ ಮಹಾದೇವನ ಜೊತೆಗೆ  ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗುತ್ತದೆ. ಈ ಗಿಡಗಳನ್ನು ನೆಡುವುದರಿಂದ  ಲಕ್ಷ್ಮೀ ದೇವಿ ಸದಾ ಮನೆಯಲ್ಲಿ ನೆಲೆಸಿ ಸಂಪತ್ತನ್ನು ಕರುಣಿಸುತ್ತಾಳೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ಸಸ್ಯಗಳು ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತವೆ :
ಎಕ್ಕದ ಗಿಡ :  ಎಕ್ಕದ ಹೂವುಗಳು ಶಿವನಿಗೆ ಬಹಳ ಪ್ರಿಯ. ಅದಕ್ಕಾಗಿಯೇ ಶಿವನ ಪೂಜೆಯಲ್ಲಿ ಈ ಹೂವುಗಳನ್ನು ಬಳಸಲಾಗುತ್ತದೆ. ಈ ಶ್ರಾವಣ ಮಾಸದಲ್ಲಿ ನಿಮ್ಮ ಮನೆಯಲ್ಲಿ ಎಕ್ಕದ ಹೂವಿನ ಗಿಡವನ್ನು ನೆಟ್ಟರೆ, ಸಂತೋಷ ಮತ್ತು ಸಮೃದ್ಧಿ ಹೊಂದುವುದು ಸಾಧ್ಯವಾಗುತ್ತದೆ.  ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿ ನೆಲೆಯಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. 


ಇದನ್ನೂ ಓದಿ : ಇಂದು ರೂಪುಗೊಳ್ಳಲಿದೆ ಶುಭ ಗಜಕೇಸರಿ ಯೋಗ: ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ದುಡ್ಡಿನ ಸುರಿಮಳೆ


ಧಾತುರ ಗಿಡ: ಧಾತುರಾ ಕೂಡಾ ಶಿವನಿಗೂ ತುಂಬಾ ಪ್ರಿಯ. ಅದಕ್ಕಾಗಿಯೇ ಧಾತುರ ಫಲವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಧಾತುರವನ್ನು ಅರ್ಪಿಸುವುದರಿಂದ, ಶಿವ ಪ್ರಸನ್ನನಾಗುತ್ತಾನೆ. ಶ್ರಾವಣ ಮಾಸದಲ್ಲಿ ಮಾಸದಲ್ಲಿ ನಿಮ್ಮ ಮನೆಯಲ್ಲಿ ಧಾತುರ ಗಿಡವನ್ನು ನೆಟ್ಟರೆ, ಶಿವನ ಅನುಗ್ರಹ ಪಡೆಯಬಹುದು. ಶಿವ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಇದರೊಂದಿಗೆ, ಸಂತೋಷ ಮತ್ತು ಸಮೃದ್ಧಿಯನ್ನು  ತಂದು ಕೊಡುತ್ತಾನೆ. 


ಬಿಲ್ವ ಪತ್ರೆ ಗಿಡ : ಭೋಲೆನಾಥನಿಗೆ ಬಿಲ್ವ ಪತ್ರೆ ಕೂಡಾ ಬಹಳ ಪ್ರಿಯವಾದುದು. ಇದರೊಂದಿಗೆ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಬಿಲ್ವ ಪತ್ರೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಿಲ್ವ ಪತ್ರೆಯ ಗಿಡ ಇದ್ದರೆ ಎಲ್ಲಾ ವಾಸ್ತು ದೋಷ ನಿವಾರಣೆಯಾಗುತ್ತದೆಯಂತೆ. ಅಲ್ಲದೆ, ಮನೆಯಲ್ಲಿ ಯಾವಾಗಲೂ ಸಕಾರಾತ್ಮಕತೆ, ಸಮೃದ್ಧಿ ಮತ್ತು ಸಂತೋಷ ನೆಲೆಯಾಗುತ್ತದೆ. ಶ್ರಾವಣ  ಮಾಸದಲ್ಲಿ ಮನೆಯಲ್ಲಿ ಬಿಲ್ವಪತ್ರೆ  ಗಿಡವನ್ನು ನೆಟ್ಟರೆ ಲಕ್ಷ್ಮೀ ಸದಾ ದಯೆ ತೋರುತ್ತಾಳೆ. 


ಇದನ್ನೂ ಓದಿ : ಈ ರಾಶಿಯವರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ! ಇನ್ನು ಇವರ ಜೀವನದಲ್ಲಿ ಹಣದ ಕೊರತೆ ಇರುವುದೇ ಇಲ್ಲ


ತುಳಸಿ ಗಿಡ: ತುಳಸಿಯು ಲಕ್ಷ್ಮೀ ದೇವಿಯ ರೂಪವಾಗಿದೆ. ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಅದು ತುಂಬಾ ಮಂಗಳಕರ. ಇದರಿಂದ ತಾಯಿ ಲಕ್ಷ್ಮೀ ಸಂತಸಗೊಳ್ಳುತ್ತಾಳೆ. ಮನೆಗೆ ಹಣದ ಆಗಮನ ಹೆಚ್ಚಾಗುತ್ತದೆ. ಸಮೃದ್ಧಿ ಹೆಚ್ಚಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.