ಈ ರಾಶಿಯವರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ! ಇನ್ನು ಇವರ ಜೀವನದಲ್ಲಿ ಹಣದ ಕೊರತೆ ಇರುವುದೇ ಇಲ್ಲ

Kendra Trikon Rajyog 2023:100 ವರ್ಷಗಳ ನಂತರ, ಮೂರು ರಾಶಿಯವರ ಸಂಕ್ರಮಣ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಇದು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರಾಜಯೋಗದ ಮೂಲಕ ಮೂರು ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯುತ್ತಾರೆ .

Written by - Ranjitha R K | Last Updated : Jul 10, 2023, 10:47 AM IST
  • ಗ್ರಹಗಳ ಮೈತ್ರಿ ಯಿಂದ ಶುಭ ಅಶುಭ ಯೋಗಗಳು
  • ಮೂರು ರಾಶಿಯವರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜ ಯೋಗ
  • ಕೇಂದ್ರ ತ್ರಿಕೋನ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ
ಈ ರಾಶಿಯವರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ! ಇನ್ನು ಇವರ ಜೀವನದಲ್ಲಿ ಹಣದ ಕೊರತೆ ಇರುವುದೇ ಇಲ್ಲ  title=

ಬೆಂಗಳೂರು : Kendra Trikon Rajyog 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ  ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸುತ್ತದೆ. ಇದರಿಂದ ಗ್ರಹಗಳ ಮೈತ್ರಿ ಏರ್ಪಟ್ಟು ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಈ ಯೋಗಗಳು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಮಂಗಳ ಗ್ರಹ ಸಂಕ್ರಮಣದ ನಂತರ ಸಿಂಹರಾಶಿಗೆ ಪ್ರವೇಶಿಸಿದ್ದಾನೆ. ಶುಕ್ರ ಗ್ರಹ ಕೂಡಾ  ಸಿಂಹರಾಶಿಯಲ್ಲಿಯೇ ಇದ್ದಾನೆ. ಇದರಿಂದ ಸಿಂಹರಾಶಿಯಲ್ಲಿ ಮಂಗಳ-ಶುಕ್ರ ಸಂಯೋಗ ಉಂಟಾಗಿ ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸುತ್ತಿದೆ. 100 ವರ್ಷಗಳ ನಂತರ, ಮೂರು ರಾಶಿಯವರ ಸಂಕ್ರಮಣ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಂಡಿದೆ. ಇದು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರಾಜಯೋಗದ ಮೂಲಕ ಮೂರು ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯುತ್ತಾರೆ ಮಾತ್ರವಲ್ಲ  ಸಾಕಷ್ಟು ಪ್ರಗತಿಯನ್ನು ಕೂಡಾ ಪಡೆಯುತ್ತಾರೆ. 

ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ನೀಡುತ್ತದೆ :
ಮೇಷ ರಾಶಿ : ಮೇಷ ರಾಶಿಯ ಸಂಕ್ರಮಣ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ರಚನೆಯಾಗುವುದರಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಹರಿದು ಬರುತ್ತದೆ. ಆದಾಯ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಈ  ರಾಶಿಯವರ ಮಾತಿನ ಶಕ್ತಿಯ ಮೇಲೆಯೇ ಕೆಲಸ ನಡೆಯುತ್ತದೆ. ಹಳೆಯ ಸಮಸ್ಯೆಗಳು ಬಗೆಹರಿಯಲಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ : Weekly Horoscope: ಜುಲೈ ಎರಡನೇ ವಾರ ಈ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು

ತುಲಾ ರಾಶಿ: ತುಲಾ ರಾಶಿಯಲ್ಲಿ ರೂಪುಗೊಳ್ಳುವ ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರಿಗೆ ಬಹಳ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕೆಲವು ದೊಡ್ಡ ವಿಷಯದಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ವ್ಯಕ್ತಿತ್ವ ಬೆಳಗುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಆದಾಯ ಹೆಚ್ಚಾಗುತ್ತದೆ. ಸ್ಥಾನ ಮತ್ತು ಹಣವನ್ನು ಪಡೆಯುವ ಮೂಲಕ ತುಂಬಾ ಸಂತೋಷವಾಗಿರುತ್ತೀರಿ. ಹಣ ಸಂಪಾದನೆಗೆ ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. 

ಸಿಂಹ ರಾಶಿ : ಸಿಂಹ ರಾಶಿಯಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರಚನೆಯಾಗುವುದರಿಂದ ಈ ರಾಶಿಯವರಿಗೆ ಬಹಳಷ್ಟು ಲಾಭಗಳು ದೊರೆಯುತ್ತವೆ.  ಸಾಲ ನೀಡಿ ಹೊರಗೆ ಉಳಿದಿರುವ ಹಣ ಮರಳಿ ಕೈ ಸೇರುತ್ತದೆ. ಆದಾಯ ಹೆಚ್ಚಾಗಲಿದೆ. ವ್ಯಾಪಾರಕ್ಕೆ ವಿಶೇಷವಾಗಿ ಸಮಯ ಉತ್ತಮವಾಗಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ. ಹೊಸ ಮನೆ-ಕಾರು ಖರೀದಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ Plant Vastu: ಸಾಕಷ್ಟು ಅದೃಷ್ಟ ಹಾಗೂ ಹಣ ಕರುಣಿಸುವ ಈ ಸಸ್ಯಗಳನ್ನು ಇಂದೇ ಮನೆಗೆ ತನ್ನಿ!

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News