ಶ್ರಾವಣ ಮಾಸದ ವಿಶೇಷತೆ:  ಶ್ರಾವಣ ಮಾಸವನ್ನು ಶಿವನಿಗೆ ಪ್ರಿಯವಾದ ಮಾಸ ಎಂದು ಹೇಳಲಾಗುತ್ತದೆ. ಈ ತಿಂಗಳು ಶಿವನನ್ನು ಮೆಚ್ಚಿಸಲು ತುಂಬಾ ಮಂಗಳಕರ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಸದಾ  ಶಿವ-ಪಾರ್ವತಿಯ ಆಶೀರ್ವಾದ ಸಿಗಲಿದೆ ಎಂದು ಹೇಳಲಾಗುತ್ತದೆ. ಅಂತಹ ಸಸ್ಯಗಳು ಯಾವುವು, ಯಾವ ಸಸ್ಯಗಳನ್ನು ನೆಡುವುದರಿಂದ ಭಗವಾನ್ ಭೋಲೆನಾಥ ಮತ್ತು ತಾಯಿ ಪಾರ್ವತಿಯ ಕೃಪೆಗೆ ಪಾತ್ರರಾಗಬಹುದು ತಿಳಿಯೋಣ...


COMMERCIAL BREAK
SCROLL TO CONTINUE READING

ಶಿವ-ಪಾರ್ವತಿ ಆಶೀರ್ವಾದಕ್ಕಾಗಿ ಶ್ರಾವಣ ಮಾಸದಲ್ಲಿ ತಪ್ಪದೇ ಈ ಸಸ್ಯಗಳನ್ನು ನೆಡಿ :
* ಎಕ್ಕದ ಗಿಡ: 

ಎಕ್ಕದ ಗಿಡವನ್ನು ಶಿವನಿಗೆ ಬಹಳ ಪ್ರಿಯವಾದ ಸಸ್ಯ ಎಂದು ನಂಬಲಾಗಿದೆ. ನೀವು ಶಿವನನ್ನು ಮೆಚ್ಚಿಸಲು ಶ್ರಾವಣ ಮಾಸದಲ್ಲಿ ಮನೆಯ ಮುಂದೆ ಎಕ್ಕದ ಗಿಡವನ್ನು ನೆಡುವುದು ಸರಳ ಪರಿಹಾರವಾಗಿದೆ. ಶ್ರಾವಣ ಮಾಸದಲ್ಲಿ ಮನೆಯ ಮುಂದೆ ಬಿಳಿ ಎಕ್ಕದ ಗಿಡವನ್ನು ನೆಟ್ಟು ನಿತ್ಯ ಭಕ್ತಿಯಿಂದ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸಂಪತ್ತಿಗೆ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಶ್ರಾವಣ ಮಾಸದಲ್ಲಿ ಮನೆಯ ಈ ಜಾಗದಲ್ಲಿ ಶಿವನ ಮೂರ್ತಿ ಇಟ್ಟರೆ ಸದಾ ಇರುತ್ತೆ ಸುಖ-ಶಾಂತಿ


* ಶಮಿ ಸಸ್ಯ:
ಈ ಸಸ್ಯವನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ಪವಿತ್ರವೆಂದು ವಿವರಿಸಲಾಗಿದೆ. ಶಮಿ ಸಸ್ಯವು ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ.  ಶನಿಯು ಶಿವನ ವಿಶೇಷ ಭಕ್ತನಾಗಿರುವುದರಿಂದ ಶ್ರಾವಣ ಮಾಸದಲ್ಲಿ ಶಿವಲಿಂಗದ ಮೇಲೆ ಶಮಿ ಎಲೆಗಳನ್ನು ಅರ್ಪಿಸುವ ಭಕ್ತರಿಗೆ ಸಾಕಷ್ಟು ಪುಣ್ಯ ಲಭಿಸುತ್ತದೆ ಮತ್ತು ಗೌರಿ-ಶಂಕರರ ಕೃಪೆಯು ಅವರ ಮೇಲೆ ಸದಾ ಉಳಿಯಲಿದೆ ಎಂದು ಹೇಳಲಾಗುತ್ತದೆ. 


* ಧಾತುರ ಗಿಡ:
ಧಾತುರ ಗಿಡವು ಶಿವನಿಗೆ ಎಷ್ಟು ಪ್ರಿಯವಾದುದು ಎಂಬುದು ಎಲ್ಲರಿಗೂ ತಿಳಿದಿದೆ. ಈ ಸಸ್ಯವನ್ನು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಈ ಸಸ್ಯವನ್ನು ನಿಮ್ಮ ಮನೆಯ ತೋಟದಲ್ಲಿ ನೆಡುವುದರಿಂದ ಶಿವ-ಪಾರ್ವತಿ ಸಂತುಷ್ಟರಾಗಿ ಭಕ್ತರ ಇಷ್ಟಾರ್ಥವನ್ನು ಪೂರೈಸಲಿದ್ದಾರೆ.


ಇದನ್ನೂ ಓದಿ- ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ ಪ್ರಾಪ್ತಿಯಾಗುವುದು ಶಿವನ ವಿಶೇಷ ಕೃಪೆ


* ಚಂಪಾ ಸಸ್ಯ:
ಉತ್ತಮ ಗಿಡಮೂಲಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಚಂಪಾ ಸಸ್ಯವು ವಾಯು ಮಾಲಿನ್ಯವನ್ನು ನಿಯಂತ್ರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಇದರ ಹೂವಿನ ಪರಿಮಳವು ಎಂತಹವರನ್ನೂ ತನ್ನತ್ತ ಆಕರ್ಷಿಸುತ್ತದೆ. ಇದರ ವಿಶೇಷತೆ ಎಂದರೆ ಒಳಾಂಗಣ, ಹೊರಾಂಗಣ ಎಲ್ಲಿ ಬೇಕಾದರೂ ಬದುಕಬಲ್ಲ ಈ ಸಸ್ಯ ನೀರಿಲ್ಲದೆ ಹಲವು ದಿನಗಳ ವರೆಗೆ ಬದುಕಬಲ್ಲ ಸಸ್ಯ. ಶ್ರಾವಣ ಮಾಸದಲ್ಲಿ ಈ ಸಸ್ಯವನ್ನು ನೆಡುವುದರಿಂದ ವ್ಯಕ್ತಿಯ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಲಾಗುತ್ತದೆ.


* ಬಿಲ್ವ ಪತ್ರೆ:
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಶುದ್ಧವಾದ ಮನಸ್ಸಿನಿಂದ ಶಿವನಿಗೆ ಒಂದು ಬಿಲ್ವ ಪತ್ರೆಯನ್ನು ಅರ್ಪಿಸಿದರೂ ಶಿವ ಭಕ್ತರ ಕೂಗಿಗೆ ಕಿವಿಗೊಡುತ್ತಾನೆ. ಇದನ್ನು ಶಿವನಿಗೆ ಬಹಳ ಪ್ರಿಯವಾದ ಸಸ್ಯ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಬಿಲ್ವ ಪತ್ರೆ ಸಸ್ಯ ನೆಡುವುದರಿಂದ ಅಪಾರ ಸಂಪತ್ತು ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.