ಈ ಪೂಜಾ ಸಾಮಗ್ರಿಗಳು ಕೈ ಜಾರಿ ಬಿದ್ದರೆ ಎದುರಾಗುವುದಂತೆ ಭಾರೀ ಅಶುಭ ಫಲ

 ಕುಂಕುಮ ಅಂದರೆ ಮಂಗಳಕರ ಮತ್ತು ಅದೃಷ್ಟದ ಸಂಕೇತ ಎಂದೇ ಹೇಳಲಾಗುತ್ತದೆ. ವ್ಯಕ್ತಿಯ ಕೈಯಿಂದ ಕುಂಕುಮ ಬಿದ್ದರೆ, ಕುಟುಂಬ ಅಥವಾ ಗಂಡನ ಮೇಲೆ ಕೆಲವು ರೀತಿಯ ತೊಂದರೆಗಳು ಎದುರಾಗಲಿವೆ ಎಂದರ್ಥ. 

ಬೆಂಗಳೂರು : ಅನೇಕ ಬಾರಿ ಪೂಜೆ ಮಾಡುವಾಗ ಕೆಲವು ವಸ್ತುಗಳು ಕೈ ಜಾರಿ ಕೆಳಗೆ ಬೀಳುತ್ತವೆ. ಆದರೆ ಪೂಜೆ ವೇಳೆ ಕೆಲವು ಸಾಮಗ್ರಿಗಳು ನೆಲದ ಮೇಲೆ ಬೀಳುವುದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಕೆಲವು ವಸ್ತುಗಳು ಕೆಳಗೆ ಬಿದ್ದರೆ ಅದು ಅತ್ಯಂತ ಅಶುಭ ಎಂದೇ ಹೇಳಲಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕುಂಕುಮ : ಕುಂಕುಮ ಅಂದರೆ ಮಂಗಳಕರ ಮತ್ತು ಅದೃಷ್ಟದ ಸಂಕೇತ ಎಂದೇ ಹೇಳಲಾಗುತ್ತದೆ. ವ್ಯಕ್ತಿಯ ಕೈಯಿಂದ ಕುಂಕುಮ ಬಿದ್ದರೆ, ಕುಟುಂಬ ಅಥವಾ ಗಂಡನ ಮೇಲೆ ಕೆಲವು ರೀತಿಯ ತೊಂದರೆಗಳು ಎದುರಾಗಲಿವೆ ಎಂದರ್ಥ. ಹೀಗಾದಾಗ ನೆಲಕ್ಕೆ ಬಿದ್ದ ಕುಂಕುಮವನ್ನು ಕಾಲಿನಿಂದ ಸ್ವಚ್ಛಗೊಳಿಸಬಾರದು ಅಥವಾ ಪೊರಕೆ ಬಳಸಬಾರದು. ಸ್ವಚ್ಛವಾದ ಬಟ್ಟೆಯಿಂದ ಎತ್ತಿಕೊಂಡು ಡಬ್ಬಕ್ಕೆ ಹಾಕಬೇಕು. 

2 /5

ಪ್ರಸಾದ : ಪ್ರಸಾದ ನೆಲಕ್ಕೆ ಬಿದ್ದರೆ ಅದನ್ನು ಅಶುಭ ಎಂದೇ ಕರೆಯಲಾಗುತ್ತದೆ.  ಪ್ರಸಾದ ನೆಲಕ್ಕೆ ಬಿದ್ದರೆ ತಕ್ಷಣ ಅದನ್ನು ಎತ್ತಿಕೊಂಡು ಹಣೆಗೆ ಒತ್ತಿಕೊಳ್ಳಬೇಕು. ಅದನ್ನು ತಿನ್ನದಿದ್ದರೆ, ನೀರಿನಲ್ಲಿ ಎಸೆಯಬೇಕು ಅಥವಾ ಪಾತ್ರೆಯಲ್ಲಿ ಹಾಕಬೇಕು. 

3 /5

ನೀರು ತುಂಬಿದ ಕಲಶ: ಪೂಜೆಗಾಗಿ ಕಲಶದಲ್ಲಿ ನೀರು ಹೊತ್ತೊಯ್ಯುವಾಗ ಕೈಯಿಂದ ಬಿದ್ದರೆ ಅಶುಭವೆಂದು ನಂಬಲಾಗಿದೆ. ಕಲಶದ ನೀರು ಕೆಳಗೆ ಬೀಳುತ್ತಿದೆ ಎಂದರೆ  ಪೂರ್ವಜರು ಕೋಪಗೊಂಡಿದ್ದಾರೆ ಎಂದರ್ಥ. ಹೀಗಾದಾಗ ಕುಟುಂಬದಲ್ಲಿ ಸಮಸ್ಯೆ ಉಂಟಾಗುತ್ತದೆ. 

4 /5

ದೇವರ ವಿಗ್ರಹ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವರ ವಿಗ್ರಹವನ್ನು ಶುಚಿಗೊಳಿಸುವಾಗ ಅಥವಾ ಎತ್ತುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೈಯಿಂದ ಬಿದ್ದು ದೇವರ ವಿಗ್ರಹವನ್ನು ಒಡೆಯುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಕುಟುಂಬದ ಹಿರಿಯ ಸದಸ್ಯರ ಮೇಲೆ ಬಿಕ್ಕಟ್ಟು ಉಂಟಾಗಲಿದೆ.    

5 /5

ಪೂಜೆಯ ದೀಪ: ಒಬ್ಬ ವ್ಯಕ್ತಿಯ ಒಳ್ಳೆಯ ಅಥವಾ ಕೆಟ್ಟ ಸಮಯದ ಮೊದಲು ದೇವರು ಕೆಲವು ಸೂಚನೆಗಳನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಇವುಗಳನ್ನು ಸಮಯೋಚಿತವಾಗಿ ಅರ್ಥಮಾಡಿಕೊಂಡರೆ, ಬಹಳಷ್ಟು ಮಟ್ಟಿಗೆ ಬರಬಹುದಾದ ಸಮಸ್ಯೆಗಳನ್ನು ತಪ್ಪಿಸಬಹುದು. ಪೂಜೆಯ ದೀಪವು ಕೈಯಿಂದ ಬೀಳುವುದು  ಎದುರಾಗಬಹುದಾದ ಸಂಕಟದ ಸಂಕೇತ.