ರಾಹು ಸಂಕ್ರಮಣ 2022: ಜ್ಯೋತಿಷ್ಯದಲ್ಲಿ ರಾಹು-ಕೇತುವನ್ನು ಕೋಪದ ಸ್ವಭಾವದ ಗ್ರಹವೆಂದು ಮತ್ತು ಇವೆರಡನ್ನೂ ಪಾಪ ಗ್ರಹಗಳು ಎಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಅವರ ಜೀವನ ಸಂಕಷ್ಟಗಳ ಸರಮಾಲೆಯಿಂದ ತುಂಬಿರುತ್ತದೆ. ಅಂತೆಯೇ, ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ನಾನಾ ರೀತಿಯ ಸುಖ-ಸಂಪತ್ತನ್ನೂ ಸಹ ಕರುಣಿಸುತ್ತಾನೆ. ಇನ್ನೆರಡು ವಾರಗಳ ಬಳಿಕ ಮುಂದಿನ ಮೂರು ತಿಂಗಳುಗಳ ಕಾಲ ಮೂರು ರಾಶಿಯವರಿಗೆ ರಾಹು ಕೃಪೆ ತೋರಲಿದ್ದಾನೆ. ಈ ಸಂದರ್ಭದಲ್ಲಿ ಅವರು ಅಪಾರ ಹಣ, ಸಂಪತ್ತನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರುವ 3 ತಿಂಗಳಲ್ಲಿ ರಾಹು ಗ್ರಹ ಮೂರು ರಾಶಿಗಳ ಮೇಲೆ ತನ್ನ ಆಶೀರ್ವಾದವನ್ನು ನೀಡಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ತಾಯಿ ಲಕ್ಷ್ಮಿ ಅವರ ಮನೆಗೆ ಬರುತ್ತಾಳೆ ಮತ್ತು ಅವರು ವೃತ್ತಿ ರಂಗದಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ. ಈ ಮೂರು ರಾಶಿಯವರಿಗೆ ರಾಹು ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎನ್ನಲಾಗುತ್ತಿದೆ. 


ಇದನ್ನೂ ಓದಿ- Shadashtak Yog: ಸೂರ್ಯ ಮತ್ತು ರಾಹುವಿನಿಂದ ಷಡಷ್ಟಕ ಯೋಗ, ಈ ರಾಶಿಯವರು ಜಾಗರೂಕರಾಗಿರಿ


ಮಿಥುನ ರಾಶಿಯವರು ಹೊಸ ಆಸ್ತಿಯ ಮಾಲೀಕರಾಗಬಹುದು:
ರಾಹುವಿನ ಕೃಪೆಯಿಂದ ಹದಿನೈದು ದಿನಗಳ ಬಳಿಕ ಮಿಥುನ ರಾಶಿಯವರಿಗೆ ಅನೇಕ ಹಂತಗಳಲ್ಲಿ ಸಂತೋಷ ಇರುತ್ತದೆ . ನ್ಯಾಯಾಲಯದ ಮೊಕದ್ದಮೆಗಳಿಂದ ಮುಕ್ತಿ ಸಿಗಲಿದೆ. ಇದರೊಂದಿಗೆ ಆರ್ಥಿಕ ಕ್ಷೇತ್ರದಲ್ಲಿಯೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭ ಗಳಿಸುವ ಸಾಮರ್ಥ್ಯ ಅವರಲ್ಲಿದೆ. ಮುಂದಿನ ಮೂರು ತಿಂಗಳಲ್ಲಿ ಅವರು ಹೊಸ ಆಸ್ತಿಯ ಮಾಲೀಕರಾಗಬಹುದು. ಮನೆಗೆ ವಾಹನ ಖರೀದಿಯ ಯೋಗವೂ ಇದೆ.


ಕರ್ಕಾಟಕ ರಾಶಿಯವರಿಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ:
ಕರ್ಕಾಟಕ ರಾಶಿಯವರಿಗೆ ಮುಂಬರುವ ಮೂರು ತಿಂಗಳು ವರದಾನಕ್ಕಿಂತ ಕಡಿಮೆಯಿಲ್ಲ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿರುತ್ತದೆ. ಅವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅವರಿಗೆ ಯಶಸ್ಸು ಸಿಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಯೋಗವೂ ಇದೆ.  


ಇದನ್ನೂ ಓದಿ- Jupiter Retrograde 2022: 12 ವರ್ಷಗಳ ಬಳಿಕ ಈ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ, ಈ ಜನರಿಗೆ ಲಾಭವೇ ಲಾಭ


ಮೀನ ರಾಶಿಯವರಿಗೆ ಹಠಾತ್ ಧನಪ್ರಾಪ್ತಿ:
ಮುಂದಿನ ಮೂರು ತಿಂಗಳು ಮೀನ ರಾಶಿಯವರಿಗೆ ಸಂತಸ ತುಂಬಲಿದೆ. ಈ ರಾಶಿಯವರಿಗೆ ಹಠಾತ್ ಧನ ಪ್ರಾಪ್ತಿ ಸಾಧ್ಯತೆ ಇದೆ.  ಇದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ವಹಿಸುತ್ತಾರೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಸರ್ವತೋಮುಖ ಪ್ರಗತಿ ಹೊಂದುವ ಸಾಧ್ಯತೆ ಇದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.