ಬೆಂಗಳೂರು : ಹಿಂದೂ ಧರ್ಮದಲ್ಲಿ, ಸೂರ್ಯನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ಗ್ರಹವು ಖ್ಯಾತಿ, ಶಕ್ತಿ, ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ತಿಂಗಳು, ಶನಿವಾರ ಅಂದರೆ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 7:11 ರಿಂದ, ಸೂರ್ಯನು ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ.
ಸೂರ್ಯನ ಈ ರಾಶಿ ಬದಲಾವಣೆಯು ಈ ಮೂರು ರಾಶಿಗಳ ಮೇಲೆ ಶುಭ ಪರಿಣಾಮವನ್ನು ಬೀರಲಿದೆ:-
ವೃಶ್ಚಿಕ ರಾಶಿ : ಸೂರ್ಯನ ಈ ರಾಶಿ ಬದಲಾವಣೆಯು ವೃಶ್ಚಿಕ ರಾಶಿಯವರಿಗೆ ಬಹಳ ಶುಭ ಕರವಾಗಿರಲಿದೆ. ಈ ರಾಶಿಯವರ ಆದಾಯವು ಹೆಚ್ಚಾಗಬಹುದು. ವ್ಯವಹಾರದಲ್ಲಿ ಹೊಸ ಆರ್ಡರ್‌ಗಳು ಇಗುವ ಸಾಧ್ಯತೆ ಇದೆ. ಆಸ್ತಿ ಮತ್ತು ವಾಹನಗಳನ್ನು ಖರೀದಿಸುವುದು ಪ್ರಯೋಜನಕಾರಿ ಸಾಬೀತಾಗಲಿದೆ.
ಇದನ್ನೂ ಓದಿ : Zodiac Signs : ಪ್ರೀತಿ ವಿಚಾರದಲ್ಲಿ ನಿಷ್ಠಾವಂತರು ಈ ರಾಶಿಯ ಯುವತಿಯರು!
ಸಿಂಹ ರಾಶಿ : ವೃತ್ತಿ ಮತ್ತು ವ್ಯವಹಾರದಲ್ಲಿ ಭಾರೀ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಬಹುದು. ನೀವು ಯಾರಿಗಾದರೂ ಸಾಲ ನೀಡಿದ್ದರೆ, ಅಥವಾ ಯಾರಾದರೂ ನಿಮಗೆ ನೀಡಬೇಕಾದ ಹಣ ಕೊಡಲು ಬಾಕಿಯಿದ್ದರೆ ಆ ಹಣ ಬಂದು ನಿಮ್ಮ ಕೈ ಸೇರಬಹುದು.
ಧನು ರಾಶಿ : ನ್ಯಾಯಾಲಯದಲ್ಲಿ ಪ್ರಕರಣವಿದ್ದರೆ, ಕೇಸ್ ನಲ್ಲಿ ನೀವು ಗೆಲುವು ಸಾಧಿಸಬಹುದು.ಹೊಸ ಕೆಲಸದ ಆಫರ್ ಸಿಗಬಹುದು.
ಅಶುಭ ಷಡಷ್ಟಕ ಯೋಗ :
ಸೂರ್ಯನು ಕನ್ಯಾರಾಶಿ ಪ್ರವೇಶಿಸುವುದರೊಂದಿಗೆ ಮೇಷ ರಾಶಿಯಲ್ಲಿ ರಾಹು ಜೊತೆ ಷಡಾಷ್ಟಕ ಯೋಗ ಉಂಟಾಗುತ್ತದೆ. ಇದು ತುಂಬಾ ಅಶುಭ ಯೋಗವಾಗಿದ್ದು ಹಲವಾರು ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಯೋಗವು ನೈಸರ್ಗಿಕ ವಿಕೋಪವನ್ನು ತರಬಹುದು. ಎರಡು ದೇಶಗಳ ನಡುವಿನ ಸಂಬಂಧವನ್ನು ಅತ್ಯಂತ ಉದ್ವಿಗ್ನಗೊಳಿಸಬಹುದು. ಆದರೂ ಈ ಮೂರು ರಾಶಿಯವರು ಮಾತ್ರ ಈ ಯೋಗದಿಂದ ಭಾರೀ ಪ್ರಯೋಜನವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ : Mangal Gochar 2022: ಶೀಘ್ರದಲ್ಲಿಯೇ ಮಿಥುನ ರಾಶಿಗೆ ಮಂಗಳನ ಪ್ರವೇಶ, ಈ 3 ರಾಶಿಗಳ ಜನರಿಗೆ ಭಾರಿ ಲಾಭ
ಮೇಷ ರಾಶಿ : ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಲಿದೆ. ಆರೋಗ್ಯ ಲಾಭಗಳಿರುತ್ತವೆ.
ಕರ್ಕ ರಾಶಿ : ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲ ಸಿಗಲಿದೆ.
ವೃಶ್ಚಿಕ ರಾಶಿ : ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭವಿರುತ್ತದೆ, ಹೊಸ ಆಸ್ತಿಯನ್ನು ಖರೀದಿಸಿದರೆ ಲಾಭದ ಸ್ಥಾನದಲ್ಲಿರುತ್ತೀರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.