Rahu Gochar 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಗಳನ್ನು ಪಾಪ, ಕ್ರೂರ ಗ್ರಹಗಳು ಎಂತಲೇ ಕರೆಯಲಾಗುತ್ತದೆ. ಅಷ್ಟೇ ಅಲ್ಲ, ರಾಹುವು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹ. ಶನಿಯಷ್ಟೇ ಕಾಡುವ ರಾಹು ಸುಮಾರು ಒಂದೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇದೀಗ ಈ ವರ್ಷ ಅಕ್ಟೋಬರ್ 30, 2023ರಂದು ರಾಹು ರಾಶಿ ಪರಿವರ್ತನೆ ಹೊಂದಲಿದ್ದಾನೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದಲ್ಲಿ, ರಾಹುವಿನ ಸ್ವಭಾವವನ್ನು ಕ್ರೂರ ಎಂದು ಪರಿಗಣಿಸಲಾಗಿದ್ದರೂ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಇದರ ಪರಿಣಾಮವೂ ಶುಭಕರವಾಗಿಯೇ ಇರುತ್ತದೆ ಎಂದು ನಂಬಲಾಗಿದೆ. ಇದೀಗ, ಅಕ್ಟೋಬರ್ ತಿಂಗಳಿನಲ್ಲಿ ರಾಹು ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಸುಖ-ಸಂಪತ್ತಿನ ಜೊತೆಗೆ ಉತ್ತಮ ಆರೋಗ್ಯ, ಭೂಮಿ-ವಾಹನ ಲಾಭವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- Shani Margi: ದೀಪಾವಳಿಗೂ ಮುನ್ನ ಶನಿ ನೇರ ಸಂಚಾರ, ಈ 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ


2023ರಲ್ಲಿ ರಾಹು ರಾಶಿ ಪರಿವರ್ತನೆ: ಮೂರು ರಾಶಿಯವರಿಗೆ ಅಪಾರ ಸಂಪತ್ತು-ಸಮೃದ್ಧಿ: 
ವೃಷಭ ರಾಶಿ: 

ಅಕ್ಟೋಬರ್ ತಿಂಗಳಾಂತ್ಯದಲ್ಲಿ ರಾಹು ರಾಶಿ ಪರಿವರ್ತನೆಯಿಂದಾಗಿ ವೃಷಭ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಈ ಸಮಯದಲ್ಲಿ ನಿಮ್ಮ ದೀರ್ಘಕಾಲದ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿದ್ದು ಇದರಿಂದ ಸಾಕಷ್ಟು ಪ್ರಯೋಜನವನ್ನು ಕೂಡ ನೀವು ಪಡೆಯುವಿರಿ. ರಾಜಕೀಯ ರಂಗದೊಂದಿಗೆ ಸಂಬಂಧ ಹೊಂದಿರುವವರಿಗೆ ಉತ್ತಮ ಸಮಯ ಇದಾಗಿದ್ದು ಯಶಸ್ಸಿನ ಉತ್ತುಂಗವನ್ನು ಏರುವಿರಿ. 


ಕನ್ಯಾ ರಾಶಿ: 
ರಾಹು ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೆ ಸಂಬಂಧಗಳಲ್ಲಿ ಸುಧಾರಣೆ ತರಲಿದೆ. ಈ ಸಮಯದಲ್ಲಿ ನಿಮ್ಮಿಂದ ದೂರವಾಗಿದ್ದ ನಿಮ್ಮ ಆಪ್ತರು ಮತ್ತೆ ನಿಮ್ಮನ್ನು ಸೇರುವ ಸಂಭವವಿದೆ. ವ್ಯಾಪಾರಸ್ಥರು ಕೊಂಚ ಬುದ್ದಿವಂತಿಕೆಯಿಂದ ಕೆಲಸ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ಇಲ್ಲವೇ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದಾಗ್ಯೂ, ಹಠಾತ್ ಧನಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. 


ಇದನ್ನೂ ಓದಿ- ಮನೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ


ವೃಶ್ಚಿಕ ರಾಶಿ: 
ಒಂದೂವರೆ ವರ್ಷದ ಬಳಿಕ ರಾಹು ಸಂಚಾರವು ವೃಶ್ಚಿಕ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಉತ್ತಮ ಫಲಗಳನ್ನು ನೀಡಲಿದೆ. ಮೊದಲನೆಯದಾಗಿ ನೀವು ದೀರ್ಘ ಸಮಯದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಇದರೊಂದಿಗೆ ವೃತ್ತಿ ಬದುಕಿನಲ್ಲಿ ನಿಮ್ಮ ಸ್ಥಾನ ಮೇಲುಗೈ ಸಾಧಿಸಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದೆ. ಇದರೊಂದಿಗೆ ವರ್ಷಾಂತ್ಯದಲ್ಲಿ ವಿದೇಶ ಪ್ರಯಾಣ ಯೋಗವೂ ಇದೆ. ಮಾತ್ರವಲ್ಲ, ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.