Rahu Ketu Gochar: ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ ಈ ರಾಶಿಯವರ ಕೆಟ್ಟ ದಿನಗಳು, ಆರಂಭವಾಗಲಿದೆ ಸುವರ್ಣ ಯುಗ
Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಪಾಪ-ಕ್ರೂರ ಗ್ರಹಗಳು ಎಂದು ಬಣ್ಣಿಸಲ್ಪಡುವ ರಾಹು-ಕೇತು ಗ್ರಹಗಲು ಶೀಘ್ರದಲ್ಲೇ ರಾಶಿ ಪರಿವರ್ತನೆ ಹೊಂದಲಿವೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ.
Rahu Ketu Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಸಹ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಕ್ರೂರ, ಪಾಪ ಗ್ರಹಗಳೆಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳು ಪ್ರತಿ ಒಂದೂವರೆ ವರ್ಷಗಳಿಗೆ ಒಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದೀಗ ಈ ವರ್ಷ ಅಕ್ಟೋಬರ್‌ನಲ್ಲಿ ಈ ಗ್ರಹಗಳು ರಾಶಿ ಪರಿವರ್ತನೆ ಹೊಂದಲಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್ 30, 2023ರಂದು ರಾಹು ಗ್ರಹವು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಿದರೆ, ಕೇತು ಗ್ರಹ ತುಲಾ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯಲ್ಲಿ ಸಾಗಲಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ರಾಹು-ಕೇತು ಸಂಚಾರದಿಂದ ಮೂರು ರಾಶಿಯವರಿಗೆ ಕಷ್ಟದ ದಿನಗಳು ಮುಗಿದು ಒಳ್ಳೆಯ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Mangal Asta: ಈ 5 ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಸಮಸ್ಯೆ
ರಾಹು-ಕೇತು ಸಂಕ್ರಮಣ: ಅಕ್ಟೋಬರ್ 30ರಿಂದ ಒಂದೂವರೆ ವರ್ಷ ಈ ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ:-
ಮೇಷ ರಾಶಿ:
ಮೇಷ ರಾಶಿ ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿರುವ ರಾಹು ಈ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದೆ. ಯಾವುದಾದರೂ ವಿವಾದಾತ್ಮಕ ವಿಷಯಗಳಲ್ಲಿ ಸಿಲುಕಿದ್ದರೆ ಅವುಗಳಿಂದ ಪಾರಾಗಬಹುದು. ಹಣಕಾಸಿನ ವಿಷಯಗಳು ಉತ್ತಮವಾಗಿರಲಿದ್ದು ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡುವಿರಿ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಗ್ಯೂ, ಅಪಘಾತಗಳ ಬಗ್ಗೆ ಜಾಗರೂಕರಾಗಿರಿ.
ವೃಷಭ ರಾಶಿ:
ಈ ತಿಂಗಳಾಂತ್ಯದಲ್ಲಿ ರಾಹು-ಕೇತು ರಾಶಿ ಬದಲಾವಣೆಯು ಮುಂದಿನ ಒಂದೂವರೆ ವರ್ಷಗಳವರೆಗೆ ವೃಷಭ ರಾಶಿಯವರ ಜೀವನದಲ್ಲಿ ಸಂತೋಷದ ಹೊನಲನ್ನು ತರಲಿದೆ. ಈ ಸಂದರ್ಭದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದ್ದು ಬೃಹತ್ ಮೊತ್ತವನ್ನು ಕಲೆ ಹಾಕುವಿರಿ. ನೀವು ಹಿಂದೆ ಮಾಡಿದ ಹೂಡಿಕೆಗಳಿಂದಲೂ ಲಾಭವಾಗಲಿದೆ. ಒಟ್ಟಾರೆಯಾಗಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ.
ಇದನ್ನೂ ಓದಿ- ಶನಿ ದೋಷ, ಸಾಡೇ ಸಾತಿ, ಶನಿ ಧೈಯಾದಿಂದ ಪರಿಹಾರಕ್ಕಾಗಿ ಸುಲಭ ಶ್ರೀಗಂಧದ ಪರಿಹಾರ
ಮಿಥುನ ರಾಶಿ:
ರಾಹು-ಕೇತು ಸಂಚಾರ ಬದಲಾವನೆಯು ಮಿಥುನ ರಾಶಿಯವರ ಜೀವನದಲ್ಲಿ ಹಳೆಯ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಉದ್ಯೋಗಸ್ಥರು ಬಡ್ತಿ ಪ್ರಯೋಜನವನ್ನು ಪಡೆದರೆ, ವ್ಯಾಪಾರಸ್ಥರಿಗೆ ಬಂಪರ್ ಆರ್ಥಿಕ ಪ್ರಯೋಜನಗಳು ಲಭ್ಯವಾಗಲಿವೆ. ಬೇರೆ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಸಮಯ ಎಂದು ಸಾಬೀತು ಪಡಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.