Shani Dosha Parihara: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ ಎಂದು ಬಣ್ಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದರೆ, ಇಲ್ಲವೇ ಶನಿ ದೋಷವಿದ್ದರೆ, ಸಾಡೇ ಸಾತಿ ಶನಿ ಅಥವಾ ಶನಿ ಧೈಯಾ ಪ್ರಭಾವವಿದ್ದರೆ ಅಂತಹ ವ್ಯಕ್ತಿಯನ್ನು ಶನಿ ಮಹಾತ್ಮ ಹೆಜ್ಜೆ ಹೆಜ್ಜೆಗೂ ಬಾಧಿಸುತ್ತಾನೆ. ಶನಿಯ ಈ ದುಷ್ಪರಿಣಾಮಗಳನ್ನು ತಪ್ಪಿಸಲು ಶ್ರೀಗಂಧ ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಗಂಧ ಬಳಕೆಯಿಂದ ಶನಿಯ ಕೋಪವನ್ನು ಶಮನ ಮಾಡಬಹುದು ಎಂಬ ನಂಬಿಕೆ ಇದೆ. ನೀವು ಶನಿ ದೋಷದಿಂದ ಪ್ರಭಾವಕ್ಕೊಳಗಾಗಿದ್ದರೆ ಇಲ್ಲವೇ ಶನಿ ಸಾಡೇ ಸಾತಿ, ಶನಿ ಧೈಯಾದಿಂದ ಕಷ್ಟ ಅನುಭವಿಸುತ್ತಿದ್ದರೆ ಶ್ರೀಗಂಧವನ್ನು ಈ ಕೆಳಗೆ ಉಲ್ಲೇಖಿಸಲಾದ ರೀತಿಯಲ್ಲಿ ಬಳಸಿ ಸುಲಭ ಪರಿಹಾರ ಪಡೆಯಬಹುದು.
ಶನಿ ದೋಷದಿಂದ ಪರಿಹಾರಕ್ಕಾಗಿ ಶ್ರೀಗಂಧವನ್ನು ಈ ರೀತಿ ಬಳಸಿ:
* ಶನಿ ಸಾಡೇ ಸಾತಿ, ಧೈಯಾದಿಂದ ಪರಿಹಾರ:
ನಿಮ್ಮ ಜಾತಕದಲ್ಲಿ ಶನಿ ಸಾಡೇ ಸಾತಿ, ಇಲ್ಲವೇ ಶನಿ ಧೈಯಾ ಪ್ರಭಾವವಿದ್ದರೆ ಇದರಿಂದ ಪರಿಹಾರಕ್ಕಾಗಿ ಸತತ 40 ದಿನಗಳವರೆಗೆ ನೀರಿನಲ್ಲಿ ಶ್ರೀಗಂಧದ ಬೇರು ಸೇರಿಸಿ ಸ್ನಾನ ಮಾಡಿ.
ಇದನ್ನೂ ಓದಿ- Guru Vakri 2023: ಡಿಸೆಂಬರ್ 31ರವರೆಗೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ
* ಕೆಂಪು ಚಂದನ:
ಶನಿವಾರದ ದಿನ ಕೆಂಪು ಚಂದನವನ್ನು ಶನಿ ಮಹಾತ್ಮನಿಗೆ ಅರ್ಪಿಸಿ ಪೂಜೆ ಮಾಡಿ.
* ಶ್ರೀಗಂಧದ ಜಪಮಾಲೆ:
ಪ್ರತಿ ಶನಿವಾರದಂದು ಶನಿ ದೇವನನ್ನು ಪೂಜಿಸಿ. ಪೂಜೆ ಬಳಿಕ ಶ್ರೀಗಂಧದ ಜಪಮಾಲೆಯೊಂದಿಗೆ "ಓಂ ಶಾನ ಶನೈಶ್ವರಾಯ ನಮಃ" ಎಂಬ ಮಂತ್ರವನ್ನು 108 ಬಾರಿ ಜಪಿಸಿ.
* ಸಾಸಿವೆ ಮತ್ತು ಎಳ್ಳೆಣ್ಣೆ ದೀಪ:
ಶನಿವಾರ ಮುಸ್ಸಂಜೆ ಸಮಯದಲ್ಲಿ ಸಾಸಿವೆ ಎಣ್ಣೆಯೊಂದಿಗೆ ಎಳ್ಳೆಣ್ಣೆಯನ್ನು ಬೆರೆಸಿ ಶನಿ ದೇವರಿಗೆ ದೀಪ ಹಚ್ಚಿ.
ಇದನ್ನೂ ಓದಿ- Shani Margi: 2024ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡಲಿದ್ದಾನೆ ಶನಿ ದೇವ
* ಹನುಮಂತನನ್ನು ಪೂಜಿಸಿ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದಲೂ ಶನಿ ದೋಷದಿಂದ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
* ಶನಿ ಕೋಪದಿಂದ ಪರಿಹಾರಕ್ಕಾಗಿ ಈ ಕೆಲಸ ಮಾಡಿ:
ನೀವು ಶನಿ ಕೋಪವನ್ನು ಶಮನಗೊಳಿಸಲು ಬಯಸಿದರೆ, ಇದಕ್ಕಾಗಿ ಸಾಸಿವೆ ಎಣ್ಣೆಯಿಂದ ತಯಾರಿಸಿದ ಚಪಾತಿಯನ್ನು ಕಪ್ಪು ನಾಯಿಗೆ ಆಹಾರವಾಗಿ ನೀಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.