ಕೆಲವೇ ಗಂಟೆಗಳಲ್ಲಿ ರವಿ ಪುಷ್ಯ-ಆಶ್ಲೇಷಾ ಯೋಗಗಳ ಶುಭ ಸಂಯೋಜನೆ, ಈ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!
Ravi Pushya-Ashlesha Yog: ನಾಳೆ ನವೆಂಬರ್ 5 ರಂದು ಸರ್ವಾರ್ಥ ಸಿದ್ಧಿ, ಶುಭ ಯೋಗದ ಜೊತೆಗೆ ಆಶ್ಲೇಷಾ ನಕ್ಷತ್ರ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿದ್ದು, ಈ ಕಾರಣದಿಂದ ಭಾನುವಾರದ ದಿನ ಹಲವು ರಾಶಿಗಳಿಗೆ ಶುಭ ಸಮಾಚಾರಗಳನ್ನು ಹೊತ್ತು ತರಲಿದೆ. ಈ ಶುಭ ಯೋಗದ ಪರಿಣಾಮಗಳಿಂದ ಮೇಷ, ಮಿಥುನ ಸೇರಿದಂತೆ ಇತರ ಐದು ರಾಶಿಗಳ ಜನರು ಶುಭ ಫಲಗಳನ್ನು ಪಡೆಯಲಿದ್ದಾರೆ. ಜೊತೆಗೆ ನಾಳೆ ಅಷ್ಟಮಿ ಕೂಡ ಇದೆ. ಹೀಗಾಗಿ ನಾಳೆ ಅದೃಷ್ಟ ಒಲಿದು ಬರುವ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
ಬೆಂಗಳೂರು: ಭಾನುವಾರ, ನವೆಂಬರ್ 5 ರಂದು, ಚಂದ್ರ ತನ್ನ ಸ್ವರಾಶಿಯಾಗಿರುವ ಕರ್ಕ ರಾಶಿಗೆ ಸಾಗಲಿದ್ದಾನೆ. ಅಲ್ಲದೆ ನಾಳೆ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಾಗಿದ್ದು ಈ ದಿನ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಅಹೋಯ್ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ರವಿ ಪುಷ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಶುಭ ಯೋಗ, ಶುಕ್ಲ ಯೋಗ ಮತ್ತು ಆಶ್ಲೇಷ ನಕ್ಷತ್ರದ ಶುಭ ಸಂಯೋಗವೂ ನೆರವೇರುತ್ತಿದೆ, ಇದರಿಂದ ನಾಳೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಹೋಯಿ ಅಷ್ಟಮಿಯ ದಿನದಂದು ಈ ಶುಭ ಯೋಗಗಳ ರಚನೆಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಮತ್ತು ಈ ಮಂಗಳಕರ ಯೋಗಗಳಲ್ಲಿ ಮಾಡುವ ಪೂಜೆಯು ತಕ್ಷಣದ ಫಲಿತಾಂಶಗಳನ್ನು ನೀಡುತ್ತವೆ ಎನ್ನಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ರಾಶಿಗಳ ಜನರಿಗೆ ಭಾನುವಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರಾಶಿಗಳ ಜಾತಕದವರ ಘನತೆ ಗೌರವ ಸಾಕಷ್ಟು ಹೆಚ್ಚಾಗಲಿದೆ ಮತ್ತು ಸಮಾಜದಲ್ಲಿ ಇವರಿಗೆ ಹೊಸ ಇಮೇಜ್ ಪ್ರಾಪ್ತಿಯಾಗಲಿದೆ. ನಾಳೆ ನವೆಂಬರ್ 5 ಯಾವ ರಾಶಿಗಳ ಜನರಿಗೆ ಶುಭವಾಗಿದೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
ಮೇಷ ರಾಶಿ
ನವೆಂಬರ್ 5 ಮೇಷ ರಾಶಿಯವರಿಗೆ ವಿಶೇಷ ದಿನವಾಗಿದೆ. ಮೇಷ ರಾಶಿಯ ಜನರು ನಾಳೆ ಇಡೀ ದಿನ ಸಂತಸದ ಮನಸ್ಥಿತಿಯಲ್ಲಿರುತ್ತಾರೆ ಮತ್ತು ಅವರ ಕುಟುಂಬ ಸದಸ್ಯರಿಗೆ ಕೆಲವು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಉದ್ಯಮಿಗಳು ನಾಳೆ ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸಬಹುದು, ಮೇಷ ರಾಶಿಯವರಿಗೆ ವಿದೇಶಕ್ಕೆ ಹೋಗಿ ಶಾಶ್ವತವಾಗಿ ನೆಲೆಸುವ ಅವಕಾಶ ದೊರೆಯುವ ಸಾಧ್ಯತೆ ಇದೆ. ನೌಕರ ವರ್ಗದ ಜನರು ನಾಳೆ ಭಾನುವಾರ ರಜೆಯನ್ನು ಆನಂದಿಸುತ್ತಾರೆ ಮತ್ತು ಸ್ನೇಹಿತರನ್ನು ಭೇಟಿ ಮಾಡುತ್ತಾರೆ. ಅಹೋಯಿ ಅಷ್ಟಮಿ ಹಬ್ಬದ ಕಾರಣ ಮನೆಯಲ್ಲಿ ಧಾರ್ಮಿಕ ವಾತಾವರಣವಿರುತ್ತದೆ. ಹೊಸ ಜನರೊಂದಿಗೆ ನಿಮ್ಮ ಒಡನಾಟ ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ, ಅದು ಭವಿಷ್ಯದಲ್ಲಿ ನಿಮಗೆ ಲಾಭವನ್ನು ತಂದು ಕೊಡಲಿದೆ.
ಮಿಥುನ ರಾಶಿ
ನವೆಂಬರ್ 5 ಮಿಥುನ ರಾಶಿಯವರಿಗೆ ಉತ್ತಮ ದಿನವಾಗಿದೆ. ಮಿಥುನ ಜಾತಕದವರು ನಾಳೆ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಅದಕ್ಕಾಗಿ ಸ್ನೇಹಿತರು ನಿಮಗೆ ಸಹಾಯ ಮಾಡಲು ಸಿದ್ಧರಾಗುತ್ತಾರೆ. ಸಮಾಜಸೇವೆ ಮಾಡುವುದರಿಂದ ನಿಮ್ಮ ಕೀರ್ತಿ ಹೆಚ್ಚಾಗಲಿದೆ ಮತ್ತು ಸರಕಾರದಿಂದ ನಿಮ್ಮ ಸತ್ಕಾರ ನೆರವೇರುವ ಸಾಧ್ಯತೆ ಇದೆ. ಉತ್ತಮವಾಗಿ ಬಿಸ್ನೆಸ್ ನಡೆಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ಅದರಿಂದ ನೀವು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ನಾಳೆ ನಿಮ್ಮ ಪೋಷಕರೊಂದಿಗೆ ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ನೀವು ಯೋಜಿಸಬಹುದು. ಸರ್ಕಾರಿ ನೌಕರಿಯಲ್ಲಿರುವವರಿಗೆ ನಾಳೆ ಅವರು ಬಯಸಿದ ಸ್ಥಳಕ್ಕೆ ವರ್ಗಾವಣೆಯ ಭಾಗ್ಯ ಪ್ರಾಪ್ತಿಯಾಗಬಹುದು. ನೀವು ಸ್ನೇಹಿತರೊಂದಿಗೆ ಮೊಜಿನ ಕಾಲ ಕಳೆಯುವಿರಿ ಮತ್ತು ಅವರೊಂದಿಗಿನ ಚರ್ಚೆಯಿಂದ ನೀವು ಪ್ರಮುಖ ಮಾಹಿತಿಯನ್ನು ಸಹ ಪಡೆಯುವ ಸಾಧ್ಯತೆ ಇದೆ
ಕರ್ಕ ರಾಶಿ
ನವೆಂಬರ್ 5 ಕರ್ಕ ಜಾತಕದವರಿಗೂ ಕೂಡ ಶುಭವಾಗಿರಲಿದೆ. ನಾಳೆ ಅದೃಷ್ಟ ನಿಮ್ಮ ಪರವಾಗಿರಲಿದೆ ಮತ್ತು ಅಹೋಯ್ ಮಾತೆಯ ಆಶೀರ್ವಾದವನ್ನು ಸಹ ನೀವು ಪಡೆಯುವಿರಿ. ನಾಳೆ ಭಾನುವಾರದ ರಜೆಯಲ್ಲಿ, ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಮನೆಯ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ವ್ಯಾಪಾರವನ್ನು ಬೆಳೆಸಲು ನೀವು ಹೊಸ ಯೋಜನೆಗಳಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ, ಅದರ ಬಗ್ಗೆ ನಿಮ್ಮ ತಂದೆಯವರಿಗೆ ಮಾಹಿತಿಯನ್ನು ನೀಡಿ. ಅವರ ಸಲಹೆಯು ನಿಮ್ಮನ್ನು ಮುಂದೆ ಕೊಂಡೊಯ್ಯುವಲ್ಲಿ ಪ್ರಯೋಜನಕಾರಿಯಾಗಲಿದೆ. ನಾಳೆ ನೀವು ಯಾವುದೇ ಕೆಲಸವನ್ನು ಮಾಡಿದರೂ, ನೀವು ಅದನ್ನು ಸಂಪೂರ್ಣ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುವಿರಿ, ಅದು ನಿಮಗೆ ಉತ್ತಮ ಲಾಭವನ್ನು ನೀಡಲಿದೆ. ಹಳೆಯ ಸ್ನೇಹಿತರ ಮನೆಯಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಇದೆ, ಅಲ್ಲಿ ನೀವು ಬಹಳ ದಿನಗಳಿಂದ ಭೇಟಿಯಾಗಲು ಬಯಸುತ್ತಿರುವ ಸ್ನೇಹಿತರನ್ನು ಭೇಟಿಯಾಗುವಿರಿ .
ಕನ್ಯಾ ರಾಶಿ
ನವೆಂಬರ್ 5 ಕನ್ಯಾ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಕನ್ಯಾ ರಾಶಿಯ ಜನರು ನಾಳೆ ಒಳ್ಳೆಯ ಕೆಲಸಗಳಲ್ಲಿ ತಮ್ಮ ಶಕ್ತಿಯನ್ನು ವಿನಿಯೋಗಿಸುತ್ತಾರೆ ಮತ್ತು ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಕನ್ಯಾ ರಾಶಿಯವರು ನಾಳೆ ದೀಪಾವಳಿ ಶಾಪಿಂಗ್ ಮಾಡುವ ಸಾಧ್ಯತೆ ಇದ್ದು, ಮನೆಯ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ನೌಕರವರ್ಗದ ಜನರು ನಾಳೆ ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಸಮಯ ಉತ್ತಮವಾಗಿರುತ್ತದೆ ಮತ್ತು ಅವರು ಉತ್ತಮ ಲಾಭವನ್ನು ಪಡೆಯುತ್ತಾರೆ. ವ್ಯಾಪಾರ ಪ್ರವಾಸಗಳಿಂದ ಲಾಭದ ಸಂಕೇತಗಳಿವೆ. ಅಹೋಯಿ ಅಷ್ಟಮಿಯ ಕಾರಣ ಮನೆಯಲ್ಲಿ ಧಾರ್ಮಿಕ ವಾತಾವರಣವಿರುತ್ತದೆ ಮತ್ತು ಕೆಲವು ವಿಶೇಷ ಭಕ್ಷ್ಯಗಳನ್ನು ಸಹ ತಯಾರಿಸಬಹುದು. ಕೆಲಸದ ಸ್ಥಳದಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತ ನಡವಳಿಕೆ ನಿಮ್ಮದಾಗಿರಲಿದೆ ಮತ್ತು ಅವರು ನಿಮಗೆ ಪ್ರತಿ ಕೆಲಸದಲ್ಲಿ ಸಹಕರಿಸಲಿದ್ದಾರೆ.
ಇದನ್ನೂ ಓದಿ-ಹತ್ತು ವರ್ಷಗಳ ಬಳಿಕ ಶುಕ್ರ-ಕೇತುವಿನ ಮಹಾ ಸಂಯೋಜನೆ, ಶುಕ್ರದೆಸೆಯಿಂದ ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!
ಧನು ರಾಶಿ
ನವೆಂಬರ್ 5 ಧನು ರಾಶಿಯವರಿಗೆ ಆಹ್ಲಾದಕರ ದಿನವಾಗಿರುತ್ತದೆ. ನಾಳೆ, ಧನು ರಾಶಿಯವರ ಸಂಬಂಧಗಳಲ್ಲಿ ಸಂತೋಷ ಹೆಚ್ಚಾಗಲಿದೆ ಮತ್ತು ಮನೆಯಲ್ಲಿ ಸುಖ-ಶಾಂತಿಯ ವಾತಾವರಣ ಇರಲಿದೆ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ ಮತ್ತು ವ್ಯಾಪಾರ ವಿಸ್ತರಣೆಗೆ ಬಗ್ಗೆ ನೀವು ಯೋಚಿಸುವಿರಿ. ನಿಮ್ಮ ಸಂಗಾತಿಯು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ, ಇದು ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ನಾಳೆ ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಿದರೆ, ಅದು ಖಂಡಿತವಾಗಿಯೂ ಪೂರ್ಣಗೊಳ್ಳುತ್ತದೆ. ನೆರೆಹೊರೆಯವರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಹೊಸದಾಗಿ ಮದುವೆಯಾದವರ ಮನೆಗೆ ಹೊಸ ಅತಿಥಿ ಆಗಮಿಸಬಹುದು, ಇದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದರೆ, ನಾಳೆ ಅವುಗಳಿಗೆ ತೆರೆಬೀಳಲಿದೆ ಮತ್ತು ಕುಟುಂಬ ಸಂಬಂಧಗಳು ಬಲಗೊಳ್ಳಲಿವೆ, ನೌಕರವರ್ಗದ ಜನರು ನಾಳೆ ಭಾನುವಾರ ರಜೆಯನ್ನು ಆನಂದಿಸುತ್ತಾರೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ