ಮಕ್ಕಳ ಸೊಂಟಕ್ಕೆ ಕಪ್ಪು ದಾರ ಯಾಕೆ ಕಟ್ಟಬೇಕು ಗೊತ್ತಾ ?
Significance Of Black Thread : ಕಪ್ಪು ದಾರವನ್ನು ಧರಿಸುವುದರಿಂದ ಶನಿಯು ಶಾಂತವಾಗಿರುವುದು ಮಾತ್ರವಲ್ಲ. ಆತನ ವಕ್ರ ದೃಷ್ಟಿ ಮಕ್ಕಳ ಮೇಲೆ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ.
ಬೆಂಗಳೂರು : ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಕಪ್ಪು ದಾರವನ್ನು ಧರಿಸುವುದನ್ನು ಹೆಚ್ಚಾಗಿ ಕಾಣಬಹುದು. ಸಾಮಾನ್ಯವಾಗಿ ಜನರು ತಮ್ಮ ಕೈ, ಕಾಲು ಅಥವಾ ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುತ್ತಾರೆ. ಆದರೆ, ಮಕ್ಕಳ ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಕಪ್ಪು ದಾರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ವಿಶೇಷವಾಗಿ ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳನ್ನು ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲು ಕಪ್ಪು ದಾರವನ್ನು ಧರಿಸಲಾಗುತ್ತದೆ.
ಮಕ್ಕಳಿಗೆ ಕಪ್ಪು ದಾರವನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು :
ಜ್ಯೋತಿಷ್ಯದಲ್ಲಿ, ಕಪ್ಪು ಬಣ್ಣವನ್ನು ಶನಿ ಗ್ರಹದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಶನಿಯ ಕೋಪವು ಜೀವನದಲ್ಲಿ ಅನೇಕ ದುಃಖಗಳಿಗೆ ಕಾರಣವಾಗುತ್ತದೆ. ಹಾಗಾಗಿಯೇ ಶನಿದೇವನ ಬಗ್ಗೆ ಜನರಲ್ಲಿ ಭಯದ ಭಾವ ಹೆಚ್ಚು. ಕಪ್ಪು ದಾರವನ್ನು ಧರಿಸುವುದರಿಂದ ಶನಿಯು ಶಾಂತವಾಗಿರುವುದು ಮಾತ್ರವಲ್ಲ. ಆತನ ವಕ್ರ ದೃಷ್ಟಿ ಮಕ್ಕಳ ಮೇಲೆ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ.
ಮಕ್ಕಳಿಗೆ ಬಹಳ ಬೇಗನೆ ದೃಷ್ಟಿಯಾಗುತ್ತದೆ ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಈ ಹಿನ್ನೆಲೆಯಲ್ಲಿ ಕೆಟ್ಟ ದೃಷ್ಟಿ ಮಕ್ಕಳಿಗೆ ತಾಗದಿರಲಿ ಎನ್ನುವ ಕಾರಣಕ್ಕೆ ಮಕ್ಕಳ ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟಲಾಗುತ್ತದೆ.
ಇದಲ್ಲದೆ, ಸೊಂಟದ ಸುತ್ತಲೂ ಕಪ್ಪು ದಾರವನ್ನು ಧರಿಸುವುದರಿಂದ ಮಗುವಿಗೆ ಧನಾತ್ಮಕ ಶಕ್ತಿ ರವಾನೆಯಾಗುತ್ತದೆ ಮತ್ತು ಮಗು ಆಕ್ಟಿವ್ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮಗು ಅತ್ಯಂತ ಸಂತೋಷವಾಗಿರುತ್ತದೆ.
ಮಗುವನ್ನು ಪದೇ ಪದೇ ನೋಡುತ್ತಿರುವುದರಿಂದ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಮಗು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕಪ್ಪು ದಾರವನ್ನು ಧರಿಸುವುದರಿಂದ ಮಕ್ಕಳಿಗೆ ಸಾಕಷ್ಟು ಪರಿಹಾರ ಸಿಗುತ್ತದೆ.
ಇದನ್ನೂ ಓದಿ : ಈ ಬಾರಿ ಅಕ್ಷಯ ತೃತೀಯಕ್ಕಿದೆ ವಿಶೇಷ ಪ್ರಾಮುಖ್ಯತೆ! ಈ ಮುಹೂರ್ತದಲ್ಲಿಯೇ ಖರೀದಿಸಿ ಚಿನ್ನ
ಇದಲ್ಲದೆ, ಕಪ್ಪು ದಾರವು ಮಕ್ಕಳನ್ನು ಮಾಟಮಂತ್ರದಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಮಕ್ಕಳ ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟಲು ಸಲಹೆ ನೀಡಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.