Chaturgrah Yog 2023: 12 ವರ್ಷಗಳ ಬಳಿಕ ಮಂಗಳನ ಅಂಗಳದಲ್ಲಿ 4 ದೊಡ್ಡ ಗ್ರಹಗಳ ಚತುರ್ಗ್ರಹಿ ಯೋಗ ನಿರ್ಮಾಣ, 3 ರಾಶಿಗಳಿಗೆ ಅಪಾರ ಧನ-ಕೀರ್ತಿ ಪ್ರಾಪ್ತಿ!

Chaturgraha Yog In Aries: ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಸೂರ್ಯ, ರಾಹು, ಬುಧ ಹಾಗೂ ಗುರು ಗ್ರಹಗಳ ಮೈತ್ರಿ ನೆರವೇರಲಿದೆ. ಈ ಮೈತ್ರಿ ಮಂಗಳನ ಅಧಿಪತ್ಯದ ರಾಶಿಯಾಗಿರುವ ಮೇಷ ರಾಶಿಯಲ್ಲಿ 4 ಗ್ರಹಗಳ ಮಹಾಮೈತ್ರಿ ರೂಪುಗೊಳ್ಳುತ್ತಿದೆ. ಮೇಷರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚತುರ್ಗ್ರಹಿ ಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Apr 7, 2023, 01:35 PM IST
  • ಏಪ್ರಿಲ್ 14 ರಂದು ಸೂರ್ಯ ಮೇಷ ರಾಶಿಗೆ ಪ್ರವೇಶಿಸುತ್ತಿದ್ದು,
  • ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿ ಮೇಷ ರಾಶಿಗೆ ಕಾಲಿಡಲಿದ್ದಾನೆ.
  • ಇದರ ಜೊತೆಗೆ ಈಗಾಗಲೇ ಮೇಷ ರಾಶಿಯಲ್ಲಿ ಬುಧ ಮತ್ತು ರಾಹು ಈಗಾಗಲೇ ವಿರಾಜಮಾನನಾಗಿದ್ದಾರೆ.
Chaturgrah Yog 2023: 12 ವರ್ಷಗಳ ಬಳಿಕ ಮಂಗಳನ ಅಂಗಳದಲ್ಲಿ 4 ದೊಡ್ಡ ಗ್ರಹಗಳ ಚತುರ್ಗ್ರಹಿ ಯೋಗ ನಿರ್ಮಾಣ, 3 ರಾಶಿಗಳಿಗೆ ಅಪಾರ ಧನ-ಕೀರ್ತಿ ಪ್ರಾಪ್ತಿ! title=
ಚತುರ್ಗ್ರಹಿ ಯೋಗ-ಯಾರಿಗೆ ಲಾಭ?

Chaturgrah Yog In Mesh: ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ ಮತ್ತು ಶುಭ-ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ಯೋಗಗಳು ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಪ್ರಸ್ತುತ ಮೇಷರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಏಪ್ರಿಲ್ 14 ರಂದು ಸೂರ್ಯ ಮೇಷ ರಾಶಿಗೆ ಪ್ರವೇಶಿಸುತ್ತಿದ್ದು, ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿ ಮೇಷ ರಾಶಿಗೆ ಕಾಲಿಡಲಿದ್ದಾನೆ. ಇದರ ಜೊತೆಗೆ ಈಗಾಗಲೇ ಮೇಷ ರಾಶಿಯಲ್ಲಿ ಬುಧ ಮತ್ತು ರಾಹು ಈಗಾಗಲೇ ವಿರಾಜಮಾನನಾಗಿದ್ದಾರೆ. ಈ ಕಾರಣದಿಂದ ಮಂಗಳನ ಅಂಗಳದಲ್ಲಿ ನಾಲ್ಕು ಗ್ರಹಗಳ ಮಹಾ ಮೈತ್ರಿ ನೆರವೇರಲಿದ್ದು, ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ 3 ರಾಶಿಗಳ ಜನರಿಗೆ ಈ ಅವಧಿಯಲ್ಲಿ ಅಪಾರ ಧನಲಾಭ ಹಾಗೂ ಭಾಗ್ಯೋದಯದ ಯೋಗ ಇದು ರೂಪಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

ಮಿಥುನ ರಾಶಿ: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚತುರ್ಗ್ರಹಿ ಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಆದಾಯ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ಇದಲ್ಲದೆ ಹಲವು ಮೂಲಗಳಿಂದ ನಿಮಗೆ ಹಣ ಹರಿದು ಬರಲಿದೆ. ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರಗಳು ನಿಮ್ಮ ಪರವಾಗಿರಲಿವೆ. ನಿಮಗೆ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಷೇರು ಮಾರುಕಟ್ಟೆ, ಲಾಟರಿಗಳಿಂದ ಧನಲಾಭವಾಗುವ ಸಾಧ್ಯತೆ ಇದೆ.   

ಸಿಂಹ ರಾಶಿ: ಚತುರ್ಗ್ರಹಿ ಯೋಗ ನಿರ್ಮಾಣ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ನವಮ ಭಾವದಲಿ ನಿರ್ಮಾಣಗೊಳ್ಳುತ್ತಿದೆ. ಇದನ್ನು ಅದೃಷ್ಟ ಹಾಗೂ ವಿದೇಶಿ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಇದಲ್ಲದೆ ಈ ಅವಧಿಯಲ್ಲಿ ನೀವು ಮಾಡುವ ಯಾತ್ರೆಗಳು ಕೂಡ ನಿಮಗೆ ಶುಭ ಫಲಿತಾಂಶಗಳನ್ನು ನೀಡಲಿವೆ. ನೌಕರಿ ಹಾಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ವಿದ್ಯಾರ್ಥಿಗಳು ಯಾತ್ರೆ ಕೈಗೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ಯಾವುದಾದರೊಂದು ಧಾರ್ಮಿಕ ಹಾಗೂ ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.  

ಇದನ್ನೂ ಓದಿ- Chatrurgrah Yog In Aries: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ರಾಶಿಗಳಿಗೆ ಧನಹಾನಿಯ ಸಾಧ್ಯತೆ!

ಕರ್ಕ ರಾಶಿ: ಚತುರ್ಗ್ರಹಿ ಯೋಗ ನಿರ್ಮಾಣ ಕರ್ಕ ರಾಶಿಯ ಜಾತಕದವರ ಪಾಲಿಗೆ ಲಾಭಪ್ರದ ಸಾಬೀಟಾಗುವ ಸಾಧ್ಯತೆ ಇದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಕರ್ಮ ಭಾವದ ಮೇಲೆ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಕಾರ್ಯ ಸಿದ್ದಿ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಆರ್ಡರ್ ಗಳು ಬರಲಿವೆ. ಹೀಗಾಗಿ ಅವರಿಗೆ ಉತ್ತಮ ಧನಲಾಭ ಕೂಡ ಆಗಲಿದೆ. ಇದರಿಂದ ಆದಾಯದಲ್ಲಿ ನೀವು ವೃದ್ಧಿಯನ್ನು ಗಮನಿಸಬಹುದು. ಹೊಟೇಲ್, ರೆಸ್ಟೋರೆಂಟ್, ಧಾನ್ಯಗಳಿಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಉತ್ತಮ ಧನಲಾಭ ಉಂಟಾಗಲಿದೆ. ನೌಕರವರ್ಗಕ್ಕೆ ಸೇರಿದ ಜನರಿಗೆ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ಭಾಗ್ಯ ಸಿಗಲಿದೆ. ನಿರುದ್ಯೋಗಿಗಳಿವೆ ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. 

ಇದನ್ನೂ ಓದಿ-Shukra Gochar: ಕೆಲವೇ ಗಂಟೆಗಳಲ್ಲಿ ಸ್ವರಾಶಿಗೆ ವೈಭವದಾತನ ಎಂಟ್ರಿ, ಮಾಲವ್ಯ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News