Religious beliefs: ಮನೆಯಲ್ಲಿ ಶ್ರೀ ಚಕ್ರ ಮತ್ತು ಸಾಲಿಗ್ರಾಮವನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಶ್ರೀ ಚಕ್ರ ಮತ್ತು ಸಾಲಿಗ್ರಾಮಗಳು ತುಂಬಾ ಪವರ್‌ಫುಲ್‌ ಆಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿದೆ. ಶ್ರೀ ಚಕ್ರಮ ಮತ್ತು ಸಾಲಿಗ್ರಾಮವನ್ನು ಪೂಜಿಸುವವರು ಯಾವ ವಿಷಯಗಳನ್ನು ತಿಳಿದುಕೊಳ್ಳಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Lucky Zodiac Signs: ಈ 5 ರಾಶಿಯವರ ಮೇಲೆ ಯಾವಾಗಲೂ ತಾಯಿ ಲಕ್ಷ್ಮಿದೇವಿಯ ಕೃಪೆ ಇರುತ್ತದೆ!


  • ಮಡಿ ಮೈಲಿಗೆಯ ನಿಯಮಗಳನ್ನು ಅನುಸರಿಸಬೇಕು

  • ಪ್ರತಿದಿನವೂ ದೇವರಿಗೆ ನೈವೇದ್ಯ ಮಾಡಬೇಕು

  • ಮನೆಗೆ ಬಂದ ಸುಮಂಗಲಿಯರಿಗೆ ಅರಿಶಿನ ಮತ್ತು ಕುಂಕುಮವನ್ನು ಕೊಡದೇ ಕಳುಹಿಸಬಾರದು.

  • ಸ್ತ್ರೀಯರನ್ನು ಗೌರವಿಸಬೇಕು, ಯಾವುದೇ ಕಾರಣಕ್ಕೂ ಅವರ ಕಣ್ಣಲ್ಲಿ ನೀರು ಹಾಕಿಸಬಾರದು

  • ಶುಕ್ರವಾರ ಮತ್ತು ಮಂಗಳವಾರಗಳಂದು ದೇವರ ವಿಗ್ರಹ ಸೇರಿದಂತೆ ಇತರೆ ವಸ್ತುಗಳನ್ನು ಶುದ್ಧ ಮಾಡಬಾರದು

  • ಮನೆಯ ಹೊಸ್ತಿಲನ್ನು ಕಸದ ಪೊರಕೆಯಿಂದ ಅಪ್ಪಿತಪ್ಪಿಯೂ ಗುಡಿಸಬಾರದು

  • ಪ್ರತಿ ಶುಕ್ರವಾರ ದೇವರಿಗೆ ಆರತಿ ಮಾಡಿ, ಪಾನಕ, ಕೋಸಂಬರಿಯನ್ನು ದಾನ ಮಾಡಬೇಕು

  • ದೇವರಿಗೆ ಮೊಸರನ್ನ, ಚಿತ್ರಾನ್ನ, ತುಪ್ಪದ ಅನ್ನ, ಬೆಲ್ಲದ ಅನ್ನ, ಸಿಹಿ ಪೊಂಗಲ್ ನೈವೇದ್ಯ ಮಾಡಬೇಕು

  • ದೊಡ್ಡ ವಿಗ್ರಹಗಳಿದ್ದರೆ ೧ ಸೇರು ಅನ್ನವನ್ನು ನೈವೇದ್ಯ ಮಾಡಬೇಕಾಗುತ್ತದೆ. ಹೀಗಾಗಿ ತುಂಬಾ ದೊಡ್ಡ ವಿಗ್ರಹ ಇಟ್ಟುಕೊಳ್ಳದಿರುವುದು ಉತ್ತಮ.

  • ದೇವರ ಪೂಜಾ ಸಮಯದಲ್ಲಿ ಒಗೆದಿರುವ ಶುದ್ಧ ವಸ್ತ್ರಗಳನ್ನೇ ಧರಿಸಬೇಕು. ಶ್ವೇತ ವರ್ಣದ ಪಂಚೆ-ಶಲ್ಯ ತುಂಬಾ ಶ್ರೇಷ್ಠ

  • ದೇವರ ಪೂಜಾ ಸಮಯದಲ್ಲಿ ಆಕಳಿಕೆಯಿಂದ ಪೂಜೆ ಮಾಡುವುದು, ಕೋಪ ಮಾಡಿಕೊಂಡು ಪೂಜೆ ಮಾಡುವುದು, ಅನಗತ್ಯ ಸಂಭಾಷಣೆ & ನಿರ್ಮಾಲ್ಯ ತೆಗೆಯದೆ ಪೂಜೆ ಮಾಡುವುದು ಮಾಡಬೇಡಿ.

  • ಭಿನ್ನವಾದ ವಿಗ್ರಹ & ದೇವರ ಪೂಜಾ ಸಾಮಗ್ರಿಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.

  • ದುರ್ಗಂಧ ಪುಷ್ಪ ಮತ್ತು ನಿರ್ಗಂಧ ಪುಷ್ಪ ಅಂದರೆ ಚಂಡು ಹೂ ಮತ್ತು ಚಿಂತಾಮಣಿ ಹೂಗಳನ್ನು ಯಾವುದೇ ಕಾರಣಕ್ಕೂ ಪೂಜೆಗೆ ಬಳಸಬಾರದು. ಹಸೀ ಹಾಲನ್ನೇ ದೇವರ ಪೂಜೆಗೆ ಬಳಸಬೇಕು.

  • ದೇವರ ವಿಗ್ರಹಕ್ಕೆ ಇಡುವ ಹೂವು ಚೆನ್ನಾಗಿ ಅರಳಿರಬೇಕು, ಅವುಗಳ ತೊಟ್ಟು ತೆಗೆದು ದೇವರ ವಿಗ್ರಹಗಳಿಗೆ ಇಡಬೇಕು.

  • ದೇವರಿಗೆ ನೈವೇದ್ಯ ಮಾಡುವಾಗ ಪಾನಕಕ್ಕೆ ಸಕ್ಕರೆ ಬದಲು ಜೇನುತುಪ್ಪ ಹಾಕಿದರೆ ವಿಶೇಷ ಫಲಪ್ರಾಪ್ತಿಯಾಗುತ್ತದೆ.

  • ಪೂರ್ಣಫಲ ನೈವೇದ್ಯ ಮಾಡುವುದು ತುಂಬಾ ವಿಶೇಷ ಫಲವನ್ನು ನೀಡುತ್ತದೆ. ಇದರಿಂದ ಸಕಲ ಕಾರ್ಯ ವಿಜಯವಾಗುವುದು ಮತ್ತು ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.

  • ಗಂಡಸರು ಶಲ್ಯವನ್ನು ಹಾಕಿಕೊಳ್ಳದೆ ಪೂಜೆ ಮಾಡಬಾರದು, ಹೀಗೆ ಮಾಡಿದರೆ ಪೂಜಾ ಫಲವೆಲ್ಲಾ ರಾಕ್ಷಸರ ಪಾಲಾಗುತ್ತದೆ ಎಂಬ ನಂಬಿಕೆಯಿದೆ.

  • ಗರಿಕೆ ಇಲ್ಲದ ಗಣೇಶನ ಪೂಜೆ, ತುಳಸಿ ಇಲ್ಲದ ನೈವೇದ್ಯ, ಬಿಲ್ವಪತ್ರೆ ಇಲ್ಲದ ಅರ್ಚನೆ ಪೂಜೆಗಳು ಫಲ ನೀಡುವುದಿಲ್ಲ.

  • ಬಲಮುರಿ ಗಣೇಶ, ಬಲಮುರಿ ಶಂಖ, ಸಾಲಿಗ್ರಾಮ, ಶ್ರೀ ಚಕ್ರ, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮಿ, ಅಷ್ಟಮುಖೀ ರುದ್ರಾಕ್ಷಿ, ಪಂಚಮುಖೀ ಗಾಯತ್ರೀ ದೇವಿ, ಪಂಚಮುಖಿ ಆಂಜನೇಯ ಇವುಗಳು ತುಂಬಾ ವಿಶೇಷ ಫಲ ನೀಡುವ ಮತ್ತು ಅಷ್ಟೈಶ್ವರ್ಯಗಳನ್ನು ಕರುಣಿಸುವ ದೇವರುಗಳಾಗಿವೆ.

  • ದೇವರ ಮನೆಯಲ್ಲಿ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಿ ಅದರ ಮೇಲೆ ದೇವರನ್ನಿಟ್ಟು ಪೂಜಿಸಿದರೆ ತುಂಬಾ ವಿಶೇಷ ಫಲ & ಇಷ್ಟಾರ್ಥ ಸಿದ್ದಿಯಾಗುತ್ತದೆ.

  • ಯಾವುದೇ ಪುಸ್ತಕದ ಸಹಸ್ರನಾಮ ಓದುವಾಗ ದೇವರ ಪುಸ್ತಕಗಳನ್ನು ಮಣೆಯ ಮೇಲೆ ಅಥವಾ ಪೀಠದಲ್ಲಿ ಇಟ್ಟು ಓದಿದರೆ ತುಂಬಾ ಒಳ್ಳೆಯದು.


ಇದನ್ನೂ ಓದಿ: Relationship Tips: ಮದುವೆಯಾದ ಹೆಣ್ಣುಮಕ್ಕಳು ಅಪ್ಪಿತಪ್ಪಿಯೂ ಈ ವಿಷಯಗಳನ್ನು ತಾಯಿ ಬಳಿ ಹೇಳಬಾರದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.