Relationship Tips: ಮದುವೆಯಾದ ಹೆಣ್ಣುಮಕ್ಕಳು ಅಪ್ಪಿತಪ್ಪಿಯೂ ಈ ವಿಷಯಗಳನ್ನು ತಾಯಿ ಬಳಿ ಹೇಳಬಾರದು!

Healthy Relationship Tips: ನಿಮ್ಮ ಬಳಿ ಅತ್ತೆ ಮನೆಯ ಸಂಬಂಧಿಕರು, ಇನ್ನಿತರ ಸದಸ್ಯರ ವಿಚಾರಗಳನ್ನು ಮಾತನಾಡಲು ಬಂದರೆ ಆದಷ್ಟು ಆ ವಿಚಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ತಾಯಿಯೊಂದಿಗೆ ಗಂಡನ ಮನೆಯ ಗಾಸಿಫ್ ವಿಚಾರಗಳನ್ನು ಯಾವುದೇ ಕಾರಣಕ್ಕೂ ತಾಯಿಯ ಬಳಿ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

Relationship Tips: ಹೆಣ್ಣು ಮಕ್ಕಳು ತಮ್ಮ ವೈಯುಕ್ತಿಕ ವಿಚಾರಗಳನ್ನು ಅಮ್ಮನ ಬಳಿ ಹೇಳಿಕೊಳ್ಳುವುದು ಸಾಮಾನ್ಯ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಬಗ್ಗೆ ಹೇಳಿಕೊಳ್ಳುವುದು ಒಳ್ಳೆಯದಲ್ಲ. ಹೀಗಾಗಿ ಈ ಅಭ್ಯಾಸಗಳಿದ್ದರೆ ಅವುಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳುವುದು ಉತ್ತಮ. ಕೆಲವು ವಿಚಾರಗಳನ್ನು ಅಪ್ಪಿತಪ್ಪಿಯೂ ತಾಯಿಯ ಬಳಿ ಹೇಳಿಕೊಳ್ಳಬಾರದು. ಮದುವೆಯಾದ ಹೆಣ್ಣುಮಕ್ಕಳು ಗಂಡನ ಮನೆಗೆ ಹೋದ ಬಳಿಕ ತವರು ಮನೆಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ತಾಯಿಯ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ತಂದೆಯ ಬಳಿ ಹೇಳಿಕೊಳ್ಳಲು ಸಾಧ್ಯವಾಗದ ಹಲವಾರು ಸಂಗತಿಗಳನ್ನು ತಮ್ಮ ಅಮ್ಮನೊಂದಿಗೆ ಹೇಳಿಕೊಳ್ಳುತ್ತಾರೆ. ಮದುವೆಯಾದ ಹೆಣ್ಣುಮಕ್ಕಳು ತನ್ನ ತಾಯಿ ಬಳಿ ಹಂಚಿಕೊಳ್ಳಬಾರದ ಕೆಲವು ವಿಷಯಗಳಿವೆ. ಇವುಗಳನ್ನು ತಿಳಿದುಕೊಂಡು ಪಾಲಿಸಿಕೊಂಡರೆ ನಿಮ್ಮ ಜೀವನವು ಸುಖ-ಸಂತೋಷದಿಂದ ಕೂಡಿರುತ್ತದೆ. ಇಲ್ಲದಿದ್ದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮದುವೆಯಾದ ಆರಂಭಿಕ ದಿನಗಳಲ್ಲಿ ಪ್ರತಿಯೊಬ್ಬ ತಾಯಿಗೂ ʼನನ್ನ ಮಗಳು ಸುಖವಾಗಿದ್ದಾಳಾ?ʼ ಅನ್ನೋ ಪ್ರಶ್ನೆ ಕಾಡುತ್ತಿರುತ್ತದೆ. ಈ ಬಗ್ಗೆ ನಿಮ್ಮ ತಾಯಿ ಕೇಳಿದರೆ, ನಾವು ಖುಷಿಯಾಗಿದ್ದೀವಿ ಎಂದು ಹೇಳುವುದು ಒಳ್ಳೆಯದು. ಇಲ್ಲದಿದ್ದರೆ ಅವರ ಮನಸ್ಸಿಗೆ ನೋವಾಗಬಹುದು. ಅತ್ತೆ ಮನೆಯಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾ ಹೋದರೆ ನಿಮ್ಮ ತಲೆಯಲ್ಲಿ ಅನುಮಾನದ ಬೀಜ ಬಿತ್ತುವ ಸಾಧ್ಯತೆ ಇರುತ್ತದೆ. ಹೀಗಾಗಿ ಏನು ಹೇಳಬೇಕು? ಅಥವಾ ಏನು ಹೇಳಬಾರದು? ಅನ್ನೋದರ ಬಗ್ಗೆ ನೀವು ತಿಳಿಯುವುದು ಮುಖ್ಯ.

2 /5

ಈ ವಿಶಾಲ ಜಗತ್ತಿನಲ್ಲಿ ಜಗಳವಿಲ್ಲದೆ ಇರುವ ಯಾವುದೇ ದಂಪತಿ ಇರುವುದಿಲ್ಲ. ಆದರೆ ಈ ಬಗ್ಗೆ ನಿಮ್ಮ ತಾಯಿಗೆ ಹೇಳಬೇಕೇ? ಎನ್ನುವುದರ ಬಗ್ಗೆ ನೀವೇ ಯೋಚಿಸಬೇಕು. ಸಣ್ಣ-ಪುಟ್ಟ ವಿಚಾರಕ್ಕೂ ಜಗಳವಾದರೆ ತಾಯಿಯ ಬಳಿ ಹಂಚಿಕೊಳ್ಳಬೇಡಿ. ಜಗಳ ತುಂಬಾ ಗಂಭೀರವಾಗಿದ್ದರೆ ಅಥವಾ ಗಂಡನ ಮನೆಯಲ್ಲಿ ತೀರಾ ಸಮಸ್ಯೆಯಾಗುತ್ತಿದ್ದರಷ್ಟೇ ಈ ಬಗ್ಗೆ ನಿಮ್ಮ ತಾಯಿಯ ಬಳಿ ಹೇಳಿಕೊಳ್ಳುವುದು ಉತ್ತಮ.

3 /5

ನಿಮ್ಮ ಅತ್ತೆ ನಿಮಗೆ ಏನು ಹೇಳಿದರು, ಏನೇ ಮಾಡಿದರೂ ಈ ಬಗ್ಗೆ ತಾಯಿಯ ಬಳಿ ಹೇಳಿಕೊಳ್ಳುವುದು ಸರಿಯಲ್ಲ. ನೀವು ನಿಮ್ಮ ಅತ್ತೆಯೊಂದಿಗಿರುವ ಕಾರಣ, ಅವರು ಹೇಗೆ ಅನ್ನೋ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ನಿಮ್ಮ ತಾಯಿಯೂ ಅತ್ತೆಯ ನಡವಳಿಕೆ ಹಾಗೂ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಇದು ಅತ್ತೆ ಹಾಗೂ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

4 /5

ನಿಮ್ಮ ಬಳಿ ಅತ್ತೆ ಮನೆಯ ಸಂಬಂಧಿಕರು, ಇನ್ನಿತರ ಸದಸ್ಯರ ವಿಚಾರಗಳನ್ನು ಮಾತನಾಡಲು ಬಂದರೆ ಆದಷ್ಟು ಆ ವಿಚಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ತಾಯಿಯೊಂದಿಗೆ ಗಂಡನ ಮನೆಯ ಗಾಸಿಫ್ ವಿಚಾರಗಳನ್ನು ಯಾವುದೇ ಕಾರಣಕ್ಕೂ ತಾಯಿಯ ಬಳಿ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

5 /5

ಅನೇಕ ಕುಟುಂಬಗಳು ಹಲವಾರು ರಹಸ್ಯ ಸಂಗತಿಗಳನ್ನು ಹೊಂದಿರುತ್ತದೆ. ಸೊಸೆಯಾದ ನೀವೂ ಆ ಕುಟುಂಬದ ಭಾಗವಾಗಿರುವುದರಿಂದ, ಇದರ ಬಗ್ಗೆ ನಿಮ್ಮ ತಾಯಿಗೆ ಹೇಳಬಾರದು. ಅಮ್ಮನೊಂದಿಗೆ ಹಂಚಿಕೊಂಡ ವಿಷಯಗಳು ಬೇರೆಯವರ ಕಿವಿಗೆ ಬಿದ್ದರೆ ಗಂಡನ ಮನೆಯ ಕುಟುಂಬಕ್ಕೆ ತೊಂದರೆಯಾಗಬಹುದು. ಅವರು ನಿಮ್ಮ ಮೇಲಿಟ್ಟ ನಂಬಿಕೆ ಹಾಳಾಗುತ್ತದೆ. ಹೀಗಾಗಿ ಈ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ತುಂಬಾ ಸೂಕ್ತ.