Shani Gachar 2023: ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿರುವ ಶನಿ ನಿಮ್ಮ ಮೇಲೆ ಏನು ಪರಿಣಾಮ ಬೀರಲಿದ್ದಾನೆ?
Saturn in Aquarius Effect: ಸುಮಾರು ಮೂರು ದಶಕಗಳ ಬಳಿಕ ಕರ್ಮಫಲದಾತ ಶನಿಯು ತನ್ನದೇ ಆದ ರಾಶಿ ಚಕ್ರ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕುಂಭ ರಾಶಿಯಲ್ಲಿ ಶನಿ ಸಂಕ್ರಮಣವು ಎಲ್ಲಾ ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡಲಿದೆ. ಶನಿ ರಾಶಿ ಪರಿವರ್ತನೆಯು ನಿಮ್ಮ ಸಂಪತ್ತು, ಆಸ್ತಿ, ಆರೋಗ್ಯ, ವೃತ್ತಿ ಬದುಕಿನಲ್ಲಿ ಯಾವ ರೀತಿಯ ಪರಿಣಾಮ ಉಂಟು ಮಾಡಲಿದೆ ತಿಳಿಯಿರಿ.
Saturn in Aquarius Effect: ನವಗ್ರಹಗಳಲ್ಲಿ ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ದೇವನು ನಿನ್ನೆಯಷ್ಟೇ (ಜನವರಿ 17) ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು ಯಾವುದೇ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಸುಮಾರು ಎರಡೂವರೆ ವರ್ಷ ಬೇಕಾಗುತ್ತದೆ. ಹಾಗಾಗಿ, ಶನಿಯು ಯಾವುದೇ ರಾಶಿಯನ್ನು ಮತ್ತೆ ಸಂಧಿಸಲು ಸುಮಾರು ಮೂರು ದಶಕಗಳು ಎಂದರೆ ಮೂವತ್ತು ವರ್ಷಗಳು ಬೇಕಾಗುತ್ತದೆ. ಇದೀಗ ಶನಿ ದೇವಾನು ತನ್ನದೇ ಆದ ರಾಶಿಚಕ್ರವಾದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. 30 ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸಿರುವ ಶನಿಯು ಎಲ್ಲಾ 12 ರಾಶಿಯವರ ಜೀವನದ ಮೇಲೂ ಮಹತ್ವದ ಪರಿಣಾಮವನ್ನು ಉಂಟು ಮಾಡಲಿದ್ದಾನೆ.
ಕುಂಭ ರಾಶಿಗೆ ಶನಿಯ ಪ್ರವೇಶವು ದ್ವಾದಶ ರಾಶಿಯವರ ವ್ಯಾಪಾರ, ಉದ್ಯೋಗ, ಮದುವೆ, ಪ್ರೀತಿ, ಮಕ್ಕಳು, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಇನ್ನೂ ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿರುವ ಶನಿಯು ನಿಮ್ಮ ಆಸ್ತಿ, ಆರೋಗ್ಯ, ವೃತ್ತಿ ಜೀವನದ ಮೇಲೆ ಏನು ಪರಿಣಾಮ ಬೀರಲಿದ್ದಾನೆ ಎಂದು ತಿಳಿಯಿರಿ.
ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿರುವ ಶನಿ ನಿಮ್ಮ ಮೇಲೆ ಏನು ಪರಿಣಾಮ ಬೀರಲಿದ್ದಾನೆ?
ಮೇಷ ರಾಶಿ:
ಕುಂಭ ರಾಶಿಗೆ ಶನಿ ಸಂಕ್ರಮಣದ ಪರಿಣಾಮದಿಂದಾಗಿ ಮೇಷ ರಾಶಿಯವರಿಗೆ ವಿತ್ತೀಯ ಲಾಭವಾಗಲಿದೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿವೆ. ಯಾವುದೇ ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿವೆ.
ವೃಷಭ ರಾಶಿ:
ಮೂರು ದಶಕಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸಿರುವ ಶನಿದೇವನು ವೃಷಭ ರಾಶಿಯ ಸ್ವಂತ ಬಿಸಿನೆಸ್ ಮಾಡುವವರಿಗೆ ಅಪಾರ ಆಶೀರ್ವಾದವನ್ನು ಸುರಿಸಲಿದ್ದಾನೆ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ಉತ್ತುಂಗ ಶಿಖರವನ್ನು ಏರುವಿರಿ. ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದರಿಂದ ಮನಸ್ಸಿಗೆ ಶಾಂತಿ ಲಭಿಸಲಿದೆ.
ಇದನ್ನೂ ಓದಿ- Mercury Transit 2023 Effect: ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ, ನಾಲ್ಕು ರಾಶಿಯವರಿಗೆ ತುಂಬಾ ಶುಭ
ಮಿಥುನ ರಾಶಿ:
ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರಷ್ಟೇ ನಿರೀಕ್ಷಿತ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸುವುದು ಒಳ್ಳೆಯದು. ನಿಮ್ಮ ಪಿತೃ ಸಮಾನರೊಂದಿಗೆ ಸೌಜನ್ಯದಿಂದ ವರ್ತಿಸಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಒಳಿತಲ್ಲ.
ಕರ್ಕಾಟಕ ರಾಶಿ:
ಈ ಸಮಯದಲ್ಲಿ ನಿಮಗೆ ಹಣವು ಲಾಭದಾಯಕವಾಗಿರುತ್ತದೆ. ಆದರೆ, ಶನಿ ಸಂಕ್ರಮಣವು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಮಕ್ಕಳ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ.
ಸಿಂಹ ರಾಶಿ:
ಶನಿ ರಾಶಿ ಪರಿವರ್ತನೆಯು ಈ ರಾಶಿಯವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲಿದ್ದಾನೆ. ಈ ಸಮಯದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳು ಲಾಭದಾಯಕ ಎಂದು ಸಾಬೀತುಪಡಿಸಲಿವೆ.
ಕನ್ಯಾ ರಾಶಿ:
ಕಷ್ಟ ಪಟ್ಟು ದುಡಿದರೂ ನಿರೀಕ್ಷಿತ ಫಲ ಸಿಗದೇ ಇರಬಹುದು. ಇದು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು. ಕನ್ಯಾ ರಾಶಿಯವರು ಸಾಧ್ಯವಾದಷ್ಟು ಸಾಲ ಪಡೆಯುವುದನ್ನು ತಪ್ಪಿಸಿ. ಇದಲ್ಲದೆ, ನಿಮ್ಮ ಖರ್ಚಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗಬಹುದು.
ತುಲಾ ರಾಶಿ:
ತುಲಾ ರಾಶಿಯವರು ಅದರಲ್ಲೂ ವಿದ್ಯಾರ್ಥಿ ವರ್ಗದವರು ಕೈ ಕೆಸರಾದರೆ ಬಾಯಿ ಮೊಸರು ಎಂಬುದನ್ನು ನೆನಪಿಡಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಖಂಡಿತ ಪಡೆಯುವಿರಿ. ವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.
ಇದನ್ನೂ ಓದಿ- Rahu Gochar 2023: ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ರಾಹು
ವೃಶ್ಚಿಕ ರಾಶಿ:
ಕುಂಭ ರಾಶಿಗೆ ಶನಿ ಪ್ರವೇಶದೊಂದಿಗೆ ವೃಶ್ಚಿಕ ರಾಶಿಯವರಿಗೆ ಶನಿ ಧೈಯಾ ಪ್ರಭಾವ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ನೀವು ಆಸ್ತಿ ಖರೀದಿಸುವ ಯೋಗವಿದೆ. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಆದರೆ, ನಿಮ್ಮ ಪ್ರೀತಿ ಪಾತ್ರರಿಂದ ದೂರ ಉಳಿಯಬೇಕಾಗಬಹುದು. ಇದು ನಿಮ್ಮ ಮನಸ್ಸಿನ ಶಾಂತಿಯನ್ನು ಕೆಡಿಸುತ್ತದೆ.
ಧನು ರಾಶಿ:
ಈ ಸಮಯದಲ್ಲಿ ಧನು ರಾಶಿಯ ವ್ಯಾಪಾರಸ್ಥರಿಗೆ ಸಂಕಷ್ಟಗಳು ಎದುರಾಗಬಹುದು. ಆದಾಗ್ಯೂ, ನಿಮ್ಮ ಸ್ನೇಹಿತರು, ಆಪ್ತರ ಸಹಕಾರ ದೊರೆಯಲಿದೆ. ಪ್ರೀತಿ-ಪ್ರೇಮದಲ್ಲಿರುವವರಿಗೆ ವಿವಾಹ ಯೋಗವೂ ಇದೆ.
ಮಕರ ರಾಶಿ:
ಶನಿ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೆ ಅಪಾರ ವಿತ್ತೀಯ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ನೀವು ವ್ಯಾಪಾರ-ವ್ಯವಹಾರದಲ್ಲಿ ಹಠಾತ್ ಧನಲಾಭವನ್ನು ಪಡೆಯಬಹುದು.
ಕುಂಭ ರಾಶಿ:
ಸ್ವ ರಾಶಿಯಲ್ಲಿ ಶನಿ ಸಂಕ್ರಮಣವು ಈ ರಾಶಿಯವರ ಮೇಲೆ ಗರಿಷ್ಠ ಪರಿಣಾಮವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ತುಂಬಾ ಪ್ರಯೋಜನಕಾರಿ ಆಗಿರಲಿದೆ. ಆಸ್ತಿ ಖರೀದಿ ಯೋಗವೂ ಇದೆ. ಅದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸಿ.
ಮೀನ ರಾಶಿ:
ಶನಿ ಸಂಕ್ರಮಣದ ಪ್ರಭಾವದಿಂದಾಗಿ ಈ ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದೂರಿಗೆ ಪ್ರಯಾಣ ಮಾಡಬೇಕಾಗಬಹುದು. ಇದಲ್ಲದೆ, ಆಸ್ಪತ್ರೆಗೆ ಹೆಚ್ಚಿನ ಹಣ ವ್ಯಯವಾಗಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.