Rahu Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಾಪ ಗ್ರಹ ಎಂದು ಬಣ್ಣಿಸಲ್ಪಡುವ ರಾಹು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗಲೆಲ್ಲಾ ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಸಾಮಾನ್ಯವಾಗಿ, ಶನಿ, ರಾಹು, ಕೇತು ಪರಿಣಾಮ ಎಂದರೆ ಜನರ ಮನಸ್ಸಿನಲ್ಲಿ ಈ ಗ್ರಹಗಳು ಕೆಟ್ಟ ಪರಿಣಾಮವನ್ನೇ ಉಂಟು ಮಾಡುತ್ತವೆ ಎಂಬ ನಂಬಿಕೆ ಇದೆ. ಆದರೆ, ಜಾತಕದಲ್ಲಿ ಈ ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ಇದರಿಂದ ಒಳ್ಳೆಯ ಫಲಗಳು ಕೂಡ ದೊರೆಯುತ್ತವೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹು ಹಿಮ್ಮುಖವಾಗಿ ಚಲಿಸುವ ಗ್ರಹ. ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ರಾಹು ಗ್ರಹವು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದೆ. ಈ ಸಮಯದಲ್ಲಿ ರಾಹುವು ಕೆಲವು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 2023ರಲ್ಲಿ ರಾಹು ಸಂಕ್ರಮಣದಿಂದ ಯಾವ್ಯಾವ ರಾಶಿಯವರಿಗೆ ಪ್ರಯೋಜನವಾಗಲಿದೆ ತಿಳಿಯಿರಿ.
ಇದನ್ನೂ ಓದಿ- Shani Gochar 2023: ಇನ್ನೊಂದು ವಾರದಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ ನಿಮ್ಮ ಮೇಲೆ ಏನು ಪರಿಣಾಮ
ಈ ರಾಶಿಯವರಿಗೆ ಅಪಾರ ಹಣ, ಯಶಸ್ಸು ನೀಡಲಿದ್ದಾನೆ ರಾಹು :
ಮೇಷ ರಾಶಿ:
ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲಿರುವ ರಾಹು ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ. ರಾಹುವಿನ ಶುಭ ಪರಿಣಾಮದಿಂದಾಗಿ ಈ ರಾಶಿಯವರಿಗೆ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಇದಲ್ಲದೆ, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಕರ್ಕಾಟಕ ರಾಶಿ:
ರಾಹು ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೂ ಲಾಭದಾಯಕವಾಗಲಿದೆ. ಈ ಸಮಯದಲ್ಲಿ ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಈ ಸಮಯದಲ್ಲಿ ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Shukra Gochar 2023: ಶನಿಯ ರಾಶಿಯಲ್ಲಿ ಶುಕ್ರನ ಸಂಚಾರ- ಈ ರಾಶಿಯವರಿಗೆ ಧನ ಲಾಭ
ಮೀನ ರಾಶಿ:
ಮೀನ ರಾಶಿಯಲ್ಲಿಯೇ ರಾಹುವಿನ ಸಂಚಾರ ನಡೆಯಲಿದ್ದು ಈ ಸಮಯದಲ್ಲಿ ಮೀನ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ನಿರ್ಮಾಣವಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಪ್ರಾಪ್ತಿಯಾಗುವ ಯೋಗವಿದ್ದು ವಿತ್ತೀಯ ಲಾಭದಿಂದಾಗಿ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.