Shani Gochar 2023 Effect: ಕ್ರೂರ ಗ್ರಹ, ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವವನು ಎಂದೇ ಖ್ಯಾತಿ ಪಡೆದಿರುವ ಶನಿದೇವನು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ವಿಶೇಷವೆಂದರೆ ಮೂರು ದಶಕಗಳ ಬಳಿಕ ಶನಿಯು ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸುತ್ತಿರುವುದು ಕೆಲವು ರಾಶಿಯವರಿಗೆ ಭರ್ಜರಿ ಅದೃಷ್ಟವನ್ನು ಕರುಣಿಸಿದರೆ, ಕೆಲವು ರಾಶಿಯವರಿಗೆ ಶನಿ ಕಾಟ ಆರಂಭವಾಗಲಿದೆ. ಹಾಗಿದ್ದರೆ, ಇನ್ನೊಂದು ವಾರದಲ್ಲಿ ಶನಿ ರಾಶಿ ಪರಿವರ್ತನೆಯಿಂದ ಯಾವ ರಾಶಿಯವರಿಗೆ ಅದೃಷ್ಟ, ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ನಿಮ್ಮ ರಾಶಿಯ ಮೇಲೆ ಶನಿ ರಾಶಿ ಪರಿವರ್ತನೆ ಪ್ರಭಾವ ಹೇಗಿರುತ್ತೆ:
ಮೇಷ ರಾಶಿ: 

ಇನ್ನೊಂದು ವಾರದಲ್ಲಿ ಶನಿ ರಾಶಿ ಪರಿವರ್ತನೆ ಪರಿಣಾಮದಿಂದಾಗಿ ಮೇಷ ರಾಶಿಯವರಿಗೆ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗಬಹುದು. ಈ ಸಮಯದಲ್ಲಿ ಖರ್ಚು-ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಸಾಧ್ಯವಾದಷ್ಟು ತಾಳ್ಮೆಯಿಂದ ಇರುವುದು ಅಗತ್ಯವಾಗಿದೆ.


ವೃಷಭ ರಾಶಿ: 
ಶನಿ ರಾಶಿ ಪರಿವರ್ತನೆ ಪರಿಣಾಮದಿಂದಾಗಿ ಈ ಸಮಯದಲ್ಲಿ ನೀವು ತೀರ್ಥಯಾತ್ರೆಗೆ ತೆರಳಬಹುದು. ಆದಾಗ್ಯೂ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನಗತ್ಯ ಕೋಪವನ್ನು ತಪ್ಪಿಸಿ.


ಮಿಥುನ ರಾಶಿ:
ಶನಿ ಸಂಚಾರದಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು. ಹೆಚ್ಚು ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಫಲ ದೊರೆಯದೇ ಇರಬಹುದು. 


ಕರ್ಕಾಟಕ ರಾಶಿ:
ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು. ಆದರೆ, ಬೇಡದ ವಿಷಯಗಳಿಗೆ ತಲೆಕೆಡಿಸಿಕೊಂಡು ಬೇಸರ ಮಾಡಿಕೊಳ್ಳುವುದನ್ನು ತಪ್ಪಿಸಿ. ವೃತ್ತಿ ರಂಗದಲ್ಲಿ ಪ್ರಗತಿ ಸಾಧ್ಯತೆ ಇದೆ.


ಇದನ್ನೂ ಓದಿ- Shani Gochar 2023: 15 ದಿನಗಳಲ್ಲಿ 2 ಬಾರಿ ಶನಿ ಸಂಚಾರ, ಈ ರಾಶಿಯವರಿಗೆ ಬಂಪರ್ ಯೋಗ


ಸಿಂಹ ರಾಶಿ: 
ಶನಿ ಸಂಚಾರದಿಂದ ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಯ ಜೊತೆಗೆ ಆದಾಯವೂ ಹೆಚ್ಚಾಗಲಿದೆ. 


ಕನ್ಯಾ ರಾಶಿ: 
ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಲಿರುವ ಶನಿದೇವನು ಈ ರಾಶಿಯವರಿಗೆ ಕೌಟುಂಬಿಕ ಸುಖವನ್ನು ಕರುನಿಸಲಿದ್ದಾನೆ. ಇದಲ್ಲದೆ, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. 


ತುಲಾ ರಾಶಿ:
ಶನಿ ರಾಶಿ ಪರಿವರ್ತನೆಯ ಪರಿಣಾಮದಿಂದಾಗಿ ನಿಮ್ಮ ಆರೋಗ್ಯವು ಹದಗೆಡಬಹುದು. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಆದರೆ, ಬೇಸರಗೊಳ್ಳುವ ಅಗತ್ಯವಿಲ್ಲ, ನಿಮ್ಮ ಮಾತು ಮಧುರವಾಗಿದ್ದರೆ ಹಲವು ಸಮಸ್ಯೆಗಳನ್ನು ತಪ್ಪಿಸಬಹುದು.


ವೃಶ್ಚಿಕ ರಾಶಿ:
ರಾಶಿಚಕ್ರ ಬದಲಾಯಿಸಲಿರುವ ಶನಿಯು ನಿಮ್ಮ ಮನಸ್ಸಿಗೆ ಕಸಿವಿಸಿ ಉಂಟು ಮಾಡಬಹುದು. ಆದಾಗ್ಯೂ, ನಿಮ್ಮ ಆತ್ಮವಿಶ್ವಾಸವು ನಿಮ್ಮನ್ನು ಗೆಲ್ಲುವಂತೆ ಮಾಡುತ್ತದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಸಮಯ.


ಇದನ್ನೂ ಓದಿ- Shani Deva: ಶನಿ ದೇವ ನಿಮ್ಮ ಮೇಲೆ ದಯೆ ತೋರುತ್ತಿದ್ದಾನೆಯೇ, ಇಲ್ಲವೇ ವಕ್ರ ದೃಷ್ಟಿ ಬೀರಿದ್ದಾನಾ- ಈ ಸಂಕೇತಗಳಿಂದ ತಿಳಿಯಿರಿ


ಧನು ರಾಶಿ:
ನಿಮ್ಮ ಪ್ರಮುಖ ಕೆಲಸಗಳಲ್ಲಿ ನಿಮ್ಮ ಸ್ನೇಹಿತರು ನಿಮಗೆ ಬೆನ್ನುಲುಬಾಗಿ ನಿಲ್ಲಲಿದ್ದಾರೆ. ಕುಟುಂಬದೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಸಾಧ್ಯತೆಯೂ ಇದೆ. 


ಮಕರ ರಾಶಿ:
ಶನಿ ರಾಶಿ ಪರಿವರ್ತನೆಯಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಕಾಣಲಿದೆ. ಯಾವುದೇ ಸಂದರ್ಭವನ್ನು ನಿಭಾಯಿಸಲು ತಾಳ್ಮೆ ವಹಿಸುವುದು ಅಗತ್ಯವಾಗಿದೆ. 


ಕುಂಭ ರಾಶಿ: 
ಮೂವತ್ತು ವರ್ಷಗಳ ಬಳಿಕ ನಿಮ್ಮ ರಾಶಿಯಲ್ಲಿಯೇ ಶನಿದೇವನ ಪ್ರವೇಶವಾಗಲಿದೆ. ಈ ಸಮಯದಲ್ಲಿ ನಿಮ್ಮ ಒತ್ತಡವನ್ನು ನಿಯಂತ್ರಿಸಲು  ನಿಮ್ಮ ಭಾವನೆಗಳಿಗೆ ಕಡಿವಾಣ ಹಾಕುವುದು ಅಗತ್ಯ. 


ಮೀನ ರಾಶಿ: 
ಕುಂಭ ರಾಶಿಯಲ್ಲಿ ಶನಿ ಪ್ರವೇಶವಾಗುತ್ತಿದ್ದಂತೆ ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಲಾಭವಾಗಲಿದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. 


ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.