Shani Deva: ನ್ಯಾಯದ ದೇವರು ಎಂದೇ ಬಣ್ಣಿಸಲ್ಪಡುವ ಶನಿದೇವನು ಪ್ರತಿ ವ್ಯಕ್ತಿಗೂ ಅವರ ಒಳ್ಳೆಯ-ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಹಾಗಾಗಿಯೇ, ಶನಿದೇವನ ದೃಷ್ಟಿ ಯಾರ ಮೇಲೆ ಇದ್ದರೂ ಅವರು ಶನಿಯನ್ನು ಶಾಂತಿಗೊಳಿಸಲು ಕ್ರಮ ಕೈಗೊಳ್ಳುತ್ತಾರೆ. ಆದರೆ, ಶನಿ ನಿಮ್ಮ ಮೇಲೆ ದಯೆ ತೋರುತ್ತಿದ್ದಾನೆಯೋ ಅಥವಾ ಶನಿಯ ವಕ್ರ ದೃಷ್ಟಿ ನಿಮ್ಮ ಮೇಲಿದೆಯೋ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.
ಧರ್ಮ ಗ್ರಂಥಗಳ ಪ್ರಕಾರ, ಶನಿ ದೇವ ಕರ್ಮಗಳಿಗೆ ತಕ್ಕ ಫಲ ನೀಡುವವನು. ಯಾವುದೇ ವ್ಯಕ್ತಿಯ ಮೇಲೆ ಶನಿಯ ಕೃಪಾಕಟಾಕ್ಷವಿದ್ದಾಗ ಅಂತಹ ವ್ಯಕ್ತಿ ಜೀವನದಲ್ಲಿ ಸಕಲ ಸುಖ-ಸಂಪತ್ತನ್ನು ಗಳಿಸುತ್ತಾನೆ. ಅಂತೆಯೇ, ಯಾವುದೇ ವ್ಯಕ್ತಿಯ ಮೇಲೆ ಶನಿಯ ವಕ್ರದೃಷ್ಟಿ ನೆಟ್ಟರೆ ಆತ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾನೆ ಎಂದು ಹೇಳಲಾಗುತ್ತದೆ. ಆದರೆ, ಶನಿ ದೇವ ನಿಮ್ಮ ಮೇಲೆ ದಯೆ ತೋರುತ್ತಿದ್ದಾನೆಯೇ, ಇಲ್ಲವೇ ವಕ್ರ ದೃಷ್ಟಿ ಬೀರಿದ್ದಾನಾ ಎಂಬುದನ್ನು ಗುರುತಿಸುವುದು ಹೇಗೆ ತಿಳಿಯಿರಿ.
ಇದನ್ನೂ ಓದಿ- Saturn Transit: 2023ರಲ್ಲಿ ಶನಿ ಮಹಾಪುರುಷ ಯೋಗದಿಂದ ಬೆಳಗಲಿದೆ ಈ ರಾಶಿಯವರ ಜೀವನ
ಶನಿ ದಯೆಯ ಸಂಕೇತಗಳಿವು:
* ಶನಿದೇವನ ಕೃಪೆಯಿಂದ ವ್ಯಕ್ತಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ.
* ಯಾವ ವ್ಯಕ್ತಿಯ ಮೇಲೆ ಶನಿ ದಯೆ ಇರುತ್ತದೋ ಆತ ಸಮಾಜದಲ್ಲಿ ಅಪಾರ ಗೌರವವನ್ನು ಪಡೆಯುತ್ತಾನೆ.
* ಯಾವುದೇ ದೊಡ್ಡ ಅಪಘಾತಗಳ ನಂತರವೂ ಅವರ ಜೀವಕ್ಕೆ ಯಾವುದೇ ಅಪಾಯವಾಗುವುದ್ಲ್ಲ.
* ಶನಿ ದಯೆ ಇದ್ದರೆ ಅವರ ಆರೋಗ್ಯ ಉತ್ತಮವಾಗಿರುತ್ತದೆ.
* ಯಾವುದೇ ವ್ಯಕ್ತಿಯ ಜೀವನದಲ್ಲಿ ಶನಿಯ ಕೃಪಾಕಟಾಕ್ಷವಿದ್ದರೆ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಠಾತ್ ಧನಲಾಭ ಸಾಧ್ಯತೆಯೂ ಇರುತ್ತದೆ.
* ದೇವಾಲಯದಲ್ಲಿ ಚಪ್ಪಲಿ ಕಳ್ಳತನವಾಗುವುದು ಶನಿದೇವನ ಆಶೀರ್ವಾದ ನಿಮ್ಮ ಮೇಲಿದೆ ಎಂಬುದರ ಸಂಕೇತ.
ಇದನ್ನೂ ಓದಿ- Shani Gochar: 2023ರಲ್ಲಿ 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಸಖತ್ ಲಾಭ
ಶನಿಯ ವಕ್ರ ದೃಷ್ಟಿಯ ಸಂಕೇತಗಳಿವು:
>> ಯಾವುದೇ ವ್ಯಕ್ತಿಯ ಮೇಲೆ ಶನಿ ವಕ್ರದೃಷ್ಟಿ ಇದ್ದಾರೆ ಅವರ ಆರೋಗ್ಯದಲ್ಲಿ ಸದಾ ಒಂದಿಲ್ಲೊಂದು ಸಮಸ್ಯೆ ಅವರನ್ನು ಬಾಧಿಸುತ್ತದೆ.
>> ಎಷ್ಟೇ ಕಷ್ಟಪಟ್ಟು ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ.
>> ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಫಲ ಸಿಗುವುದಿಲ್ಲ.
>> ಕುಟುಂಬದಲ್ಲಿ ಕಲಹ ವ್ಯಕ್ತಿಯನ್ನು ಬಾಧಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ