Chandra Grahan 2023 Date Time in India : 2023ರಲ್ಲಿ 4 ಗ್ರಹಣಗಳು  ಗೋಚರಿಸಲಿವೆ. ಅವುಗಳಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರ ಗ್ರಹಣ. ಇಲ್ಲಿಯವರೆಗೆ ಒಂದು ಸೂರ್ಯಗ್ರಹಣ ಮತ್ತು ಒಂದು ಚಂದ್ರಗ್ರಹಣ ಸಂಭವಿಸಿದೆ. ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಿತ್ತು. ಇದಾದ 15 ದಿನಗಳ ಬಳಿಕ ಅಂದರೆ ಮೇ 5 ರ ವೈಶಾಖ ಪೂರ್ಣಿಮೆಯ ದಿನವಾದ  ಶುಕ್ರವಾರ ಚಂದ್ರಗ್ರಹಣವು ಗೋಚರಿಸಿತ್ತು. ಇದೀಗ ಮುಂದಿನ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸರದಿ. ಇಲ್ಲಿಯವರೆಗೆ ಸಂಭವಿಸಿದ ಎರಡು ಗ್ರಹಣಗಳು ಭಾರತದಲ್ಲಿ ಗೋಚರಿಸಲಿಲ್ಲ. ಆದ್ದರಿಂದ ಅದರ ಸೂತಕ ಅವಧಿ ಕೂಡಾ ಮಾನ್ಯವಾಗಿರಲಿಲ್ಲ. ಆದರೆ ಈಗ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಭಾರತದಲ್ಲಿಯೂ ಗೋಚರಿಸುತ್ತದೆ. ಹೀಗಾಗಿ ಅದರ   ಪರಿಣಾಮವೂ ಇರಲಿದೆ. 


COMMERCIAL BREAK
SCROLL TO CONTINUE READING

2023ರ ಎರಡನೇ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ? :
ವರ್ಷದ ಎರಡನೇ ಚಂದ್ರಗ್ರಹಣವು ಅಕ್ಟೋಬರ್ 29, 2023 ರಂದು ಭಾನುವಾರ ನಡೆಯಲಿದೆ. ಇದು ವರ್ಷದ ಕೊನೆಯ ಚಂದ್ರಗ್ರಹಣವಾಗಿರಲಿದೆ. ಈ ಚಂದ್ರಗ್ರಹಣವು ಬಹಳ ವಿಶೇಷವಾಗಿರುತ್ತದೆ. ಏಕೆಂದರೆ, ವರ್ಷವಿಡೀ ಭಾರತದಲ್ಲಿ ಗೋಚರಿಸುವ ಏಕೈಕ ಗ್ರಹಣ ಇದಾಗಿರಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದರಿಂದ, ಚಂದ್ರಗ್ರಹಣದ ಸೂತಕ ಅವಧಿಯೂ ಮಾನ್ಯವಾಗಿರುತ್ತದೆ. 2023 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಭಾರತದಲ್ಲಿ ಅಕ್ಟೋಬರ್ 29 ರಂದು ಮಧ್ಯರಾತ್ರಿ 01:06 ಕ್ಕೆ ಪ್ರಾರಂಭವಾಗಿ 02:22ಕ್ಕೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಈ ಚಂದ್ರಗ್ರಹಣದ ಒಟ್ಟು ಅವಧಿ 1 ಗಂಟೆ 16 ನಿಮಿಷಗಳು.


ಇದನ್ನೂ ಓದಿ : Shani Jayanti Impact: ನಾಳೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ


2023 ರ ಚಂದ್ರಗ್ರಹಣದ ಸೂತಕ ಅವಧಿ :
ಅಕ್ಟೋಬರ್ 29ರಂದು ಸಂಭವಿಸುವ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಹಾಗಾಗಿ ಅದರ ಸೂತಕ ಅವಧಿಯನ್ನು ಸಹ ಇಲ್ಲಿ ಪರಿಗಣಿಸಲಾಗುವುದು. ಚಂದ್ರಗ್ರಹಣದ ಸೂತಕ ಅವಧಿಯಲ್ಲಿ, ಪೂಜೆ ಸೇರಿದಂತೆ ಯಾವುದೇರೀತಿಯ ಶುಭ  ಕಾರ್ಯಗಳನ್ನು ಮಾಡುವಂತಿಲ್ಲ. ಇದೇ ಕಾರಣಕ್ಕೆ ಗ್ರಹ ಕಾಲದಲ್ಲಿ ದೇವಾಲಯಗಳ ಬಾಗಿಲು ಮುಚ್ಚಲಾಗುವುದು. ಚಂದ್ರಗ್ರಹಣ ಮುಗಿದ ನಂತರ ಸ್ನಾನ ಮಾಡಿದ ನಂತರವೇ ದೇವರನ್ನು ಮುಟ್ಟಬೇಕು. 


ಸೂತಕ ಕಾಲ ಯಾವಾಗ ? : 
ಚಂದ್ರಗ್ರಹಣದ ಸೂತಕ ಕಾಲವು ಗ್ರಹಣ ಗೋಚರಿಸುವ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಚಂದ್ರಗ್ರಹಣದ ಅಶುಭ ಪರಿಣಾಮವನ್ನು ತಪ್ಪಿಸಲು, ಈ ಸಮಯದಲ್ಲಿ ಹೊರಗೆ ಹೋಗಬಾರದು. ದೇವರ ಸ್ಮರಣೆ ಮಾಡಬೇಕು. ಗ್ರಹಣ ಸಮಯದಲ್ಲಿ  ಊಟ ತಿಂಡಿ, ನೀರು ಸೇವನೆ ನಿಷಿದ್ದ. ಚಂದ್ರಗ್ರಹಣದ ನಂತರ ತಪ್ಪದೇ ಸ್ನಾನ ಮಾಡಬೇಕು, ಸ್ನಾನ ಮುಗಿಸಿ ದೇವರ ಪೂಜೆ ಮಾಡಿದ ನಂತರವೇ ಆಹಾರ ಸೇವಿಸಬೇಕು.  


ಇದನ್ನೂ ಓದಿ : Shani Dev: ಈ ಗಿಡ ನೆಟ್ಟರೆ ಶನಿದೇವ ಪ್ರಸನ್ನನಾಗುತ್ತಾನೆ & ಸಾಡೇಸಾತಿ ಮತ್ತು ಧೈಯಾದಿಂದ ಪರಿಹಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.