Garuda Purana: ನಿತ್ಯ ಕಣ್ಣಿಗೆ ಬೀಳುವ ಈ ಸಂಗತಿಗಳಿಂದ ಜೀವನವೇ ಬದಲಾಗುತ್ತದೆ ಗೊತ್ತಾ?
Garuda Purana In Kannada: ಜೀವನದಲ್ಲಿನ ಕೆಲ ಸಂಗತಿಗಳು ಎಷ್ಟೊಂದು ಶುಭ ಹಾಗೂ ಪವಿತ್ರವಾಗಿವೆ ಎಂದರೆ, ಕೇವಲ ಅವುಗಳ ದರ್ಶನ ಮಾತ್ರದಿಂದ ಮನುಷ್ಯ ಪುಣ್ಯ ಪಡೆದು ಪುನೀತನಾಗುತ್ತಾನೆ ಎನ್ನಲಾಗುತ್ತದೆ.ಗರುಡ ಪುರಾಣದಲ್ಲಿ ಇಂತಹ 7 ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ.
Garuda Purana Learnings In Kannada - 18 ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳು ಕೇವಲ ಸಾವು ಮತ್ತು ಅದರ ನಂತರದ ಆತ್ಮದ ಪ್ರಯಾಣದ ಬಗ್ಗೆ ಮಾತ್ರ ಹೇಳುವುದಿಲ್ಲ. ಜೀವನವನ್ನು ಸುಧಾರಿಸುವ ಮಾರ್ಗಗಳನ್ನು ಸಹ ಅದರಲ್ಲಿ ಹೇಳಲಾಗಿದೆ ಮತ್ತು ಅಂತಹ ಕೆಲವು ಕಾರ್ಯಗಳ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ, ಈ ಕಾರ್ಯಗಳು ಮಾಡುವುದರಿಂದ ವ್ಯಕ್ತಿಯ ಪ್ರಸ್ತುತ ಜೀವನವೂ ಸಂತೋಷದಿಂದ ಕೂಡಿರುತ್ತದೆ ಮತ್ತು ಪುಣ್ಯಪ್ರಾಪ್ತಿಯಾಗುತ್ತದೆ. ಇಂದು ನಾವು ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ 7 ಸಂಗತಿಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವುಗಳ ದರ್ಶನ ಮಾತ್ರದಿಂದ ವ್ಯಕ್ತಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲ, ಅವುಗಳನ್ನು ನೋಡುವುದರಿಂದ ಮಾತ್ರ ವ್ಯಕ್ತಿಯೊಬ್ಬರ ಜೀವನದಲ್ಲಿ, ಶುಭ ಫಲಗಳು ಬರಲಾರಂಭಿಸುತ್ತವೆ.
ಈ ಸಂಗತಿಗಳನ್ನು ಅತ್ಯಂತ ಪವಿತ್ರ ಎಂದು ಭಾವಿಸಲಾಗುತ್ತದೆ
ಹಸುವಿನ ಹಾಲು - 'ಗೋವು ವಿಶ್ವಕ್ಕೆ ತಾಯಿ' ಎನ್ನಲಾಗುತ್ತದೆ. ಹಸುವನ್ನು ಹಿಂದೂ ಧರ್ಮದಲ್ಲಿ ಪೂಜ್ಯನೀಯ ಎಂದು ಪರಿಗಣಿಸಲಾಗಿದೆ. ಹಸುವಿನ ಹಾಲನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಹಸುವಿನ ಹಾಲಿನ ದರ್ಶನ ಮಾತ್ರದಿಂದ ವ್ಯಕ್ತಿಗೆ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಗೋಧೂಳಿ- ಹಸು ತನ್ನ ಕಾಲುಗಳಿಂದ ನೆಲವನ್ನು ಗೀಚಿದಾಗ ಅದರಿಂದ ಏಳುವ ಧೂಳನ್ನು ಗೋಧೂಳಿ ಎಂದು ಕರೆಯಲಾಗುತ್ತದೆ. ಹಸು ಈ ರೀತಿ ಕಾಲು ಕೆರೆಯುವುದನ್ನು ನೋಡುವುದು ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ. ಯಾವುದೇ ಒಂದು ಶುಭಕಾರ್ಯಕ್ಕೆ ಹೋಗುವಾಗ, ಈ ರೀತಿಯ ದೃಶ್ಯ ಕಣ್ಣಿಗೆ ಬಿದ್ದರೆ, ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.
ಗೌಶಾಲೆ- ಗೋಶಾಲೆಯನ್ನು ಕಟ್ಟುವುದು, ಗೋವುಗಳ ಸೇವೆ ಮಾಡುವುದು, ಗೋಶಾಲೆಗಾಗಿ ದಾನ ಮಾಡುವುದು ಅತ್ಯಂತ ಶುಭ ಕಾರ್ಯಗಳೆಂದು ಎಂದು ಪರಿಗಣಿಸಲಾಗಿದೆ, ಆದರೆ ಗೋಶಾಲೆಯನ್ನು ನೋಡುವುದು ತುಂಬಾ ಒಳ್ಳೆಯದು. ಗೋಶಾಲೆಯನ್ನು ನೋಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಗೊರಸು - ಗೋವಿನ ಪಾದಗಳಿಗೆ ತೀರ್ಥಕ್ಷೇತ್ರದ ಸ್ಥಾನಮಾನ ನೀಡಲಾಗಿದೆ. ಇದೇ ಕಾರಣದಿಂದ ಹಸುವಿನ ಪಾದಗಳನ್ನು ಸ್ಪರ್ಶಿಸಲಾಗುತ್ತದೆ. ಹಸುವಿನ ಗೊರಸುಗಳ ದರ್ಶನ ಮಾತ್ರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
ಗೋಮೂತ್ರ- ಗೋಮೂತ್ರವನ್ನು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಗರುಡ ಪುರಾಣದಲ್ಲಿ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಗೋಮೂತ್ರದ ದರ್ಶನ ಮಾತ್ರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಸಗಣಿ- ಹಸುವಿನ ಸಗಣಿಯನ್ನು ಸಹ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಹಿಂದೂ ಧರ್ಮಶಾಸ್ತ್ರಗಳಲ್ಲಿ ಪೂಜೆ ಮತ್ತು ಶುಭ ಕಾರ್ಯದ ಸ್ಥಳವನ್ನು ಶುದ್ಧೀಕರಿಸಲು ಹಸುವಿನ ಸಗಣಿಯನ್ನು ಬಳಸಲಾಗುತ್ತದೆ. ಮನೆಯ ಬಾಗಿಲಿನ ಮುಂದೆ ಗೋವಿನ ಸಗಣಿ ಇಟ್ಟರೆ ಅದು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ಗೋವಿನ ಸಗಣಿಯನ್ನು ನೋಡುವುದರಿಂದಲೂ ಕೂಡ ಸಾಕಷ್ಟು ಪುಣ್ಯ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ-Shani Auspicious Effect: ಶನಿಯ ಶುಭ ದೆಸೆ ಇದ್ದರೆ ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ
ಬೇಸಾಯ- ಆಹಾರ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ ಮತ್ತು ಪ್ರಪಂಚದ ಬಹುತೇಕ ಜನರು ಇದಕ್ಕಾಗಿ ರೈತರು ಬೆಳೆದ ಬೆಳೆಯನ್ನು ಅವಲಂಭಿಸಿದ್ದಾರೆ. ಗದ್ದೆಯಲ್ಲಿ ಬೆಳೆದು ನಿಂತ ಬೆಳೆಗಳನ್ನು ನೋಡುವುದರಿಂದಲೂ ಕೂಡ ಪುಣ್ಯ ಪ್ರಾಪ್ತಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಇದನ್ನೂ ಓದಿ-Relationship Tips: ಸಂಗಾತಿಗೆ ಸರ್ಪ್ರೈಸ್ ಕೊಡಬೇಕೇ? ಈ ಸಲಹೆ ಅನುಸರಿಸಿ, ಪ್ರೀತಿ ಹೆಚ್ಚಾಗುತ್ತೆ
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.