Shami Plant: ಜೋತಿಷ್ಯ ಶಾಸ್ತ್ರದಲ್ಲಿ ಆರಾಧ್ಯ ಸ್ಥಾನವನ್ನು ಪಡೆದುಕೊಂಡ ಹಲವು ವೃಕ್ಷಗಳು, ಸಸಿಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಶಮಿ ವೃಕ್ಷವೂ ಕೂಡ ಒಂದು. ಇದು ಶನಿ ದೇವ ಮತ್ತು ಶಿವ ಇಬ್ಬರಿಗೂ ತುಂಬಾ ಪ್ರಿಯವಾದದ್ದು. ಇದನ್ನು ದೈವಿಕ ಸಸ್ಯ ಎಂದೂ ಕರೆಯುತ್ತಾರೆ. ಈ ಗಿಡವನ್ನು ನೆಡುವುದರಿಂದ ಅಸಂಖ್ಯಾತ ಪ್ರಯೋಜನಗಳಿವೆ. ಅವುಗಳಲ್ಲಿನ ಕೆಲ ಪ್ರಮುಖ ಪರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

1. 45 ದಿನಗಳ ಕಾಲ ಶಮಿ ವೃಕ್ಷದ ಬಳಿ ನಿತ್ಯವೂ ಸಂಜೆಯ ಹೊತ್ತು ತುಪ್ಪದ ದೀಪವನ್ನು ಬೆಳಗುವುದರಿಂದ ದಾಂಪತ್ಯದಲ್ಲಿನ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

2. ಮನೆಯ ಮುಖ್ಯ ದ್ವಾರದ ಹೊರಗೆ ಶಮಿ ಗಿಡವನ್ನು ನೆಡಬಹುದು. ಸಂಜೆ ಶಮಿ ಗಿಡದ ಬಳಿ ದೀಪವನ್ನು ಬೆಳಗಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದನ್ನು ನೇರವಾಗಿ ಮಡಕೆ ಅಥವಾ ನೆಲದ ಮೇಲೆ ನೆಡಬಹುದು.

3. ಈ ಸಸ್ಯವು ದೈವಿಕ ಅಂಶ ಹೊಂದಿದ್ದು, ಪವಿತ್ರವಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ, ಆದ್ದರಿಂದ ಇದನ್ನು ಮನೆಯಲ್ಲಿ ನೆಡುವಾಗ ಶುದ್ಧ ಮಣ್ಣನ್ನು ಬಳಸಿ. ಗಿಡದ ಸುತ್ತ ಸ್ವಚ್ಛತೆ ಕಾಪಾಡಿ. ಅಷ್ಟೇ ಅಲ್ಲ ಶಮಿ ಗಿಡವನ್ನು ಮನೆಯೊಳಗೆ ನೆಡಬಾರದು. ಮನೆಯ ಮೇಲ್ಛಾವಣಿಯ ಮೇಲೆ ದಕ್ಷಿಣ ದಿಕ್ಕಿನಲ್ಲಿ  ನೆಡಬೇಕು. ದಕ್ಷಿಣ ದಿಕ್ಕಿನಲ್ಲಿ ಸೂರ್ಯನ ಬೆಳಕು ಇಲ್ಲದಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿಯೂ ಇಡಬಹುದು.

4. ಶನಿ ದೇವನ ಜೊತೆಗೆ ಶಿವನಿಗೂ ಕೂಡ ಶಮಿ ವೃಕ್ಷ ತುಂಬಾ ಪ್ರಿಯವಾದುದು. ಇದನ್ನು ನೆಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗಿ, ದುಃಖಗಳು ದೂರವಾಗುತ್ತವೆ. ಇದನ್ನು ಶನಿವಾರದಂದು ಮನೆಯಲ್ಲಿ ನೆಡುವುದರಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ಗಿಡವನ್ನು ದಸರಾ ದಿನದಂದು ಕೂಡ ನೆಡಬಹುದು.

5. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಸಾಡೇಸತಿ ಅಥವಾ ಎರಡೂವರೆ ವರ್ಷಗಳ ಕಾಟ ಎದುರಿಸುತ್ತಿರುವವರು ಮನೆಯಲ್ಲಿ ಶಮಿ ಗಿಡವನ್ನು ನೆಡಬೇಕು ಎಂದು ಸಲಹೆ ನೀಡಲಾಗುತ್ತದೆ. ಇದು ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-Tips To Get Rid Of Snoring: ಗೊರಕೆಯ ಸಮಸ್ಯೆಯಿಂದ ನೀವೂ ಪೀಡಿತರಾಗಿದ್ದೀರಾ? ಈ ಉಪಾಯ ಅನುಸರಿಸಿ!

6. ಶಾಸ್ತ್ರಗಳಲ್ಲಿ ಶಮಿ ಸಸ್ಯವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ ಮತ್ತು ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಮಿಯನ್ನು ನಿತ್ಯ ಪೂಜಿಸುವುದರಿಂದ ವಿವಾಹ ಸಂಬಂಧಿ ಸಮಸ್ಯೆಗಳೂ ದೂರಾಗುತ್ತವೆ ಎನ್ನಲಾಗುತ್ತದೆ.


ಇದನ್ನೂ ಓದಿ-Richest Peopl Zodiac Signs:12 ರಾಶಿಗಳಲ್ಲಿ ವಿಶ್ವದ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದ ರಾಶಿಗಳು ಯಾವುವು ಗೊತ್ತಾ?


 (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.