Jupiter Rise 2023: ಮೇಷ ರಾಶಿಯಲ್ಲಿ ಉದಯಿಸಿದ ಗುರು, ವಿವಾಹಗಳ ಸುಗ್ಗಿ ಆರಂಭ, ಇಲ್ಲಿದೆ ಶುಭ ಮುಹೂರ್ತಗಳ ವಿವರ!

Marriage Muhurat 2023: ಧರ್ಮ ಶಾಸ್ತ್ರಗಳ ಪ್ರಕಾರ ಮದುವೆ-ಗೃಹಪ್ರವೇಶಳಂತಹ ಶುಭ ಕಾರ್ಯಗಳಿಗೆ ಗುರು ಹಾಗೂ ಶುಕ್ರ ಬಲಗಳ ಸ್ಥಿತಿಗತಿಗಳನ್ನು ನೋಡಲಾಗುತ್ತದೆ. ಪ್ರಸ್ತುತ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಉದಯ ನೆರವೇರಿದ್ದು, ಮದುವೆ-ವಿವಾಹ ಇತ್ಯಾದಿ ಶುಭ ಕಾರ್ಯಗಳ ಶುಭ ಮುಹೂರ್ತಗಳು ಆರಂಭಗೊಂಡಿವೆ.   

Written by - Nitin Tabib | Last Updated : Apr 27, 2023, 03:26 PM IST
  • ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ನಾಲ್ಕು ತಿಂಗಳ ಚಾತುರ್ಮಾಸದ ಅವಧಿಯಲ್ಲಿ ಯಾವುದೇ ಶುಭ ಹಾಗೂ ಮಂಗಳ ಕಾರ್ಯಗಳನ್ನು ನೆರವೇರಿಸಲಾಗುವುದಿಲ್ಲ.
  • ಏಕೆಂದರೆ ಈ ಅವಧಿಯಲ್ಲಿ ಶ್ರೀವಿಷ್ಣು ಕ್ಷೀರ ಸಾಗರಕ್ಕೆ ಯೋಗ ನಿದ್ರೆಗೆ ತೆರಳುತ್ತಾನೆ ಹಾಗೂ ಸಂಸಾರದ ಎಲ್ಲಾ ಜವಾಬ್ದಾರಿಗಳು ಶಿವನಿಗೆ ಕೊಟ್ಟು ಹೋಗುತ್ತಾನೆ.
  • ಈ ವರ್ಷ ಜೂನ್ 29, 2023 ರಿಂದ ಚಾತುರ್ಮಾಸ ಆರಂಭಗೊಳ್ಳುತ್ತಿದ್ದು, ಇದು ನವೆಂಬರ್ 23, 2023 ಕ್ಕೆ ಅಂತ್ಯವಾಗಲಿದೆ.
Jupiter Rise 2023: ಮೇಷ ರಾಶಿಯಲ್ಲಿ ಉದಯಿಸಿದ ಗುರು, ವಿವಾಹಗಳ ಸುಗ್ಗಿ ಆರಂಭ, ಇಲ್ಲಿದೆ ಶುಭ ಮುಹೂರ್ತಗಳ ವಿವರ! title=
ವಿವಾಹ-ಗೃಹಪ್ರವೇಶ ಮುಹೂರ್ತಗಳು 2023

Marriage Shubh Muhuyrat 2023: ಧರ್ಮ ಶಾಸ್ತ್ರಗಳ ಪ್ರಕಾರ ಯಾವುದೇ ಒಂದು ಶುಭ ಹಾಗೂ ಮಂಗಳ ಕಾರ್ಯಗಳನ್ನು ನೆರವೇರಿಸುವ ಮುನ್ನ ಶುಭ ಮುಹೂರ್ತ, ಗ್ರಹ ನಕ್ಷತ್ರಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತದೆ. ಕಾರ್ಯ ನಿರ್ವಿಘ್ನ ರೀತಿಯಲ್ಲಿ ಪೂರ್ಣಗೊಂಡು, ಭವಿಷ್ಯ ಸುಖಮಯವಾಗಿರಬೇಕು ಎಂಬುದೇ ಇದರ ಹಿಂದಿನ ಉದ್ದೇಶವಾಗಿರುತ್ತದೆ. ಹೀಗಿರುವಾಗ ಮದುವೆ ವಿವಾಹಗಳ ವೇಳೆಯಲ್ಲಿ ಚಾತುರ್ಮಾಸ, ಅಧಿಕಮಾಸಗಳಿಂದ ಹಿಡಿದು ಗುರು ಹಾಗೂ ಶುಕ್ರ ಗ್ರಹಗಳ ಸ್ಥಿತಿಗತಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಶುಕ್ರ ಹಾಗೂ ಗುರುವಿನ ಅಸ್ತ ಕಾಲದಲ್ಲಿ ಶುಭಕಾರ್ಯಗಳ ಮೇಲೆ ನಿರ್ಬಂಧನೆಗಳು ಬರುತ್ತವೆ. ಆದರೆ, ಇದೀಗ ಏಪ್ರಿಲ್ 27, 2023 ರಂದು ಬೆಳಗ್ಗೆ 2 ಗಂಟೆ 7 ನಿಮಿಷಕ್ಕೆ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಉದಯ ನೆರವೇರಿದ್ದು, ಮತ್ತೊಮ್ಮೆ ಮಂಗಳ ಕಾರ್ಯಗಳ ಸೀಜನ್ ಆರಂಭಗೊಂಡಿದೆ. ಇನ್ನೊ0ದೆಡೆ ಏಪ್ರಿಲ್ 14, 2023 ರಿಂದ ಸೂರ್ಯ ಕೂಡ ಮೇಷ ರಾಶಿಯಲ್ಲಿ ಸಂಕ್ರಮಿಸಿದ್ದು ಇದರಿಂದ ಖರಮಾಸ ಅಂತ್ಯವಾಗಿದೆ. ಹಾಗೆ ನೋಡಿದರೆ ಖರಮಾಸ ಅಂತ್ಯವಾಗುತ್ತಲೇ ಶುಭಕಾರ್ಯಗಳು ಆರಂಭಗೊಳ್ಳುತ್ತವೆ ಆದರೆ, ಗುರು ಅಸ್ತನಾದ ಕಾರಣ ಶುಭಕಾರ್ಯಗಳು ಆರಂಭಗೊಂಡಿರಲಿಲ್ಲ. ಹೀಗಾಗಿ ಪ್ರಸ್ತುತ ಗುರು ಉದಯದಿಂದ ವಿವಾಹ ಹಾಗೂ ಗೃಹಪ್ರವೇಶಗಳಿಗೆ ಶುಭ ಮುಹೂರ್ತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಗುರು ಉದಯದ ವಿಶೇಷತೆ ಏನು?
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 27, 2023 ರಂದು ಮೇಷ ರಾಶಿಯಲ್ಲಿ ಗುರುವಿನ ಉದಯ ನೆರವೇರಿದೆ. ಹೀಗಾಗಿ ಇಂದು ಒಂದು ಶುಭಯೋಗ ಕೂಡ ನಿರ್ಮಾಣಗೊಂಡಿದೆ. ಗುರುವಿನ ಉದಯದಿಂದ ಇಂದು ಬೆಳಗ್ಗೆ 7 ಗಂಟೆಗೆ ಪುಷ್ಯ ನಕ್ಷತ್ರ ಯೋಗ ನಿರ್ಮಾಣಗೊಂಡಿದೆ. ಗುರು ಪುಷ್ಯ ನಕ್ಷತ್ರ ಯೋಗ ಎಲ್ಲಾ ಯೋಗಗಳಲ್ಲಿ ಸರ್ವಶ್ರೇಷ್ಠ ಎಂದು ಭಾವಿಸಲಾಗುತ್ತದೆ. ಇದಲ್ಲದೆ ಇಂದು ಅಮೃತ ಸಿದ್ಧಿ ಹಾಗೂ ಸರ್ವಾರ್ಥ ಸಿದ್ಧಿ ಯೋಗಗಳು ಕೂಡ ದಿನವಿಡೀ ಇರಲಿವೆ. ಇಂತಹ ಯೋಗಗಳಲ್ಲಿ ಶುಭ ಕಾರ್ಯಗಳನ್ನು ನೆರೆವೇರಿಸುವುದು ಅತ್ಯಂತ ಮಂಗಳಕರ ಮತ್ತು ಶುಭಫಲಪ್ರದಾಯಿ ಎಂದು ಸಾಬೀತಾಗುತ್ತವೆ.

2023 ರ ವಿವಾಹ ಮುಹೂರ್ತಗಳು
ಮೇ 2023 ತಿಂಗಳಿನಲ್ಲಿ ಬರುವ ವಿವಾಹ ಮುಹೂರ್ತಗಳು

ಮೇ 6,8,9, 10, 11, 15, 16, 20, 22, 27, 29 ಹಾಗೂ 30

ಜೂನ್ 2023 ತಿಂಗಳಿನಲ್ಲಿ ಬರುವ ವಿವಾಹ ಮುಹೂರ್ತಗಳು
1, 3, 5, 6, 7, 11, 12, 23, 24, 26 ಹಾಗೂ 27

ಮೇ 2023  ತಿಂಗಳಿನಲ್ಲಿ ಬರುವ ಗೃಹಪ್ರವೇಶದ ಮುಹೂರ್ತಗಳು
ಮೇ 6, 11, 15, 22, 29 ಹಾಗೂ 31

ಇದನ್ನೂ ಓದಿ-Chanakya Niti: ಮಹಿಳೆಯರು ಮಾಡುವ ಈ 3 ತಪ್ಪುಗಳು ಭಾರಿ ನಷ್ಟ ತಂದೊಡ್ಡುತ್ತವೆ!

ಜೂನ್ 2023 ತಿಂಗಳಿನಲ್ಲಿ ಬರುವ ಗೃಹಪ್ರವೇಶದ ಮುಹೂರ್ತಗಳು
ಜೂನ್ 2023 ತಿಂಗಳಿನಲ್ಲಿ ಕೇವಲ ಒಂದು ಗೃಹಪ್ರವೇಶದ ಮೂಹೂರ್ತವಿದೆ ಅದು ಜೂನ್  11 

ಇದನ್ನೂ ಓದಿ-Vastu Tips: ಊಟ ಮಾಡುವಾಗ ವಾಸ್ತು ಶಾಸ್ತ್ರದ ಈ ಸಲಹೆಗಳನ್ನು ಮರೆಯಬೇಡಿ!

ಚಾತುರ್ಮಾಸ ಆರಂಭ
ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ನಾಲ್ಕು ತಿಂಗಳ ಚಾತುರ್ಮಾಸದ ಅವಧಿಯಲ್ಲಿ ಯಾವುದೇ ಶುಭ ಹಾಗೂ ಮಂಗಳ ಕಾರ್ಯಗಳನ್ನು ನೆರವೇರಿಸಲಾಗುವುದಿಲ್ಲ. ಏಕೆಂದರೆ ಈ ಅವಧಿಯಲ್ಲಿ ಶ್ರೀವಿಷ್ಣು ಕ್ಷೀರ ಸಾಗರಕ್ಕೆ ಯೋಗ ನಿದ್ರೆಗೆ ತೆರಳುತ್ತಾನೆ ಹಾಗೂ ಸಂಸಾರದ ಎಲ್ಲಾ ಜವಾಬ್ದಾರಿಗಳು ಶಿವನಿಗೆ ಕೊಟ್ಟು ಹೋಗುತ್ತಾನೆ. ಈ ವರ್ಷ ಜೂನ್ 29, 2023 ರಿಂದ ಚಾತುರ್ಮಾಸ ಆರಂಭಗೊಳ್ಳುತ್ತಿದ್ದು, ಇದು ನವೆಂಬರ್ 23, 2023 ಕ್ಕೆ ಅಂತ್ಯವಾಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ- 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News