Shani Asta Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿರುವ ಶನಿಯನ್ನು ಕ್ರೂರ ಗ್ರಹ ಎಂದು ಕೂಡ ಪರಿಗಣಿಸಲಾಗುತ್ತದೆ. ಹೊಸ ವರ್ಷದ ಆರಂಭದಲ್ಲಿ ನಾಲ್ಕು ದಶಕಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಿದ್ದ ಶನಿಯು, ಇದೀಗ ತಿಂಗಳ ಅಂತ್ಯದಲ್ಲಿ ಜನವರಿ 30ರಂದು ಅಸ್ತಮಿಸಲಿದ್ದಾನೆ. ವೈದಿಕ ಜ್ಯೋತಿಷ್ಯದಲ್ಲಿ ಯಾವುದೇ ಒಂದು ಗ್ರಹದ ಅಸ್ತಮ ಸ್ಥಿತಿಯನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಇದೀಗ ಶನಿ ಅಸ್ತವನ್ನು ಕೂಡ ಅಮಂಗಳಕರ ಎಂದೇ ಪರಿಗಣಿಸಲಾಗುತ್ತದೆ. ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಕಂಡು  ಬರುತ್ತದೆ. ಆದರೂ, ಈ ಸಮಯವನ್ನು ನಾಲ್ಕು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಶನಿ ಅಸ್ತ ಪರಿಣಾಮ: ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟ 
ಮಿಥುನ ರಾಶಿ: 

ಶನಿ ಅಸ್ತ ಪರಿಣಾಮದಿಂದಾಗಿ ಈ ರಾಶಿಯವರು ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ನಿಮಗೆ ದೊರೆಯಲಿದೆ. ಆದಾಯ ಹೆಚ್ಚಾಗಲಿದ್ದು, ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.


ಇದನ್ನೂ ಓದಿ- ಕನಸಿನಲ್ಲಿ ಚಂದ್ರನನ್ನು ಯಾವ ರೀತಿ ಕಂಡರೆ ಏನು ಫಲ!


ಕನ್ಯಾ ರಾಶಿ:
ಶನಿ ದೇವನ ಅಸ್ತಮ ಸ್ಥಿತಿಯು ಈ ರಾಶಿಯವರಿಗೆ ಸಾಲದಿಂದ ಮುಕ್ತಿಯನ್ನು ನೀಡಲಿದೆ. ನಿಮ್ಮ ದೀರ್ಘಕಾಲದ ಸ್ಥಗಿತಗೊಂಡಿರುವ ಕೆಲಸಗಳು ಈಗ ವೇಗವನ್ನು ಪಡೆಯಲಿವೆ. ಹಣಕಾಸಿನ ದೃಷ್ಟಿಯಿಂದಲೂ ಸಮಯ ಉತ್ತಮವಾಗಿದೆ.


ಮಕರ ರಾಶಿ:
ಶನಿ ಅಸ್ತ ಪರಿಣಾಮವಾಗಿ ಈ ರಾಶಿಯವರಿಗೆ ಭಾಗ್ಯೋದಯವಾಗಲಿದೆ. ನಿಮ್ಮ ವಾಕ್ ಚಾತುರ್ಯದಿಂದಲೇ ನೀವು ಜನರನ್ನು ನಿಮ್ಮತ್ತ ಸೆಳೆಯುವಿರಿ. ವ್ಯಾಪಾರ ವ್ಯವಹಾರದಲ್ಲಿ ಏಳ್ಗೆ ಆಗಲಿದ್ದು ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. 


ಇದನ್ನೂ ಓದಿ- Guru Asta 2023: ಗುರು ಅಸ್ತದ ಪರಿಣಾಮ - ಈ ಮೂರು ರಾಶಿಯವರಿಗೆ ಭಾರೀ ಸಂಕಷ್ಟ


ಮೀನ ರಾಶಿ:
ಅಸ್ತಮಿಸಲಿರುವ ಶನಿಯು ಮೀನ ರಾಶಿಯವರಿಗೆ ವೃತ್ತಿ ರಂಗದಲ್ಲಿ ಅದೃಷ್ಟವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ಶನಿ ದೇವನ ಆರಾಧನೆಯಿಂದ ನಿಮ್ಮ ಸಂಕಷ್ಟಗಳೆಲ್ಲವೂ ದೂರವಾಗಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.