ಕುಂಭ ರಾಶಿಯಲ್ಲಿ ಶನಿ-ಶುಕ್ರರ ಸಂಯೋಗ: ಈ ರಾಶಿಯವರಿಗೆ ಭಾರೀ ಧನ ಲಾಭ

Shukra Shani Yuti in Kumbha: ಶನಿಯ ರಾಶಿಯಲ್ಲಿ ಶನಿ-ಶುಕ್ರರ ಸಂಯೋಗದಿಂದ ಕೆಲವು ರಾಶಿಯವರಿಗೆ ತುಂಬಾ ಶುಭ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವರ ಅದೃಷ್ಟ ಖುಲಾಯಿಸಲಿದ್ದು ಹಣದ ಸುರಿಮಳೆಯೇ ಸುರಿಯಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jan 24, 2023, 07:21 AM IST
  • ಜನವರಿ 17 ರಂದು, ಶನಿಯು ಸಂಕ್ರಮಣದ ನಂತರ ಕುಂಭ ರಾಶಿಯನ್ನು ಪ್ರವೇಶಿಸಿದೆ
  • ಜನವರಿ 22 ರಂದು, ಶುಕ್ರನು ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ.
  • ಇದರೊಂದಿಗೆ ಕುಂಭ ರಾಶಿಯಲ್ಲಿ ಶನಿ-ಶುಕ್ರರ ಯುತಿ ರೂಪುಗೊಂಡಿದೆ
ಕುಂಭ ರಾಶಿಯಲ್ಲಿ ಶನಿ-ಶುಕ್ರರ ಸಂಯೋಗ: ಈ ರಾಶಿಯವರಿಗೆ ಭಾರೀ ಧನ ಲಾಭ  title=
Shukra Shani Yuti in Kumbha

Shukra Shani Yuti in Kumbha: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರಸ್ತುತ ಶನಿಯು ತನ್ನ ಮೂಲ ತ್ರಿಕೋಣ ಚಿಹ್ನೆ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೊನ್ನೆಯಷ್ಟೇ (ಜನವರಿ 22) ಸುಖ-ಸಂಪತ್ತು, ಐಶಾರಮಿ ಜೀವನ ಕಾರಕನಾದ ಶುಕ್ರನೂ ಕೂಡ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿ ಕುಂಭ ರಾಶಿಯಲ್ಲಿ ಶನಿ-ಶುಕ್ರರ ಯುತಿ ರೂಪುಗೊಂಡಿದ್ದು, ಕೆಲವು ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಿದೆ. 

ಕುಂಭ ರಾಶಿಯಲ್ಲಿ ಶುಕ್ರ-ಶನಿ ಸಂಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಹಣದ ಸುರಿಮಳೆಯೇ ಆಗಲಿದೆ. ಮಾತ್ರವಲ್ಲ, ಈ ರಾಶಿಯವರು ತಮ್ಮ ವೃತಿ ಜೀವನ, ವೈಯಕ್ತಿಕ ಜೀವನದಲ್ಲಿಯೂ ಯಶಸ್ಸನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಕುಂಭ ರಾಶಿಯಲ್ಲಿ ಶುಕ್ರ ಶನಿ ಯುತಿ- ಈ ರಾಶಿಯವರಿಗೆ ಭಾರೀ ಅದೃಷ್ಟ:
ವೃಷಭ ರಾಶಿ:

ಶನಿ-ಶುಕ್ರರ ಸಂಯೋಗವು ಈ ರಾಶಿಯವರಿಗೆ ಪ್ರತಿ ಹಂತದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಂದ ಹೊರಬರಲಿದ್ದಾರೆ. ಆದಾಯ ಹೆಚ್ಚಾಗಲಿದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ.

ಇದನ್ನೂ ಓದಿ- Rahu Gochar 2023: ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ರಾಹು

ಕನ್ಯಾ ರಾಶಿ:
ಶನಿ ಮತ್ತು ಶುಕ್ರರ ಯುತಿಯಿಂದಾಗಿ ಕನ್ಯಾ ರಾಶಿಯವರಿಗೆ ವಿತ್ತೀಯ ಸ್ಥಿತಿ ಉತ್ತಮವಾಗಿರಲಿದ್ದು, ನಿಮ್ಮ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಒಟ್ಟಾರೆಯಾಗಿ ನಿಮ್ಮೆಲ್ಲಾ ಕೆಲಸಗಳಲ್ಲೂ ಅದೃಷ್ಟ ನಿಮ್ಮ ಬೆನ್ನಿಗಿದೆ.

ತುಲಾ ರಾಶಿ:
ಕುಂಭ ರಾಶಿಯಲ್ಲಿ ಮಿತ್ರ ಗ್ರಹಗಳಾದ ಶನಿ-ಶುಕ್ರರ ಯುತಿಯಿಂದಾಗಿ ತುಲಾ ರಾಶಿಯವರಿಗೆ ಭಾರೀ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ನಿಮ್ಮ ಸಮಸ್ಯೆಗಳು ಕೊನೆಯಾಗಿ ಒತ್ತಡ ಮುಕ್ತ ಜೀವನವನ್ನು ಅನುಭವಿಸುವಿರಿ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.

ಇದನ್ನೂ ಓದಿ- Shukra Gochar 2023: ಶನಿಯ ರಾಶಿಯಲ್ಲಿ ಶುಕ್ರನ ಸಂಚಾರ- ಈ ರಾಶಿಯವರಿಗೆ ಧನ ಲಾಭ

ಮಕರ ರಾಶಿ:
ಶನಿ ಮತ್ತು ಶುಕ್ರರ ಸಂಯೋಗದಿಂದ ಮಕರ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ನಿಮ್ಮ ಇಷ್ಟು ದಿನಗಳ ಸಂಕಷ್ಟಗಳು ದೂರವಾಗಿ, ಕೌಟುಂಬಿಕ ಸುಖ-ಶಾಂತಿಯನ್ನು ಅನುಭವಿಸುವಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News