Shani Asta 2023: ಈ ವರ್ಷ ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಶನಿ ಸಂಚಾರವು ಬಹಳ ಮಹತ್ವದ್ದಾಗಿದೆ. 2023ರ ಆರಂಭದಲ್ಲಿ ಜನವರಿ 17ರಂದು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸಿದ್ದ ಶನಿ ದೇವ, ಇಂದು ಅಂದರೆ ಜನವರಿ 30ರಂದು ಅಸ್ತಮಿಸಲಿದ್ದಾನೆ. ವೈದಿಕ ಜ್ಯೋತಿಷ್ಯದಲ್ಲಿ ಯಾವುದೇ ಗ್ರಹದ ಅಸ್ತಮ ಸ್ಥಿತಿಯನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಇದೀಗ ಕರ್ಮಫಲದಾತ ಶನಿ ಅಸ್ತವು ಕೂಡ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ಐದು ರಾಶಿಯವರಿಗೆ ಮುಂದಿನ ಒಂದು ತಿಂಗಳುಗಳ ಕಾಲ ಶನಿಯು ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...


COMMERCIAL BREAK
SCROLL TO CONTINUE READING

ಶನಿ ಅಸ್ತ- ಈ 5 ರಾಶಿಯವರಿಗೆ ತುಂಬಾ ಅಪಾಯಕಾರಿ:
ಮೇಷ ರಾಶಿ:

ಕುಂಭ ರಾಶಿಯಲ್ಲಿ ಶನಿ ಅಸ್ತದ ಪರಿಣಾಮವಾಗಿ ಈ ರಾಶಿಯವರು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗಬಹುದು. ಹೂಡಿಕೆಯಿಂದ ಧನ ಹಾನಿ ಸಾಧ್ಯತೆಯೂ ಇದೆ.


ಕರ್ಕಾಟಕ ರಾಶಿ:
ಶನಿ ಅಸ್ತಮ ಸ್ಥಿತಿಯನ್ನು ಕರ್ಕಾಟಕ ರಾಶಿಯವರಿಗೆ ತುಂಬಾ ಅಪಾಯಕಾರಿ ಎಂದು ಬಣ್ಣಿಸಲಾಗುತ್ತಿದ್ದು, ಈ ರಾಶಿಯವರು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಮಾತ್ರವಲ್ಲ, ಈ ಸಮಯದಲ್ಲಿ ಯಾವುದೇ ರೀತಿಯ ವಾದ-ವಿವಾದಗಳನ್ನು ತಪ್ಪಿಸಿ. ಇಲ್ಲದಿದ್ದರೆ, ಸಮಸ್ಯೆ ಬಿಗಡಾಯಿಸಬಹುದು.


ಇದನ್ನೂ ಓದಿ- ಶನಿ-ಶುಕ್ರ ಯುತಿ ಪರಿಣಾಮ- ಮೂರು ರಾಶಿಯವರಿಗೆ ಭಾರೀ ಧನ ಲಾಭ


ಸಿಂಹ ರಾಶಿ:
ಇಂದಿನಿಂದ ಮುಂದಿನ 33 ದಿನಗಳವರೆಗೆ ಶನಿ ಅಸ್ತಮದಿಂದ ಮತ್ತೆ ಶನಿ ಉದಯಿಸುವವರೆಗೆ ಸಿಂಹ ರಾಶಿಯವರು ತಮ್ಮ ಆರೋಗ್ಯದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಸಾಧ್ಯವಾದಷ್ಟು ಹೊರಗಿನ ಆಹಾರ-ಪಾನೀಯಗಳನ್ನು ತ್ಯಜಿಸಿ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗದೇ ಹೋಗಬಹುದು. ಆದರೆ, ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನವನ್ನು ಕೈಬಿಡಬೇಡಿ. ಕತ್ತಲು ಕಳೆದ ಬಳಿಕ ಪ್ರಕಾಶಮಾನವಾದ ಬೆಳಕು ಬಂದೇ ಬರುತ್ತದೆ ಎಂಬುದನ್ನು ನೆನಪಿನಲ್ಲಿಡಿ.


ವೃಶ್ಚಿಕ ರಾಶಿ:
ಶನಿ ಅಸ್ತದಿಂದಾಗಿ ವೃಶ್ಚಿಕ ರಾಶಿಯವರಿಗೆ ಕುಟುಂಬ ಕಲಹ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಸೋದರ ಸಂಬಂಧಿಯೊಂದಿಗೆ ಯಾವುದೇ ವ್ಯಾಪಾರ-ವ್ಯವಹಾರದ ಮಾಡದಿದ್ದರೆ ಒಳಿತು. ಆಸ್ತಿ ಸಂಬಂಧಿತ ವ್ಯಾಜ್ಯಗಳನ್ನು ಕೂಡ ಸದ್ಯಕ್ಕೆ ಮುಂದೂಡುವುದರಿಂದ ಒಳ್ಳೆಯದಾಗಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವ ನಿಮ್ಮ ಚಿಂತೆಯನ್ನು ಕೈಬಿಡಿ. ಹಣಕಾಸಿನ ನಷ್ಟ ಸಾಧ್ಯತೆ ಇರುವುದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಿ.


ಇದನ್ನೂ ಓದಿ- ಶನಿ ಸಂಚಾರದಲ್ಲಿ ಬದಲಾವಣೆ, ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ


ಕುಂಭ ರಾಶಿ:
ಕುಂಭ ರಾಶಿಯಲ್ಲಿಯೇ ಶನಿಯು ಅಸ್ತಮಿಸಲಿದ್ದು ಇದರ ಗರಿಷ್ಠ ಪರಿಣಾಮವನ್ನು ಈ ರಾಶಿಯವರ ಮೇಲೆ ಕಂಡು ಬರಲಿದೆ. ಶನಿಯ ಪ್ರಭಾವದಿಂದಾಗಿ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದ್ದು, ನಿಮ್ಮ ಮಾತಿಗೆ ಕಡಿವಾಣ ಹಾಕುವುದು ತುಂಬಾ ಅಗತ್ಯ. ನೀವು, ಪ್ರತಿ ಹಂತದಲ್ಲಿಯೂ "ಮಾತೆ ಮುತ್ತು, ಮಾತೆ ಮೃತ್ಯು" ಎಂಬ ನಾಣ್ನುಡಿಯನ್ನು ನೆನಪಿನಲ್ಲಿಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.