ಅಖಂಡ ಸಾಮ್ರಾಜ್ಯ ಯೋಗದಿಂದ ಮೂರು ರಾಶಿಯವರಿಗೆ ಭಾರೀ ಧನ ಲಾಭ

ಗುರುವಿನ ಸಂಕ್ರಮಣದಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಎಲ್ಲವೂ ಶುಭವೇ ನಡೆಯಲಿದೆ. ಶನಿ ಮತ್ತು ಗುರು ಸಂಕ್ರಮಣದ ಕಾರಣದಿಂದ ಅಖಂಡ ಸಾಮ್ರಾಜ್ಯ ಯೋಗ ನಿರ್ಮಾಣವಾಗುತ್ತಿದೆ.  

Written by - Ranjitha R K | Last Updated : Jan 17, 2023, 04:15 PM IST
  • ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ.
  • ಏಪ್ರಿಲ್ 22 ರಂದು, ಗುರು ಕೂಡಾ ರಾಶಿ ಬದಲಿಸಲಿದೆ
  • ನಿರ್ಮಾಣವಾಗುವುದು ಅಖಂಡ ಸಾಮ್ರಾಜ್ಯ ಯೋಗ
ಅಖಂಡ ಸಾಮ್ರಾಜ್ಯ ಯೋಗದಿಂದ ಮೂರು ರಾಶಿಯವರಿಗೆ ಭಾರೀ ಧನ ಲಾಭ  title=

ಬೆಂಗಳೂರು : ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದಾದ ನಂತರ ಏಪ್ರಿಲ್ 22 ರಂದು, ಗುರು ಕೂಡಾ ರಾಶಿ ಬದಲಿಸಲಿದೆ. ಶನಿ ಮತ್ತು ಗುರುವಿನ  ಚಲನೆಯಲ್ಲಿನ ಬದಲಾವಣೆಗಳು ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಶನಿ ಸಂಕ್ರಮಣವು ಕೆಲವು ರಾಶಿಯವರನ್ನು ಶನಿ ದೆಸೆಯಿಂದ ಬಿಡುಗಡೆ ಮಾಡಲಿದೆ. ಮತ್ತೊಂದೆಡೆ, ನಡೆಯುವ ಗುರುವಿನ ಸಂಕ್ರಮಣದಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಎಲ್ಲವೂ ಶುಭವೇ ನಡೆಯಲಿದೆ. ಶನಿ ಮತ್ತು ಗುರು ಸಂಕ್ರಮಣದ ಕಾರಣದಿಂದ ಅಖಂಡ ಸಾಮ್ರಾಜ್ಯ ಯೋಗ ನಿರ್ಮಾಣವಾಗುತ್ತಿದೆ. ಇದು ಮೂರು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತು, ಅದೃಷ್ಟ, ಸಂತೋಷವನ್ನು ಹೊತ್ತು ತರಲಿದೆ. 

ಶನಿ ಮತ್ತು ಗುರು ಸಂಚಾರವು ಈ ರಾಶಿಯವರ ಭಾಗ್ಯವನ್ನೇ ಬೆಳಗಲಿದೆ : 
ಮೇಷ ರಾಶಿ : ಶನಿ ಸಂಕ್ರಮಣ ಮತ್ತು ಗುರು ಸಂಕ್ರಮಣದಿಂದ ನಿರ್ಮಾಣವಾಗುವ ಅಖಂಡ ಸಾಮ್ರಾಜ್ಯ ರಾಜಯೋಗವು ಮೇಷ ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ರಾಜಯೋಗದಿಂದ ಮೇಷ ರಾಶಿಯವರ ಆದಾಯದಲ್ಲಿ ಭಾರೀ ಹೆಚ್ಚಳ ಮಾಡಲಿದೆ. ಷೇರು ಮಾರುಕಟ್ಟೆ ಅಥವಾ ಇತರ ಅಪಾಯಕಾರಿ ಹೂಡಿಕೆಗಳಿಂದಲೂ ಲಾಭವಾಗಲಿದೆ.  ಸಾಲದಿಂದ ಮುಕ್ತರಾಗುವಿರಿ. 

ಇದನ್ನೂ ಓದಿ : Astro Tips: ಮಂಗಳವಾರ-ಶನಿವಾರ ರಾತ್ರಿ ಈ ಕೆಲಸ ಮಾಡಿದ್ರೆ ಹನುಮಂತನ ಕೃಪೆಯಿಂದ ನಿಮ್ಮ ಆಸೆ ಈಡೇರುತ್ತದೆ

ಮಿಥುನ ರಾಶಿ : ಅಖಂಡ ಸಾಮ್ರಾಜ್ಯ ರಾಜಯೋಗವು ಮಿಥುನ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಶನಿ ಸಂಕ್ರಮಣದ ನಂತರ  ಈ ರಾಶಿಯವರ ಜಾತಕದಲ್ಲಿ ಶನಿ ಧೈಯಾದಿಂದ ಮುಕ್ತಿ ಸಿಗಲಿದೆ. ಗುರುವಿನ ಸಂಕ್ರಮಣದಿಂದಾಗಿ, ಈ ರಾಶಿಯವರ ಜೀವನದ ಅದೃಷ್ಟದ ಬಾಗಿಲು ತೆರೆಯಲಿದೆ. ಈ ರಾಶಿಯವರಿಗೆ ಬಡ್ತಿ ಸಿಗಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.  

ಮಕರ ರಾಶಿ : ಅಖಂಡ ಸಾಮ್ರಾಜ್ಯ ರಾಜಯೋಗವು ಮಕರ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ.  ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಗೌರವ ಹೆಚ್ಚಾಗುವುದು. ಸಾಲದಿಂದ ಮುಕ್ತರಾಗುವಿರಿ. ತಂದೆ ಮತ್ತು ಸಹೋದರ-ಸಹೋದರಿಯರೊಂದಿಗಿನ ಭಿನ್ನಾಭಿಪ್ರಾಯ ದೂರವಾಗುತ್ತದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಅವಕಾಶ ಸಿಗಲಿದೆ.

ಇದನ್ನೂ ಓದಿ : Kuber Yantra Niyam: ಕೆಲವೇ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿಗೆ ಅಂತ್ಯ ಹಾಡಲು ಈ ಉಪಾಯ ಅನುಸರಿಸಿ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News