ನವದೆಹಲಿ: ಇದೇ ವರ್ಷದ ಜೂನ್ 5ರಿಂದ ಶನಿಯ  ಹಿಮ್ಮುಖ ಚಲನೆ ಆರಂಭವಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 29ರಂದು ಶನಿಯು ತನ್ನ ರಾಶಿಯನ್ನು ಬದಲಾಯಿಸಿದ್ದನು. ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದನು. ಶನಿಯು 2024ರವರೆಗೆ ಕುಂಭ ರಾಶಿಯಲ್ಲಿ ಉಳಿಯಲಿದ್ದಾನೆ. ಆದರೆ ಈ ಮಧ್ಯೆ ಕೆಲವು ತಿಂಗಳುಗಳವರೆಗೆ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಸ್ಥೂಲವಾಗಿ ಹೇಳುವುದಾದರೆ ಕುಂಭ ರಾಶಿಯಲ್ಲಿ ಶನಿಯ ಸಂಚಾರವು 3 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ 3 ರಾಶಿಯವರು 2024ರವರೆಗೆ ಪ್ರತಿ ಹಂತದಲ್ಲಿಯೂ ಲಾಭ ಗಳಿಸಲಿದ್ದಾರೆ. ಈ ವೇಳೆ 3 ರಾಶಿಯವರು ಬಹಳಷ್ಟು ಹಣ ಗಳಿಸುತ್ತಾರೆ ಮತ್ತು ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. 


COMMERCIAL BREAK
SCROLL TO CONTINUE READING

3 ರಾಶಿಯರಿಗೆ ಶನಿ ದೇವನ ಕೃಪೆ


ಮೇಷ ರಾಶಿ: ಶನಿಯ ಸಂಚಾರವು ಮೇಷ ರಾಶಿಯವರಿಗೆ ಸಾಕಷ್ಟು ಲಾಭ ನೀಡುತ್ತದೆ. ಇವರ ಆದಾಯ ಹೆಚ್ಚಾಗಲಿದ್ದು, ಉದ್ಯೋಗಿಗಳ ಸಂಬಳವೂ ಹೆಚ್ಚಾಗುತ್ತದೆ. ಉದ್ಯಮಿಗಳ ಲಾಭ ಹೆಚ್ಚಾಗುತ್ತದೆ. ಅನೇಕ ಹೊಸ ಮಾರ್ಗಗಳಿಂದ ಆದಾಯ ಬರುತ್ತದೆ. ಉದ್ಯೋಗ ಬದಲಾಯಿಸಲು ಇಚ್ಛಿಸುವವರು ಹೊಸ ಉದ್ಯೋಗ ಪಡೆಯಬಹುದು. ನೀಲಿ ರತ್ನವನ್ನು ಧರಿಸುವುದು ಮತ್ತು ಶನಿಗೆ ಸಂಬಂಧಿಸಿದ ಪರಿಹಾರ ಕಾರ್ಯಗಳನ್ನು ಅನುಸರಿಸುವುದರಿಂದ ಲಾಭದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದೆ.


ಇದನ್ನೂ ಓದಿ: ಇನ್ನು 24 ಗಂಟೆಗಳಲ್ಲಿ ಈ ರಾಶಿಯವರ ಭಾಗ್ಯ ಬದಲಿಸಲಿದ್ದಾನೆ ಶನಿ ಮಹಾತ್ಮ..! ತೆರೆಯಲಿದ್ದಾನೆ ಅದೃಷ್ಟದ ಬಾಗಿಲು


ವೃಷಭ ರಾಶಿ: ವೃಷಭ ರಾಶಿಯವರಿಗೆ 2024ರವರೆಗಿನ ಸಮಯವು ಅತ್ಯುತ್ತಮವಾಗಿರುತ್ತದೆ. ಶನಿಯು ಕರ್ಮ ಕ್ಷೇತ್ರದ ಮನೆಯಲ್ಲಿ ಸಂಕ್ರಮಿಸುತ್ತಾನೆ. ಇದರಿಂದ ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರುತ್ತಾರೆ. ಇಲ್ಲಿಯವರೆಗೆ ವೃತ್ತಿಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ ಮತ್ತು ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ.


ಧನು ರಾಶಿ: ಶನಿಯ ಸಂಕ್ರಮವು ಧನು ರಾಶಿಯವರಿಗೆ ವರದಾನವಾಗಿರಲಿದೆ. ಈ ರಾಶಿಯವರು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಗಳಿಸುತ್ತಾರೆ. ಧೈರ್ಯ, ಶೌರ್ಯ ಮತ್ತು ಆತ್ಮವಿಶ್ವಾಸವು ಅಧಿಕವಾಗಿರುತ್ತದೆ. ಇದು ಈ ರಾಶಿಯವರ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕ ಗೌರವ ಸಿಗುತ್ತದೆ. ಶತ್ರುಗಳ ವಿರುದ್ಧವೂ ನೀವು ಗೆಲುವು ಸಾಧಿಸುತ್ತೀರಿ.


ಇದನ್ನೂ ಓದಿ: ಎಂತಹವರನ್ನೇ ಆದರೂ ತಮ್ಮತ್ತ ಆಕರ್ಷಿಸುತ್ತಾರೆ ಈ 4 ರಾಶಿಯ ಜನ


ಶನಿದೇವನು 2022ರಲ್ಲಿ ತನ್ನ ಸ್ಥಾನವನ್ನು ಹಲವಾರು ಬಾರಿ ಬದಲಾಯಿಸುತ್ತಿದ್ದಾನೆ. ಶನಿ ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಅನೇಕರ ಜಾತಕದಲ್ಲಿ ಬಹುದೊಡ್ಡ ಬದಲಾವಣೆ ತರುತ್ತದೆ. ಆದರೆ ಈ ಬದಲಾವಣೆಗಳು 3 ರಾಶಿಯವರಿಗೆ ತುಂಬಾ ಶುಭಕರವಾಗಿದ್ದು, ಮುಂದಿನ 2 ವರ್ಷಗಳ ಕಾಲ ಶನಿದೇವನ ಕೃಪೆಯಿಂದ ಇವರಿಗೆ ಸಾಕಷ್ಟು ಸಂಪತ್ತು ಪ್ರಾಪ್ತಿಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.