Shani Gochar: ಮುಂದಿನ ಒಂದೂವರೆ ವರ್ಷ ಈ ರಾಶಿಯವರ ಜೀವನದಲ್ಲಿ ಸೋಲೆಂಬುದೇ ಇಲ್ಲ
Shani Gochar: ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ನ್ಯಾಯದ ದೇವರು ಶನಿ ದೇವ 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆ ಶನಿಯ ಪ್ರಭಾವ ಬೀರುತ್ತದೆ. ಆದರೂ, ಈ ಸಮಯದಲ್ಲಿ ಶನಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಗತಿ, ಯಶಸ್ಸಿನ ಜೊತೆಗೆ ಧನಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Shani Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ಗ್ರಹಗಳಲ್ಲೇಲಾ ನ್ಯಾಯದ ದೇವರು ಶನಿ ಅತಿ ನಿಧಾನವಾಗಿ ಚಲಿಸುವ ಗ್ರಹ. ಶನಿ ಮಹಾತ್ಮ ಪ್ರತಿ ಎರಡೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದೀಗ ಈ ವರ್ಷದ ಆರಂಭದಲ್ಲಿ ಎಂದರೆ 2023ರ ಆರಂಭದಲ್ಲಿ ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಪ್ರವೇಶಿಸಿದ್ದಾನೆ. ಸದ್ಯ ಹಿಮ್ಮುಖವಾಗಿ ಚಲಿಸುತ್ತಿರುವ ಶನಿಯು ಇನ್ನೂ ಒಂದೂವರೆ ವರ್ಷಗಳ ಕಾಲ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2025ರವರೆಗೆ ಶನಿ ಕುಂಭ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಶನಿಯ ಹೆಸರು ಕೇಳಿದರೆ ಸಾಕು ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಾರೆ. ಆದರೆ, ಜಾತಕದಲ್ಲಿ ಶನಿ ದೇವ ಶುಭ ಸ್ಥಾನದಲ್ಲಿದ್ದರೆ ಅವರಿಗೆ ಒಳ್ಳೆಯ ಫಲಗಳನ್ನೇ ನೀಡಲಿದೆ. ಇನ್ನೂ ಶನಿಯ ಸಂಚಾರದಿಂದ ಕೆಲವು ರಾಶಿಯವರಿಗೆ ಸಾಡೇ ಸಾತಿ ಶನಿ, ಶನಿ ಧೈಯಾ ಪ್ರಭಾವದಿಂದ ಮುಕ್ತಿ ದೊರೆತಿದ್ದರೆ, ಇನ್ನೂ ಕೆಲವು ರಾಶಿಯವರಿಗೆ ಈಗ ಶನಿ ಕಾಟ ಆರಂಭವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ ಒಂದೂವರೆ ವರ್ಷಗಳ ಕಾಲ ಎಂದರೆ 2025ರವರೆಗೆ ಕೆಲವು ರಾಶಿಯವರಿಗೆ ಶನಿ ದೇವನ ಅಪಾರ ಕೃಪೆ ಇರಲಿದೆ. ಈ ರಾಶಿಯವರಿಗೆ ಯಾವುದೇ ಕೆಲಸದಲ್ಲೂ ಕೂಡ ಸೋಲು ಎಂಬುದೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯ ಯಾವ ರಾಶಿಯವರಿಗೆ ಇದು ಅದೃಷ್ಟದ ಸಮಯ ಎಂದು ತಿಳಿಯೋಣ...
ಇದನ್ನೂ ಓದಿ- ಪುತ್ರದಾ ಏಕಾದಶಿಯ ದಿನ ಮರೆತು ಈ ತಪ್ಪುಗಳನ್ನು ಮಾಡಿದರೂ ಮನೆಯಿಂದ ಹೊರಹೋಗುವಳು ಲಕ್ಷ್ಮಿ
2025ರವರೆಗೆ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆಯನ್ನೇ ಹರಿಸಲಿದ್ದಾನೆ ಶನಿ ದೇವ:-
ಮೇಷ ರಾಶಿ:
ಕುಂಭ ರಾಶಿಯಲ್ಲಿರುವ ಶನಿಯು ಮೇಷ ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ತರಲಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರು ಬಂಪರ್ ಧನಲಾಭ ಪಡೆಯಲಿದ್ದಾರೆ. ಮಾತ್ರವಲ್ಲ, ವ್ಯಾಪಾರ-ವ್ಯವಹಾರದಲ್ಲಿಯೂ ಪ್ರಗತಿಯನ್ನು ಸಾಧಿಸಲಿದ್ದಾರೆ. ಅಷ್ಟೇ ಅಲ್ಲ, ಸಮಾಜದಲ್ಲಿ ಕೀರ್ತಿ, ಗೌರವವೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ವೃಷಭ ರಾಶಿ:
ಕರ್ಮಫಲದಾತನು ಇನ್ನೂ ಒಂದೂವರೆ ವರ್ಷಗಳ ಕಾಲ ವೃಷಭ ರಾಶಿಯವರಿಗೆ ತುಂಬಾ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ನೀವು ವೃತ್ತಿ- ವ್ಯವಹಾರದಲ್ಲಿ ಯಶಸ್ಸಿನ ಉತ್ತುಂಗವನ್ನು ಏರಲಿದ್ದೀರಿ. ಆರ್ಥಿಕ ವಿಷಯದಲ್ಲಿ ಯಾವುದೇ ರೀತಿಯ ಅಡೆತಡೆಗಳು ಬಂದರೂ ನಿಭಾಯಿಸಿಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಸಿಂಹ ರಾಶಿ:
ಶನಿಯ ಆಶೀರ್ವಾದದಿಂದ 2025ರವರೆಗೆ ಸಿಂಹ ರಾಶಿಯವರಿಗೆ ಕೈ ಹಾಕಿದ ಕೆಲಸಗಳಲ್ಲೆಲ್ಲಾ ಶುಭವಾಗಲಿದೆ. ಸಿಂಹ ರಾಶಿಯವರಿಗೆ ಏಳನೇ ಮನೆಯಲ್ಲಿರುವ ಶನಿ ಮಹಾತ್ಮನು ನಿಮಗೆ ವಿವಿಧ ಕ್ಷೇತ್ರಗಳಲ್ಲಿ ಭಾರೀ ಯಶಸ್ಸನ್ನು ಕರುಣಿಸಲಿದ್ದಾನೆ. ಅಷ್ಟೇ ಅಲ್ಲ, ಸಮಾಜದಲ್ಲಿ ನೀವು ನಿಮ್ಮದೇ ಆದ ಹೊಸ ಗುರುತನ್ನು ಸೃಷ್ಟಿಸುವಿರಿ. ವಿತ್ತೀಯ ವಿಷಯದಲ್ಲೂ ಸಮಯ ಅತ್ಯುತ್ತಮವಾಗಿದೆ.
ಇದನ್ನೂ ಓದಿ- ಮಂಗಳ-ಕೇತು ಯುತಿ: ಈ 4 ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ
ತುಲಾ ರಾಶಿ:
ಪ್ರಸ್ತುತ ಶನಿಯು ತುಲಾ ರಾಶಿಯವರಿಗೆ ಹತ್ತನೇ ಮನೆಯಲ್ಲಿ ಉಚ್ಚ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ ವ್ಯಕ್ತಿಯ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಶನಿ ದೇವನು ಭಾಗ್ಯೋದಯವನ್ನು ಕರುಣಿಸಲಿದ್ದಾನೆ. ಇಷ್ಟು ದಿನಗಳ ಆರ್ಥಿಕ ಸಂಕಷ್ಟಗಳಿಂದ ಈ ಸಮಯದಲ್ಲಿ ಪರಿಹಾರವನ್ನು ಪಡೆಯಲಿದೆ. ನೀವು ಪಾರ್ಟ್ನರ್ ಶಿಫ್ ಬಿಸಿನೆಸ್ ಮಾಡುತ್ತಿದ್ದರೆ ಸಮಯ ತುಂಬಾ ಅದೃಷ್ಟದಾಯಕವಾಗಿದೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರ ಜನ್ಮ ಕುಂಡಲಿಯಲ್ಲಿ 11ನೇ ಮನೆಯಲ್ಲಿ ಉಪಸ್ಥಿತನಿರುವ ಶನಿ ಮಹಾತ್ಮನು ಈ ಸಮಯದಲ್ಲಿ ವೃಶ್ಚಿಕ ರಾಶಿಯವರ ಜೀವನವನ್ನು ಸುಧಾರಿಸಲಿದೆ. ಈ ಸಮಯದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿದ್ದು, ನೀವು ನಿಮ್ಮ ಜೀವನದಲ್ಲಿ ಆಕಾಶದೆತ್ತರಕ್ಕೆ ಬೆಳೆಯಲಿದ್ದೀರಿ. ಅಷ್ಟೇ ಅಲ್ಲ, ಈ ಸಮಯದಲ್ಲಿ ಶನಿ ದೇವನು ನಿಮಗೆ ಹಣದ ಹೊಳೆಯನ್ನೆ ಹರಿಸಲಿದ್ದು ಭಾರೀ ಧನ ಯೋಗವನ್ನು ಕರುಣಿಸಲಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.