Pradosh Vrat: ನಾಳೆ ಶನಿ ಪ್ರದೋಷದ ದಿನ ನಿಮ್ಮ ರಾಶಿಗನುಗುಣವಾಗಿ ಇವುಗಳನ್ನು ದಾನ ಮಾಡಿದರೆ ಅಪಾರ ಸಂಪತ್ತು ಪ್ರಾಪ್ತಿ
Shani Pradosh Vrat Daan: ಹಿಂದೂ ಧರ್ಮದಲ್ಲಿ ಪ್ರದೋಷಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಅದರಲ್ಲೂ ಶನಿವಾರದ ದಿನ ಬರುವ ಶನಿ ಪ್ರದೋಷವನ್ನು ಇನ್ನೂ ವಿಶೇಷ ಎಂದು ಹೇಳಲಾಗುತ್ತದೆ. ನಾಳೆ (ಜುಲೈ 15, 2023) ಶನಿವಾರದ ದಿನ ಶನಿ ಪ್ರದೋಷ ಇರಲಿದೆ.
Shani Pradosh Vrat Daan: ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾವ ವ್ಯಕ್ತಿ ಪ್ರದೋಷದ ದಿನ ಭಗವಾನ್ ಶಿವನನ್ನು ಭಕ್ತಿಯಿಂದ ಪೂಜಿಸುವನೋ, ಮನಃಪೂರ್ವಕವಾಗಿ ಭಜಿಸುವನೋ ಅಂತಹ ವ್ಯಕ್ತಿಯ ಪ್ರತಿಯೊಂದು ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ಹೇಳಲಾಗುತ್ತದೆ. ಅಂತೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿವಾರದ ದಿನ್ ಬರುವ ಪ್ರದೋಷವನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ಇದನ್ನು ಶನಿ ಪ್ರದೋಷ ಎಂತಲೂ ಕರೆಯಲಾಗುತ್ತದೆ. ಈ ಬಾರಿ ಶನಿ ಪ್ರದೋಷ ವ್ರತವು ನಾಳೆ ಅಂದರೆ ಜುಲೈ 15, 2023ರಂದು ಶನಿವಾರದ ದಿನ ಇರಲಿದೆ. ಈ ದಿನ ಪ್ರದೋಷ ವ್ರತಾಚರಣೆಯಿಂದ ಶಿವ ಮಾತ್ರನಲ್ಲ ಶನಿಯ ಕೃಪೆಗೂ ಪಾತ್ರರಾಗಬಹುದು ಎಂಬ ನಂಬಿಕೆಯಿದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಪ್ರದೋಷದ ದಿನ ಪ್ರದೋಷ ವ್ರತಾಚರಣೆ ಮಾಡುವುದರಿಂದ ಸಾಡೇ ಸಾತಿ ಶನಿ, ಶನಿ ಧೈಯಾ, ಶನಿ ದೋಷ ಪ್ರಭಾವದಿಂದ ಪರಿಹಾರ ಪಡೆಯಬಹುದು. ಅಷ್ಟೇ ಅಲ್ಲ, ಶನಿ ಪ್ರದೋಷದ ದಿನ ನೀವು ನಿಮ್ಮ ರಾಶಿಗೆ ಅನುಸಾರವಾಗಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಮನಸ್ಸಿನ ಆಸೆಗಳು ಈಡೇರುವುದರ ಜೊತೆಗೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಇದರ ಜೊತೆಗೆ ಜೀವನದಲ್ಲಿ ಎದುರಾಗಿರುವ ತೊಂದರೆಗಳು ದೂರವಾಗಿ, ಸುಖ-ಸಂಪತ್ತು, ಅಪಾರ ಕೀರ್ತಿ, ಪ್ರಗತಿ ಪ್ರಾಪ್ತಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಿದ್ದರೆ, ಶನಿ ಪ್ರದೋಷದ ದಿನ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳಿತು ತಿಳಿಯಿರಿ.
ಇದನ್ನೂ ಓದಿ- Ketu Gochara 2023: ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ
ನಾಳೆ ಶನಿ ಪ್ರದೋಷ ವ್ರತ: ರಾಶಿಗೆ ಅನುಸಾರವಾಗಿ ಈ ವಸ್ತುಗಳನ್ನು ದಾನ ಮಾಡಿದ್ರೆ ಸಿಗುತ್ತೆ ಅಪಾರ ಕೀರ್ತಿ, ಸಂಪತ್ತು:-
ಮೇಷ ರಾಶಿ:
ಶನಿ ಪ್ರದೋಷದ ದಿನ ಮೇಷ ರಾಶಿಯವರು ಕೊಡೆ ಎಂದರೆ ಛತ್ರಿಯನ್ನು ದಾನ ಮಾಡಿದರೆ ಒಳ್ಳೆಯದು.
ವೃಷಭ ರಾಶಿ:
ನಾಳೆ ಶನಿ ಪ್ರದೋಷದಂದು ವೃಷಭ ರಾಶಿಯವರು ಕಪ್ಪು ವಸ್ತ್ರವನ್ನು ದಾನ ಮಾಡಿ.
ಮಿಥುನ ರಾಶಿ:
ನಾಳೆ ಶನಿ ಪ್ರದೋಷದಂದು ಮಿಥುನ ರಾಶಿಯ ಜನರು ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಶುಭ.
ಕರ್ಕಾಟಕ ರಾಶಿ:
ಶನಿ ಪ್ರದೋಷದಂದು ಕರ್ಕಾಟಕ ರಾಶಿಯವರು ಅಗತ್ಯವಿದ್ದವರಿಗೆ ಆಹಾರ, ವಸ್ತ್ರ ದಾನ ಮಾಡುವುದರಿಂದ ಮಂಗಳಕರ ಫಲ ಪಡೆಯಬಹುದು.
ಸಿಂಹ ರಾಶಿ:
ಸಿಂಹ ರಾಶಿಯವರೂ ಕೂಡ ಶನಿ ಪ್ರದೋಷದ ದಿನ ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ಹಾಗೂ ಉಡುಪುಗಳನ್ನು ದಾನ ಮಾಡುವುದು ಒಳ್ಳೆಯದು.
ಕನ್ಯಾ ರಾಶಿ:
ಶನಿ ಪ್ರದೋಷದ ದಿನ ಕನ್ಯಾ ರಾಶಿಯವರು ಕಪ್ಪು ಬಣ್ಣದ ಛತ್ರಿ, ಕಂಬಳಿಯನ್ನು ದಾನ ಮಾಡಬೇಕು ಎನ್ನಲಾಗುತ್ತದೆ.
ಇದನ್ನೂ ಓದಿ- Budha Udaya: ಇಂದಿನಿಂದ ಈ ರಾಶಿಯವರಿಗೆ ಭಾಗ್ಯೋದಯ
ತುಲಾ ರಾಶಿ:
ನಾಳೆ ಶನಿ ಪ್ರದೋಷದಂದು ತುಲಾ ರಾಶಿಯವರು ಕಪ್ಪು ಬಣ್ಣದ ವಸ್ತ್ರ, ಸಾಸಿವೆ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ದಾನ ಮಾಡುವುದರಿಂದ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.
ವೃಶ್ಚಿಕ ರಾಶಿ:
ಶನಿ ಪ್ರದೋಷದ ದಿನ ವೃಶ್ಚಿಕ ರಾಶಿಯವರಿಗೆ ತುಂಬಾ ವಿಶೇಷವಾಗಿದ್ದು ನೀವು ಅಗತ್ಯವಿದ್ದವರಿಗೆ ಕಪ್ಪು ಬಟ್ಟೆಗಳನ್ನು ಹಾಗೂ ಕಬ್ಬಿಣದ ಪಾತ್ರೆಗಳನ್ನು ದಾನ ಮಾಡುವುದರಿಂದ ಶುಭ ಫಲಗಳನ್ನು ಪಡೆಯಬಹುದು.
ಧನು ರಾಶಿ:
ಶನಿ ಪ್ರದೋಷದಂದು ಧನು ರಾಶಿಯವರು ಕಪ್ಪು ಛತ್ರಿ ಹಾಗೂ ಚರ್ಮದ ಪಾದರಕ್ಷೆಗಳನ್ನು ದಾನ ಮಾಡಬೇಕು ಎನ್ನಲಾಗುತ್ತದೆ.
ಮಕರ ರಾಶಿ:
ಮಕರ ರಾಶಿಯ ಜನರು ಶನಿ ಪ್ರದೋಷದಂಡು ಕರಿಬೇವಿನ ಸೊಪ್ಪು, ಕಪ್ಪು ಎಳ್ಳಿನ ಜೊತೆಗೆ ಕಪ್ಪು ಬಟ್ಟೆಗಳನ್ನು ದಾನ ಮಾಡಿದರೆ ಒಳ್ಳೆಯದು.
ಕುಂಭ ರಾಶಿ:
ಶನಿ ಪ್ರದೋಷ ವ್ರತದ ದಿನ ಶನಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಅಗತ್ಯವಿದ್ದವರಿಗೆ ಆಹಾರ ನೀಡುವುದರಿಂದ ಕುಂಭ ರಾಶಿಯವರಿಗೆ ಒಳಿತಾಗುತ್ತದೆ.
ಮೀನ ರಾಶಿ:
ಶನಿ ಪ್ರದೋಷದಂದು ಮೀನ ರಾಶಿಯವರು ಬಿಳಿ ಬಟ್ಟೆ, ಬಿಳಿ ಹೂವುಗಳನ್ನು ದಾನ ಮಾಡುವುದರಿಂದ ಶುಭ ಫಲ ಪ್ರಾಪ್ತಿ ಎನ್ನಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.