Budha Udaya: ಇಂದಿನಿಂದ ಈ ರಾಶಿಯವರಿಗೆ ಭಾಗ್ಯೋದಯ

Budha Udaya In Karka: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಇಂದು (ಜುಲೈ 11, 2023) ಗ್ರಹಗಳ ರಾಜಕುಮಾರನಾದ ಬುಧನು ಕರ್ಕಾಟಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jul 11, 2023, 08:18 AM IST
  • ಇಂದು ಗ್ರಹಗಳ ರಾಜಕುಮಾರನಾದ ಬುಧನು ಕರ್ಕಾಟಕ ರಾಶಿಯಲ್ಲಿ ಉದಯಿಸಲಿದ್ದಾನೆ.
  • ಇದು ದ್ವಾದಶ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ.
  • ಆದಾಗ್ಯೂ, ಕರ್ಕಾಟಕ ರಾಶಿಯಲ್ಲಿ ಉದಯಿಸಲಿರುವ ಬುಧನು ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಉಂಟು ಮಾಡಲಿದ್ದಾನೆ.
Budha Udaya: ಇಂದಿನಿಂದ ಈ ರಾಶಿಯವರಿಗೆ ಭಾಗ್ಯೋದಯ title=
Budha Udaya Effects

Budha Udaya In Karka: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು, ಬುದ್ಧಿವಂತಿಕೆ, ವ್ಯವಹಾರ, ತರ್ಕ, ಸಂಭಾಷಣೆ ಮತ್ತು ಮಾತಿನ ಅಂಶ ಎಂದು ಪರಿಗಣಿಸಲ್ಪಡುವ ಗ್ರಹಗಳ ರಾಜಕುಮಾರ ಬುಧನು ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯು ಉದ್ಯಮದಲ್ಲಿ ಯಶಸ್ಸನ್ನು ಕಾಣುತ್ತಾನೆ. ಅವನ ಮಾತೇ ಬಂಡವಾಳವಾಗಿರುತ್ತದೆ. ಅದೇ ರೀತಿ, ಜಾತಕದಲ್ಲಿ ಬುದ್ಧನ ಅಶುಭ ಸ್ಥಾನವು ವ್ಯಕ್ತಿಯ ಬುದ್ದಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ವ್ಯವಹಾರದಲ್ಲಿ ನಷ್ಟವನ್ನು ಉಂಟು ಮಾಡುತ್ತದೆ ಎಂದು ನಂಬಲಾಗಿದೆ. 

ಇಂದು  (ಜುಲೈ 11, 2023) ಗ್ರಹಗಳ ರಾಜಕುಮಾರನಾದ ಬುಧನು ಕರ್ಕಾಟಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದು ದ್ವಾದಶ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. ಆದಾಗ್ಯೂ, ಕರ್ಕಾಟಕ ರಾಶಿಯಲ್ಲಿ ಉದಯಿಸಲಿರುವ ಬುಧನು ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಉಂಟು ಮಾಡಲಿದ್ದಾನೆ. ಈ ಸಮಯದಲ್ಲಿ ಅವರು ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ, ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- ಇಂದು ರೂಪುಗೊಳ್ಳಲಿದೆ ಶುಭ ಗಜಕೇಸರಿ ಯೋಗ: ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ದುಡ್ಡಿನ ಸುರಿಮಳೆ

ಕರ್ಕಾಟಕ ರಾಶಿಯಲ್ಲಿ ಬುಧ ಉದಯದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಅಪಾರ ಧನ ಪ್ರಾಪ್ತಿ: 
ಮಿಥುನ ರಾಶಿ: 

ಕರ್ಕಾಟಕ ರಾಶಿಯಲ್ಲಿ ಉದಯಿಸಲಿರುವ ಬುಧನು ಮಿಥುನ ರಾಶಿಯವರಿಗೆ ನಾನಾ ರೀತಿಯ ಲಾಭವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು, ಬೇರೆಡೆ ಸಿಲುಕಿರುವ ನಿಮ್ಮ ಹಣವೂ ಕೂಡ ಕೈ ಸೇರಲಿದೆ. ಬಹಳ ದಿನಗಳಿಂದ ಭೂಮಿ, ವಾಹನ ಖರೀದಿಸಲು ಯೋಚಿಸುತ್ತಿದ್ದವರಿಗೆ ಇದು ಶುಭ ಸಮಯ. ಈ ಸಂದರ್ಭದಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ ಪಡೆಯುವ ಭಾಗ್ಯವಿದೆ. ಸರ್ಕಾರಿ ಉದ್ಯೋಗಸ್ಥರಿಗೆ ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಆಗಬಹುದು. 

ಕನ್ಯಾ ರಾಶಿ: 
ಬುಧ ಉದಯದಿಂದ ಕನ್ಯಾ ರಾಶಿಯವರ ನಿದ್ರಾ ಸ್ಥಿತಿಯಲ್ಲಿದ್ದ ಅದೃಷ್ಟವೂ ಕೂಡ ಜಾಗೃತಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಆತ್ಮಸ್ಥೈರ್ಯದಿಂದ ಮಾಡಿದ ಕೆಲಸಗಳಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಆದಾಯ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಉದ್ಯೋಗ ರಂಗದಲ್ಲಿ ಉನ್ನತ ಅಧಿಕಾರಿಗಳಿಂದ ಮನ್ನಣೆ ದೊರೆತು ಸಮಾಜದಲ್ಲಿ ಗೌರವವನ್ನೂ ಪಡೆಯುವಿರಿ. 

ಇದನ್ನೂ ಓದಿ- Weekly Horoscope: ಜುಲೈ ಎರಡನೇ ವಾರ ಈ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು

ಮಕರ ರಾಶಿ: 
ಕರ್ಕ ರಾಶಿಯಲ್ಲಿ ಬುಧ ಉದಯವು ಮಕರ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣ ಕೈ ಸೇರಲಿದ್ದು, ವೃತ್ತಿ ಬದುಕಿನಲ್ಲೂ ಪ್ರಗತಿ ಕಾಣುವಿರಿ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಕೋರ್ಟು-ಕಚೇರಿ ವ್ಯಾಜ್ಯಗಳಿದ್ದರೆ ಅದೂ ಕೂಡ ನಿಮ್ಮ ಪರವಾಗಿ ನ್ಯಾಯ ಸಿಗಲಿದೆ. ದಾಂಪತ್ಯದಲ್ಲಿ ಇಷ್ಟು ದಿನ ಮೂಡಿದ್ದ ಬಿರುಕುಗಳು ಅಂತ್ಯ ಕಾಣಲಿದ್ದು, ಸುಖ ದಾಂಪತ್ಯ ಜೀವನವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News