ಬೆಂಗಳೂರು : ನಾವು ಮಾಡುವ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವಾತ ಶನಿದೇವ. ಆದ್ದರಿಂದಲೇ ಅವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಶನಿಯನ್ನು 8ರ ಅಧಿಪತಿ ಎಂದು ಕೂಡಾ ಕರೆಯಲಾಗುತ್ತದೆ.  ಸಂಖ್ಯಾಶಾಸ್ತ್ರದಲ್ಲಿ, 1 ರಿಂದ 9 ರವರೆಗಿನ ಸಂಖ್ಯೆಗಳಿವೆ. ರಾಡಿಕ್ಸ್ ಎನ್ನುವುದು ವ್ಯಕ್ತಿಯ ಹುಟ್ಟಿದ ದಿನಾಂಕದ ಮೊತ್ತವಾಗಿದೆ. ಉದಾಹರಣೆಗೆ, ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ವ್ಯಕ್ತಿಯು ರಾಡಿಕ್ಸ್ 8 ಆಗಿರುತ್ತದೆ.  ಯಾರ ಮೂಲಾಂಕ 8 ಆಗಿರುತ್ತದೆಯೋ ಅವರ ಮೇಲೆ ಶನಿ ದೇವನ  ಆಶೀರ್ವಾದ ಹೆಚ್ಚೇ ಇರುತ್ತದೆ.  


COMMERCIAL BREAK
SCROLL TO CONTINUE READING

ಮೂಲಾಂಕ 8 ರ ಜನರು ಶ್ರಮಜೀವಿಗಳು :
ರಾಡಿಕ್ಸ್ 8 ಹೊಂದಿರುವವರು ತುಂಬಾ ಶ್ರಮಶೀಲರು, ಪ್ರಾಮಾಣಿಕರು ಮತ್ತು ತಾಳ್ಮೆಯಿಂದ ಇರುತ್ತಾರೆ. ತಪ್ಪನ್ನು ಇವರು ಸಹಿಸುವುದಿಲ್ಲ. ತಪ್ಪನ್ನು ಗಟ್ಟಿ ಸ್ವರದಲ್ಲಿ ಖಂಡಿಸುತ್ತಾರೆ. ಇವರು ಹಠ ಸ್ವಭಾವದಬ್ವರು. ತಾವು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಿದ ನಂತರವೇ ನಿಟ್ಟುಸಿರು ಬಿಡುತ್ತಾರೆ. 


ಇದನ್ನೂ ಓದಿ : Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ


ಸರಳ ಜೀವನ, ಉನ್ನತ ಚಿಂತನೆ  :
ರಾಡಿಕ್ಸ್ 8 ರ ಜನರು ಸರಳ ಜೀವನವನ್ನು ಅನುಸರಿಸುತ್ತಾರೆ. ಆದರೆ ಅವರು ಉನ್ನತ ಮಟ್ಟದ ಚಿಂತನೆಯನ್ನು ಹೊಂದಿರುತ್ತಾರೆ.  ತೋರ್ಪಡಿಕೆಯ ಗುಣವನ್ನು ಒಪ್ಪುವುದಿಲ್ಲ. ಕೈತುಂಬಾ ದುಡ್ಡು ಗಳಿಸಿದರೂ ಅದನ್ನು ಯೋಚನೆ ಮಾಡಿ ಖರ್ಚು ಮಾಡುತ್ತಾರೆ.  


ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ :  
ರಾಡಿಕ್ಸ್ 8 ರ ಜನರು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಇವರು ದೊಡ್ಡ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾರೆ. ಉದಾಹರಣೆಗೆ, ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಂಕ ಸೆಪ್ಟೆಂಬರ್ 17, ಹೀಗಾಗಿ ಅವರ ಮೂ ಲಾಂಕ  ಸಹ 8 ಆಗಿದೆ. 


ಇದನ್ನೂ ಓದಿ : Budh Asta 2023: ಬುಧನ ಅಸ್ತದಿಂದ ಈ 4 ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ನಷ್ಟ!


ರಹಸ್ಯಮಯ ಸ್ವಭಾವ :  
ರಾಡಿಕ್ಸ್ 8 ರ ಜನರು ತಮ್ಮ ವಿಷಯಗಳನ್ನು ಸುಲಭವಾಗಿ  ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅವರು ಸುಲಭವಾಗಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ಆದರೆ ಯಾರನ್ನಾದರೂ ಸ್ನೇಹಿತರನ್ನಾಗಿ ಒಪ್ಪಿಕೊಂಡರೆ ಕೊನೆ ಕ್ಷಣದವರೆಗೂ ಅವರ ಜೊತೆಯಲ್ಲಿ ನಿಂತಿರುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.