Shani Vakri Effect 2023 : ಜ್ಯೋತಿಷ್ಯದಲ್ಲಿ, ಶನಿಯನ್ನು ನಿಧಾನವಾಗಿ ಚಲಿಸುವ ಗ್ರಹವೆಂದು  ಕರೆಯಲಾಗುತ್ತದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ವರ್ಷದ ಜನವರಿ 17 ರಂದು ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ.  ಜೂನ್ 17 ರಂದು,  ಕುಂಭ ರಾಶಿಯಲ್ಲಿಯೇ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದಾದ ನಂತರ ನವೆಂಬರ್ 4 ರವರೆಗೆ  ಶನಿ ಹಿಮ್ಮುಖವಾಗಿಯೇ ಚಲಿಸುತ್ತಿರುತ್ತಾನೆ. ಈ ಸಮಯದಲ್ಲಿ, ಶನಿಯ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅದೃಷ್ಟ ರಾಜಯೋಗವೆಂದು ಪರಿಗಣಿಸಲಾಗಿದೆ. ಜಾತಕಕ್ಕೆ 3, 4, 7, 10 ಮತ್ತು 1, 5, 9 ನಂತಹ ತ್ರಿಕೋನಗಳನ್ನು ಸೇರಿಸಿದಾಗ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಇದರಲ್ಲಿ, ಮಹಾ ಲಕ್ಷ್ಮೀಯನ್ನು ತ್ರಿಕೋನದ ದೇವತೆ ಎಂದು ಗುರುತಿಸಲಾಗಿದೆ. ಭಗವಾನ್ ವಿಷ್ಣುವು ಕೇಂದ್ರ ದೇವತೆಯಾಗಿರುತ್ತಾರೆ. ಮಧ್ಯ ತ್ರಿಕೋನ ರಾಜಯೋಗದಿಂದ ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ. 


ಇದನ್ನೂ ಓದಿ : ಇನ್ನೊಂದು ವರ್ಷದವರೆಗೆ ಈ ರಾಶಿಯವರ ಜೀವನದಲ್ಲಿ ಅಕ್ಷಯ ಪಾತ್ರೆಯಂತೆ ಉಕ್ಕುವುದು ಧನ ಸಂಪತ್ತು!


ಶನಿಯು ಈ ರಾಶಿಯವರನ್ನು ಅತಿಯಾಗಿ ಹರಸುತ್ತಾನೆ : 
ವೃಷಭ ರಾಶಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳನ್ನು ನೀಡುತ್ತದೆ. ಈ ಸಮಯದಲ್ಲಿ ಉತ್ತಮ ಉದ್ಯೋಗ ಆಯ್ಕೆಗಳು ನಿಮ್ಮ ಮುಂದೆ ತೆರೆದು ಕೊಳ್ಳುತ್ತದೆ. ಈ ರಾಶಿಯವರು ಸಂತೋಷ, ಸಮೃದ್ಧಿ ಮತ್ತು ಐಷಾರಾಮಿ ಜೀವನವನ್ನು ನಡೆಸುವುದು ಸಾಧ್ಯವಾಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಉತ್ತಮ ಸಮಯ. ಕಚೇರಿಯಲ್ಲಿ ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳವಾಗಲಿದೆ.


ಮಿಥುನ ರಾಶಿ : 
ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಈ ರಾಶಿಯವರಿಗೆ  ಅನುಕೂಲಕರವಾಗಿರುತ್ತದೆ. ನಿಮ್ಮ ಜಾತಕದ ಒಂಭತ್ತನೇ ಮನೆಯಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಈ ಸಮಯದಲ್ಲಿ, ವ್ಯಕ್ತಿಯು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾನೆ. ನೀವು ಯಾವುದೇ ರೀತಿಯ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಈ ಅವಧಿಯು ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ, ಉತ್ತಮ ಫಲಿತಾಂಶ ಸಿಗಲಿದೆ. ಬಯಸಿದ ಕೆಲಸವನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ.


ಇದನ್ನೂ ಓದಿ : Strong Moon Benefits: ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿಯ ಜೊತೆಗೆ ಧನಲಾಭ!


ಸಿಂಹ  ರಾಶಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಶನಿಯ ನಡೆಯಲ್ಲಿನ ಬದಲಾವಣೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ನಿಯಮಿತ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಜಾತಕದಲ್ಲಿ 6 ನೇ ಮನೆಯನ್ನು ಶನಿಯು ಆಳುತ್ತಾನೆ. ಈ ಸಮಯದಲ್ಲಿ, ನೀವು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಕ್ತಿಯು ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಉದ್ಯೋಗಿಗಳಿಗೆ ಇನ್‌ಕ್ರಿಮೆಂಟ್‌ಗಳನ್ನು ಪಡೆಯುವ ಅವಕಾಶ ಸಿಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.